Indian Army Jobs 2022: 10ನೇ ತರಗತಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ

ಈ ನೇಮಕಾತಿಗಾಗಿ ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಅದಕ್ಕಾಗಿ ಅರ್ಜಿ ಡೌನ್​ಲೋಡ್ ಮಾಡಬೇಕು. ಅಲ್ಲದೆ ಈ ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

Indian Army Jobs 2022: 10ನೇ ತರಗತಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ
Indian Army Recruitment 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 03, 2022 | 7:33 PM

Indian Army Recruitment 2022: ಭಾರತೀಯ ಸೇನೆಯ ಪಯೋನೀರ್ ಕಾರ್ಪ್ಸ್ ತರಬೇತಿ ಕೇಂದ್ರ, ಬೆಂಗಳೂರು ಗ್ರೂಪ್ ಸಿ ಸಿವಿಲಿಯನ್ ವರ್ಗದ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಗ್ರೂಪ್ ಸಿ ನಾಗರಿಕ ವರ್ಗದ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ನಮೂನೆಯು ನೇಮಕಾತಿ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 21 ದಿನಗಳೊಳಗೆ (ಏಪ್ರಿಲ್ 3 ರಿಂದ) ನಿಗದಿತ ವಿಳಾಸಕ್ಕೆ ತಲುಪಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಗ್ರೂಪ್ ಸಿ ವರ್ಗದ ಅಡಿಯಲ್ಲಿ, ಬಾಣಸಿಗ, ಸಲಕರಣೆ ದುರಸ್ತಿ, ಮೆಸೆಂಜರ್ ಮತ್ತು ಹೌಸ್ ಕೀಪರ್ ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Indian Army Recruitment 2022: ಹುದ್ದೆಗಳ ವಿವರಗಳು: ಸಲಕರಣೆ ದುರಸ್ತಿ – 1 ಹುದ್ದೆ ಬಾಣಸಿಗ – 1 ಹುದ್ದೆ ಮೆಸೆಂಜರ್ – 1 ಹುದ್ದೆ ಹೌಸ್ ಕೀಪರ್ – 1 ಹುದ್ದೆ

Indian Army Recruitment 2022: ಶೈಕ್ಷಣಿಕ ಅರ್ಹತೆ ಸಲಕರಣೆ ದುರಸ್ತಿ – 10ನೇ ತರಗತಿ ಪಾಸಾಗಿರಬೇಕು. ಎಲ್ಲಾ ರೀತಿಯ ಕ್ಯಾನ್ವಾಸ್, ಜವಳಿ ಮತ್ತು ಚರ್ಮವನ್ನು ಸರಿಪಡಿಸಲು ಮತ್ತು ಉಪಕರಣಗಳು ಮತ್ತು ಬೂಟುಗಳನ್ನು ಬದಲಾಯಿಸಲು ಶಕ್ತರಾಗಿರಬೇಕು. ಬಾಣಸಿಗ – 10ನೇ ತೇರ್ಗಡೆಯಾಗಿರಬೇಕು. ಭಾರತೀಯರ ಅಡುಗೆಯಲ್ಲಿ ಪ್ರವೀಣರಾಗಿರಬೇಕು. ಮೆಸೆಂಜರ್ – 10 ನೇ ತೇರ್ಗಡೆಯಾಗಿರಬೇಕು. ಸಂಬಂಧಿತ ವಿಷಯದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು. ಹೌಸ್ ಕೀಪರ್ – 10 ನೇ ತರಗತಿ ಪಾಸಾಗಿರಬೇಕು. ಜೊತೆಗೆ ಒಂದು ವರ್ಷದ ಅನುಭವ ಹೊಂದಿರಬೇಕು.

Indian Army Recruitment 2022: ವೇತನ: ಸಲಕರಣೆ ದುರಸ್ತಿ – ರೂ. 18000 ರಿಂದ ರೂ. 56900/ ಬಾಣಸಿಗ – ರೂ. 19900 ರಿಂದ ರೂ. 63200/- ಮೆಸೆಂಜರ್ – ರೂ. 18000 ರಿಂದ ರೂ. 56900/- ಹೌಸ್ ಕೀಪರ್ – ರೂ. 18000 ರಿಂದ ರೂ. 56900/-

Indian Army Recruitment 2022: ವಯೋಮಿತಿ: ಈ ಹುದ್ದೆಗಳಿಗೆ 18 ರಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.

Indian Army Recruitment 2022: ಅರ್ಜಿ ಸಲ್ಲಿಸುವುದು ಹೇಗೆ? ಈ ನೇಮಕಾತಿಗಾಗಿ ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಅದಕ್ಕಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಡೌನ್​ಲೋಡ್ ಮಾಡಬೇಕು. ಅಲ್ಲದೆ ಈ ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

Indian Army Recruitment 2022: ಅರ್ಜಿ ಕಳುಹಿಸಬೇಕಾದ ವಿಳಾಸ: The Commandant, Pioneer Corps Training Centre, Post: Banaswadi, Bangalore-560033

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು