UPSC Recruitment: ‘ಯುಪಿಎಸ್ಸಿ ಸಿಎಂಎಸ್ 2022’ರ ಅಧಿಸೂಚನೆ ಪ್ರಕಟ; ಹುದ್ದೆ, ವೇತನ ಶ್ರೇಣಿ ಮೊದಲಾದ ವಿವರ ಇಲ್ಲಿದೆ
ಕೇಂದ್ರ ಲೋಕಸೇವಾ ಆಯೋಗವು (UPSC) ವೆಬ್‌ಸೈಟ್‌ನಲ್ಲಿ ‘ಕಂಬೈನ್ಡ್ ಮೆಡಿಕಲ್ ಸರ್ವಿಸಸ್ ಎಕ್ಸಾಮಿನೇಷನ್’ 2022 ಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 687 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
UPSC CMS Recruitment 2022: ಕೇಂದ್ರ ಲೋಕಸೇವಾ ಆಯೋಗವು (UPSC) ವೆಬ್‌ಸೈಟ್‌ನಲ್ಲಿ ‘ಕಂಬೈನ್ಡ್ ಮೆಡಿಕಲ್ ಸರ್ವಿಸಸ್ ಎಕ್ಸಾಮಿನೇಷನ್’ (Combined Medical Services- CMS) 2022 ಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. UPSC CMS ನೇಮಕಾತಿ 2022 ಪರೀಕ್ಷೆಗೆ ಆನ್‌ಲೈನ್ ಅರ್ಜಿಗಳನ್ನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ upsc.gov.in ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು UPSC CMS ಪರೀಕ್ಷೆ 2022 ಗಾಗಿ ತಮ್ಮ ಅರ್ಜಿಗಳನ್ನು 26 ಏಪ್ರಿಲ್ 2022 ರೊಳಗೆ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಗಳನ್ನು ಹಿಂಪಡೆಯಲು 2022ರ ಮೇ 04ರಿಂದ ಮೇ 10ರ ಸಂಜೆ 6.00 ರವರೆಗೆ ಕಾಲಾವಕಾಶವಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 687 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಅಧಿಸೂಚನೆಯ ಪ್ರಕಾರ, ಆಯೋಗವು UPSC CMS 2022 ಪರೀಕ್ಷೆಯನ್ನು 17 ಜುಲೈ 2022 ಕ್ಕೆ ನಿಗದಿಪಡಿಸಿದೆ. ಲಿಖಿತ ಪರೀಕ್ಷೆಗಳು ಮತ್ತು ಸಂದರ್ಶನಗಳ ನಂತರ ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಪ್ರಕ್ರಿಯೆ, ಶೈಕ್ಷಣಿಕ ಅರ್ಹತೆ, ಹೇಗೆ ಅರ್ಜಿ ಸಲ್ಲಿಸಬೇಕು, ಪಠ್ಯಕ್ರಮ ಇತ್ಯಾದಿಗಳನ್ನು ಪರಿಶೀಲಿಸಬಹುದು.
ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ:
ಅಧಿಸೂಚನೆಯ ಪ್ರಕಾರ ಒಟ್ಟು 687 ಹುದ್ದೆಗಳನ್ನು ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತದೆ. ವರ್ಗ-I ರಲ್ಲಿ 314 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ವರ್ಗ-IIರಲ್ಲಿ 300 ಹುದ್ದೆಗಳಿಗೆ ರೈಲ್ವೆಯಲ್ಲಿ ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ; ನವದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್‌ಗೆ 03 ಹುದ್ದೆಗಳು; ಮತ್ತು ಪೂರ್ವ, ಉತ್ತರ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ Gr-II ನಲ್ಲಿ 70 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
UPSC CMS 2022 ಗಾಗಿ PwBD ವರ್ಗಗಳಿಗೆ ಗುರುತಿಸಲಾದ ಸೇವೆಗಳು/ಪೋಸ್ಟ್‌ಗಳಿಗೆ ಹೆಚ್ಚಿನ ಹುದ್ದೆಗಳನ್ನು ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.
UPSC CMS 2022: ಅರ್ಹತೆ ಹೇಗೆ?
UPSC CMS, 2022 ಪರೀಕ್ಷೆ ಎದುರಿಸಲು ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು, ಅಥವಾ (b) ನೇಪಾಳ ಅಥವಾ (c) ಭೂತಾನ್ ಅಥವಾ (d) ಟಿಬೆಟಿಯನ್ ನಿರಾಶ್ರಿತರಾಗಿರಬೇಕು. 1962ರ ಜನವರಿ 1ಕ್ಕೂ ಮುನ್ನ ಕುಟುಂಬವು ಭಾರತದಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಬಂದಿರಬೇಕು. ಅಭ್ಯರ್ಥಿಯು ಅಂತಿಮ ಎಂಬಿಬಿಎಸ್ ಪರೀಕ್ಷೆಯ ಲಿಖಿತ ಮತ್ತು ಪ್ರಾಯೋಗಿಕ ಭಾಗಗಳಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ: 32 ವರ್ಷಗಳು; ಕೇಂದ್ರ ಆರೋಗ್ಯ ಸೇವೆಗಳಲ್ಲಿ ಜೂನಿಯರ್ ಟೈಮ್ ಸ್ಕೇಲ್ ಹುದ್ದೆಗಳಿಗೆ ಗರಿಷ್ಠ 35 ವರ್ಷಗಳು ಗಮನಿಸಿ: ಮೀಸಲಾತಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ ಹೇಗಿದೆ?
7ನೇ CPC ಅಡಿಯಲ್ಲಿ ಪೇ ಮ್ಯಾಟ್ರಿಕ್ಸ್‌ನ ಹಂತ 10 ರಲ್ಲಿ ರೂ.56,100/- (PB–3 ರೂ.15600-39100+GP ರೂ.5400/- ರಲ್ಲಿ ಪೂರ್ವ ಪರಿಷ್ಕೃತ ಸ್ಕೇಲ್‌ಗೆ ಅನುಗುಣವಾಗಿ). ಇದರೊಂದಿಗೆ NPA ಮತ್ತು ನಿಯಮಗಳ ಪ್ರಕಾರ ಇತರ ಸ್ವೀಕಾರಾರ್ಹ ಭತ್ಯೆಗಳನ್ನು ನೀಡಲಾಗುತ್ತದೆ.
ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು. ಹಂತಗಳನ್ನು ಕೆಳಗೆ ನೀಡಲಾಗಿದೆ.
- ಅಧಿಕೃತ ವೆಬ್‌ಸೈಟ್‌ಗೆ upsc.gov.in ಗೆ ಭೇಟಿ ನೀಡಿ
- ‘ಅಪ್ಲೆ ಆನ್‌ಲೈನ್’ ಬಟನ್ ಕ್ಲಿಕ್ ಮಾಡಿ.
- ಪರೀಕ್ಷೆಗೆ ನೋಂದಾಯಿಸಲು ವಿವರಗಳನ್ನು ನಮೂದಿಸಿ.
- ಯಶಸ್ವಿ ನೋಂದಣಿಯ ನಂತರ, ಲಾಗಿನ್ ಮಾಹಿತಿಗಳನ್ನು ಅಭ್ಯರ್ಥಿಗಳಿಗೆ ಕಳುಹಿಸಲಾಗುತ್ತದೆ. ಲಾಗಿನ್ ಮಾಡಲು ಅವುಗಳನ್ನು ಬಳಸಿ.
- ಈಗ, ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ಕೇಂದ್ರ ಆದ್ಯತೆ ಮತ್ತು ಇತರ ವಿವರಗಳನ್ನು ಒದಗಿಸುವ ಮೂಲಕ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಬಹುದು.
- ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
- UPSC CMS 2022 ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ. ಮುಂದೆ ಪರೀಕ್ಷೆಯ ಸಂದರ್ಭದಲ್ಲಿ ಉಲ್ಲೇಖಕ್ಕೆ ಅದನ್ನು ಬಳಸಬಹುದು.
ಇದನ್ನೂ ಓದಿ: JSSB Recruitment 2022: 8ನೇ ತರಗತಿ ಪಾಸಾದವರಿಗೆ JSSB ನಲ್ಲಿದೆ ಉದ್ಯೋಗಾವಕಾಶ
Indian Army Jobs 2022: 10ನೇ ತರಗತಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ