UPSC Results: ಯುಪಿಎಸ್​ಸಿ ಸಿವಿಲ್ ಸರ್ವಿಸ್ ಎಕ್ಸಾಂ ಫಲಿತಾಂಶ ಪ್ರಕಟ: ಹೀಗೆ ಚೆಕ್ ಮಾಡಿ

ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಮಾರ್ಚ್ 17ರಿಂದ ವಿಸ್ತೃತ ಅರ್ಜಿ ನಮೂನೆ ಸಲ್ಲಿಸಬೇಕು. ವಿಸ್ತೃತ ಅರ್ಜಿ ಸಲ್ಲಿಕೆಗೆ ಮಾರ್ಚ್ 24 ಸಂಜೆ 6 ಗಂಟೆ ಕೊನೆಯ ದಿನ.

UPSC Results: ಯುಪಿಎಸ್​ಸಿ ಸಿವಿಲ್ ಸರ್ವಿಸ್ ಎಕ್ಸಾಂ ಫಲಿತಾಂಶ ಪ್ರಕಟ: ಹೀಗೆ ಚೆಕ್ ಮಾಡಿ
ಯುಪಿಎಸ್​ಸಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 18, 2022 | 7:45 AM

ಕೇಂದ್ರ ಲೋಕಸೇವಾ ಆಯೋಗವು (The Union Public Service Commission – UPSC) ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷಾ ಫಲಿತಾಂಶವನ್ನು (Civil Services (Main) Examination 2021) ಪ್ರಕಟಿಸಿದೆ. ಕಳೆದ ಜನವರಿಗೆ 7ರಿಂದ 16ರವರೆಗೆ ಈ ಪರೀಕ್ಷೆಗಳು ನಡೆದಿದ್ದವು. ಫಲಿತಾಂಶಗಳನ್ನು ಅಭ್ಯರ್ಥಿಗಳು ಯುಪಿಎಸ್​ಸಿ ಜಾಲತಾಣ upsc.gov.in ಮೂಲಕ ನೋಡಬಹುದು. ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಮಾರ್ಚ್ 17ರಿಂದ ವಿಸ್ತೃತ ಅರ್ಜಿ ನಮೂನೆ (Detailed Application Form – DAF) ಸಲ್ಲಿಸಬೇಕು. ವಿಸ್ತೃತ ಅರ್ಜಿ ಸಲ್ಲಿಕೆಗೆ ಮಾರ್ಚ್ 24 ಸಂಜೆ 6 ಗಂಟೆ ಕೊನೆಯ ದಿನ.

ಫಲಿತಾಂಶ ತಿಳಿಯಲು ಹೀಗೆ ಮಾಡಿ

1) ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ಜಾಲತಾಣ upsc.gov.inಗೆ ಭೇಟಿ ನೀಡಿ.

2) UPSC Mains result link 2021 ಲಿಂಕ್ ಕ್ಲಿಕ್ ಮಾಡಿ

3) ಅಭ್ಯರ್ಥಿಗಳ ಫಲಿತಾಂಶದ ವಿವರ ಇರುವ ಪಿಡಿಎಫ್​ ಪುಟ ತೆರೆದುಕೊಳ್ಳುತ್ತದೆ.

4) ಅರ್ಜಿಯನ್ನು ಡೌನ್​ಲೋಡ್ ಮಾಡಿಕೊಳ್ಳಿ. ಮುಂದಿನ ಪರಾಮರ್ಶೆಗಾಗಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಅರ್ಹ ಅಭ್ಯರ್ಥಿಗಳು ಪರ್ಸನಾಲಿಟಿ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಗರಿಷ್ಠ ಅಂಕಗಳು 2025. ಸಂದರ್ಶನಕ್ಕೆ 275 ಅಂಕಗಳನ್ನು ಮೀಸಲಿಡಲಾಗಿದೆ. ಅರ್ಹತೆಗಾಗಿ ಕನಿಷ್ಠ ಇಷ್ಟು ಅಂಕ ಪಡೆಯಬೇಕು ಎಂಬ ನಿಯಮಗಳು ಇಲ್ಲ. ಅಭ್ಯರ್ಥಿಗಳು ಸರ್ಕಾರ ನೀಡಿರುವ ಫೋಟೊ ಐಡಿ ಕಾರ್ಡ್, 2 ಪಾಸ್​ಪೋರ್ಟ್​ ಅಳತೆಯ ಫೋಟೊಗಳು, ವಯೋಮಿತಿ ರಿಯಾಯ್ತಿ ಕೋರುತ್ತಿದ್ದಲ್ಲಿ ಅದಕ್ಕೆ ಬೇಕಿರುವ ದಾಖಲೆಗಳು ಮತ್ತು ಇತರ ಅತ್ಯಗತ್ಯ ಅಂಕಪಟ್ಟಿಗಳನ್ನು ಸಂದರ್ಶನದ ವೇಳೆ ಹಾಜರುಪಡಿಸಬೇಕಾಗಬಹುದು.

ಯುಪಿಎಸ್​ಪಿ ಪ್ರತಿವರ್ಷ ಪರೀಕ್ಷೆಗಳನ್ನು ಮೂರು ಹಂತದಲ್ಲಿ ನಡೆಸುತ್ತದೆ. ಪ್ರಾಥಮಿಕ (ಪ್ರಿಲಿಮಿನರಿ), ಮುಖ್ಯ (ಮೇನ್ಸ್) ಮತ್ತು ಸಂದರ್ಶನ (ಇಂಟರ್ವ್ಯೂ) ಹಂತಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಐಎಎಎಸ್, ಐಪಿಎಸ್, ಐಎಫ್​ಎಸ್ ಮತ್ತು ಇತರ ಹುದ್ದೆಗಳು ಸಿಗುತ್ತವೆ. ಪ್ರತಿ ಅಭ್ಯರ್ಥಿಯು ಮೂರೂ ಹಂತದ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಅತ್ಯಗತ್ಯ.

ಇದನ್ನೂ ಓದಿ: IAS Success Story: ಮೊದಲನೇ ಬಾರಿಗೆ ಯುಪಿಎಸ್​ಸಿ ಪರೀಕ್ಷೆ ಉತ್ತೀರ್ಣ; 22ನೇ ವರ್ಷಕ್ಕೆ ಐಎಎಸ್ ಅಧಿಕಾರಿ

ಇದನ್ನು ಓದಿ: Aparna Ramesh: ಅಪ್ಪ ನಿವೃತ್ತ ಐಆರ್​ಎಸ್ ಅಧಿಕಾರಿ, ​ತಾಯಿ ಇಂಗ್ಲೀಷ್​ ಅಧ್ಯಾಪಕಿ; ಪುತ್ರಿ 35ನೇ Rank ಪಡೆದು ಐಎಎಸ್ ಆದರು! ​

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ