AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Govt Jobs 2022 : ಹಿಂದೂಸ್ತಾನ್ ಶಿಪ್‌ಯಾರ್ಡ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

Hindustan Shipyard Recruitment 2022: ಆಸಕ್ತರು ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ವೆಬ್‌ಸೈಟ್ www.hslvizag.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Govt Jobs 2022 : ಹಿಂದೂಸ್ತಾನ್ ಶಿಪ್‌ಯಾರ್ಡ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Hindustan Shipyard Recruitment 2022
TV9 Web
| Edited By: |

Updated on: Apr 07, 2022 | 10:41 PM

Share

Govt Jobs 2022 : ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್, ಪ್ರಾಜೆಕ್ಟ್ ಆಫೀಸರ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ವೆಬ್‌ಸೈಟ್ www.hslvizag.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಂದಹಾಗೆ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಿಗದಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ಮಾಡಲಾಗುತ್ತಿದೆ. ನೇಮಕಾತಿ ಜಾಹೀರಾತಿನ ಪ್ರಕಾರ, ಆನ್‌ಲೈನ್ ಅರ್ಜಿಯ ಪ್ರತಿಯನ್ನು ಸಹ ನಿಗದಿತ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು: ಪ್ರಾಜೆಕ್ಟ್ ಆಫೀಸರ್ ಟೆಕ್ನಿಕಲ್ – 4 ಹುದ್ದೆಗಳು ಪ್ರೊಜೆಕ್ಟ್ ಆಫೀಸರ್ ಎಚ್‌ಆರ್ – 1 ಹುದ್ದೆ ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಪ್ಲಾಂಟ್ ಮೆಂಟೆನೆನ್ಸ್ – 2 ಹುದ್ದೆಗಳು ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಸಿವಿಲ್ – 2 ಹುದ್ದೆಗಳು ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಟೆಕ್ನಿಕಲ್ – 10 ಹುದ್ದೆಗಳು ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಐಟಿ ಮತ್ತು ಇಆರ್‌ಪಿ – 2 ಹುದ್ದೆಗಳು ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಎಚ್‌ಆರ್ – 2 ಹುದ್ದೆಗಳು ಹಿರಿಯ ಸಲಹೆಗಾರ – ತಾಂತ್ರಿಕ – ದೆಹಲಿ ಕಚೇರಿ – 1 ಹುದ್ದೆ ಹಿರಿಯ ಸಲಹೆಗಾರ EKM ಜಲಾಂತರ್ಗಾಮಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಹೊರಗುತ್ತಿಗೆ – 1 ಹುದ್ದೆ ಕನ್ಸಲ್ಟೆಂಟ್ ಅಡ್ಮಿನಿಸ್ಟ್ರೇಷನ್ ದೆಹಲಿ ಕಚೇರಿ – 1 ಹುದ್ದೆ

ವೇತನ: ಯೋಜನಾ ಅಧಿಕಾರಿ – ತಿಂಗಳಿಗೆ ರೂ. 65,000/- ಉಪ ಯೋಜನಾಧಿಕಾರಿ- ರೂ.52000/- ಹಿರಿಯ ಸಲಹೆಗಾರ- ರೂ.1 ಲಕ್ಷ ಸಲಹೆಗಾರ- ರೂ.80 ಸಾವಿರ

ವಯೋಮಿತಿ: ಪ್ರಾಜೆಕ್ಟ್ ಆಫೀಸರ್- 40 ವರ್ಷಗಳು ಉಪ ಪ್ರಾಜೆಕ್ಟ್ ಆಫೀಸರ್- 35 ವರ್ಷಗಳು ಹಿರಿಯ ಸಲಹೆಗಾರ- 62 ವರ್ಷಗಳು ಸಲಹೆಗಾರ- 62 ವರ್ಷಗಳು

ಶೈಕ್ಷಣಿಕ ಅರ್ಹತೆ: ಪ್ರಾಜೆಕ್ಟ್ ಆಫೀಸರ್ – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ ಮತ್ತು ಸಂಬಂಧಿತ ಕೆಲಸದಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಹೊಂದಿರಬೇಕು. ಉಪ ಯೋಜನಾ ಅಧಿಕಾರಿ – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ ಮತ್ತು ಸಂಬಂಧಿತ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು. ಹಿರಿಯ ಸಲಹೆಗಾರರು – ಕನಿಷ್ಠ 60% ಅಂಕಗಳೊಂದಿಗೆ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿರಬೇಕು. ಜೊತೆಗೆ ಅಭ್ಯರ್ಥಿಗಳು ಕನಿಷ್ಠ 20 ವರ್ಷಗಳ ಅನುಭವವನ್ನು ಹೊಂದಿರಬೇಕು. ಸಲಹೆಗಾರ – ಯಾವುದೇ ವಿಭಾಗದಲ್ಲಿ ಪದವೀಧರ. ಅಲ್ಲದೆ ಕನಿಷ್ಠ 12 ವರ್ಷಗಳ ಅನುಭವ ಹೊಂದಿರಬೇಕು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್