Aparna Ramesh: ಅಪ್ಪ ನಿವೃತ್ತ ಐಆರ್​ಎಸ್ ಅಧಿಕಾರಿ, ​ತಾಯಿ ಇಂಗ್ಲೀಷ್​ ಅಧ್ಯಾಪಕಿ; ಪುತ್ರಿ 35ನೇ Rank ಪಡೆದು ಐಎಎಸ್ ಆದರು! ​

UPSC Civil Services Examination 2020: ಯುಪಿಎಸ್​ಸಿ ಪರೀಕ್ಷೆಯಲ್ಲಿ 35ನೇ Rank ಪಡೆದಿರುವ ಬೆಂಗಳೂರು ಮೂಲದ ಅಪರ್ಣಾ ರಮೇಶ್​ ಅವರ ತಂದೆ ಭಾರತೀಯ ಕಂದಾಯ ಸೇವೆಗಳ ನಿವೃತ್ತ ಅಧಿಕಾರಿ ಮತ್ತು ತಾಯಿ ಇಂಗ್ಲೀಷ್​ನಲ್ಲಿ ಪಿಹೆಚ್. ​ಡಿ ಪಡೆದು, ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Aparna Ramesh: ಅಪ್ಪ ನಿವೃತ್ತ ಐಆರ್​ಎಸ್ ಅಧಿಕಾರಿ, ​ತಾಯಿ ಇಂಗ್ಲೀಷ್​ ಅಧ್ಯಾಪಕಿ; ಪುತ್ರಿ 35ನೇ Rank ಪಡೆದು ಐಎಎಸ್ ಆದರು! ​
ಅಪರ್ಣಾ ರಮೇಶ್
Follow us
Preethi Shettigar
| Updated By: preethi shettigar

Updated on:Sep 25, 2021 | 5:01 PM

ಕಳೆದ ಸಾಲಿನ ಭಾರತೀಯ ನಾಗರಿಕ ಸೇವೆಗಳ ಯುಪಿಎಸ್​ಸಿ 2020 ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ಮೂಲದ ಅಪರ್ಣಾ ರಮೇಶ್​ ಯುಪಿಎಸ್​​ಸಿ 2020ನೇ ಬ್ಯಾಚ್​ನಲ್ಲಿ 35ನೇ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಅಪರ್ಣಾ ರಮೇಶ್​ ಮೊದಲಿನಿಂದಲೂ ನಾಗರಿಕ ಸೇವೆಯಲ್ಲಿ ಉತ್ಸುಕರಾಗಿದ್ದು, ಇವರ ತಂದೆಯೇ ಇವರಿಗೆ ಸ್ಫೂರ್ತಿ ಎನ್ನುವುದು ಅವರ ಮೊದಲ ಮಾತು ಫಲಿತಾಂಶ ಪ್ರಕಟವಾದಾಗಿನಿಂದ ಮುಂದಿನ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಕುತೂಹಲದಿಂದಿರುವ ಅಪರ್ಣಾ, ಅಷ್ಟೇ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಯುಪಿಎಸ್​ಸಿ ಪರೀಕ್ಷೆಗಾಗಿ ಅಪರ್ಣಾ ಹೇಗೆ ಸಿದ್ಧತೆ ನಡೆಸಿದರು ಎಂಬುದರ ಬಗ್ಗೆ ಟಿವಿ9 ಡಿಜಿಟಲ್​ ಜೊತೆ ಹಂಚಿಕೊಂಡಿದ್ದಾರೆ.

ಕಠಿಣ ಪರಿಶ್ರಮವಿದ್ದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು. ಅಲ್ಲದೆ ಪ್ರಯತ್ನ ಪಟ್ಟಕೂಡಲೇ ಜಯ ಸಿಗಬೇಕು ಎನ್ನುವುದಕ್ಕಿಂತ ನಿರಂತರ ಪರಿಶ್ರಮ ಮುಂದೊಂದು ದಿನ ಸಫಲವಾಗುತ್ತದೆ ಎನ್ನುವುದಕ್ಕೆ ಅಪರ್ಣಾ ರಮೇಶ್ ಮಾದರಿ. ಮೊದಲ ಪ್ರಯತ್ನದಲ್ಲಿ ವಿಫಲವಾದರೂ 2ನೇ ಪ್ರಯತ್ನಕ್ಕೆ ಸಿಕ್ಕ ಜಯ ಈ ಯುಪಿಎಎಸ್​ಸಿ 2020ನೇ ಬ್ಯಾಚ್​ನಲ್ಲಿನ 35ನೇ ಶ್ರೇಣಿಯೇ ಸಾಕ್ಷಿ. ತಮ್ಮ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಇಂದು 35ನೇ ಶ್ರೇಣಿ ಪಡೆದಿದ್ದೇನೆ ಎಂದು ಮಾತು ಆರಂಭಿಸಿದ ಅಪರ್ಣಾ ತಮ್ಮ ಕಾಲೇಜು ವಿದ್ಯಾಭ್ಯಾಸದ ಬಗ್ಗೆ ಮಾತನಾಡಿದ್ದಾರೆ.

ನನ್ನ ಮಾತೃಭಾಷೆ ಕನ್ನಡ. ಆದರೆ ನಾನು ತಮಿಳುನಾಡು, ಮಹಾರಾಷ್ಟ್ರ ಮತ್ತು ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ ಎಂದು ಅಪರ್ಣಾ ರಮೇಶ್ ತಿಳಿಸಿದ್ದಾರೆ. ಅಪರ್ಣಾ ರಮೇಶ್ ಬೆಂಗಳೂರಿನಲ್ಲಿ 2 ವರ್ಷ ಕೆಲಸ ಮಾಡಿದ್ದಾರೆ. ಅದನ್ನು ಹೊರತುಪಡಿಸಿದರೆ ತಮ್ಮ ಶಾಲಾ ದಿನಗಳು ಅಥವಾ ಕಾಲೇಜ್ ಎಲ್ಲವನ್ನೂ ಬೇರೆ ರಾಜ್ಯಗಳಲ್ಲಿಯೇ ಕಳೆದಿದ್ದಾರೆ.

ಅಪರ್ಣಾ ರಮೇಶ್​ ಅವರ ತಂದೆ ಭಾರತೀಯ ಕಂದಾಯ ಸೇವೆಗಳ ನಿವೃತ್ತ ಅಧಿಕಾರಿ (Indian Revenue Service) ಮತ್ತು ತಾಯಿ ಇಂಗ್ಲೀಷ್​ನಲ್ಲಿ ಪಿಹೆಚ್​ಡಿ ಪಡೆದು ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಪರ್ಣಾ ರಮೇಶ್ ನಾಗ್ಪುರದಲ್ಲಿರುವ ವಿಶ್ವೇಶ್ವರಯ್ಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ವಿಷಯದಲ್ಲಿ 2015ರಲ್ಲಿ ಪದವಿ ಪಡೆದಿದ್ದಾರೆ. ಅಹಮದಾಬಾದ್​ನಲ್ಲಿರುವ ಸಿಇಪಿಟಿ ಯೂನಿವರ್ಸಿಟಿಯಲ್ಲಿ ನಗರ ಯೋಜನೆ ವಿಷಯದಲ್ಲಿ 2019ರಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದಲ್ಲಿ ಪ್ರತಿಷ್ಠಿತ ಫೆಲೋಶಿಪ್​ಗೆ 2020ರಲ್ಲಿ ಆಯ್ಕೆಯಾಗಿದ್ದರು.

2019ರಲ್ಲಿ ಸ್ನಾತಕೋತ್ತರ ಪದವಿಗೆ ಮೊದಲು 2019-20 ರಲ್ಲಿ ನಾಗರಿಕ ಸೇವೆಗೆ (civil service) ಪರೀಕ್ಷೆ ಬರೆದೆ. ಇದು ನನ್ನ ಎರಡನೇಯ ಪ್ರಯತ್ನ. ಈಗ ಯುಪಿಎಸ್​ಸಿ ಪರೀಕ್ಷೆಯಲ್ಲಿ 35ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಹೆಚ್ಚು ಖುಷಿ ನೀಡಿದೆ ಎನ್ನುತ್ತಾರೆ ಅಪರ್ಣಾ ರಮೇಶ್​.

ಇನ್ನು ಮೊದಲಿನಿಂದಲೂ ಸಿವಿಲ್​ ಸರ್ವಿಸಸ್​ ಬಗ್ಗೆ ಆಸಕ್ತಿ ಇತ್ತಾದರೂ ಈ ಬಗೆಗಿನ ಕನಸು ಚಿಗುರೊಡೆದಿದ್ದು, ತಂದೆಯಿಂದಲೇ ನನ್ನ ಈ ಸಾಧನೆಗೆ ಮುಖ್ಯ ಕಾರಣ ಅವರೇ. ಅವರೇ ನನಗೆ ಸ್ಫೂರ್ತಿ. ಅಲ್ಲದೇ ಸ್ಮಾರ್ಟ್ ಸಿಟಿ ಮಿಷನ್​ನಲ್ಲಿ ಭಾಗವಹಿಸಿದ್ದರಿಂದ ದೊರೆತ ಅವಕಾಶವೂ ನನಗೆ ವರವಾಯಿತು. ಇದು ನನಗೆ ಸಿವಿಲ್​ ಸರ್ವಿಸಸ್​ ಕಡೆಗೆ ಬರಲು ಸ್ಫೂರ್ತಿಯಾಯಿತು ಎನ್ನುವುದು ಇವರ ಮಾತು.

ಮುಖ್ಯವಾಗಿ ಇಲ್ಲಿ ಅತಿ ಓದಬೇಕು ಎಂಬ ಹಂಬಲ ನನ್ನದಾಗಿತ್ತು. ಹಾಗಾಗಿ ಯುಪಿಎಸ್​ಸಿ ಪರೀಕ್ಷೆಯಲ್ಲಿ 35ನೇ Rank ಪಡೆಯಲು ಸಾಧ್ಯವಾಯಿತು. ಆದರೆ ಮೊದಲು ಅಹಮದಾಬಾದ್​ನಲ್ಲಿ ನಾನು ಈ ವಿಷಯದ ಬಗ್ಗೆ ಗಮನಹರಿಸಿದಾಗ ಯಾವುದೇ ಕೋಚಿಂಗ್​ ಕ್ಲಾಸ್​ಗಳು ಇದಕ್ಕಾಗಿ ಇರಲಿಲ್ಲ. ಹೀಗಾಗಿ ನಾನೇ ಈ ಬಗ್ಗೆ ಹೆಚ್ಚು ಗಮನಹರಿಸಿ ಓದಿದ್ದೇನೆ ಎಂದು ಅವರು ಹೇಳಿದ್ದಾರೆ.

ಯುಪಿಎಸ್​ಸಿ ಪರೀಕ್ಷೆಯ ಸಿದ್ಧತೆ ಈ ಬಗ್ಗೆ ಹೇಳುವುದಾದರೆ ಆಂತ್ರೋಪಾಲಜಿ (Anthropology) ವಿಷಯಕ್ಕೆ ಸಂಬಂಧ ಪಟ್ಟಂತೆ ತರಬೇತಿ ತೆಗೆದುಕೊಂಡಿದ್ದೇನೆ. ಅದನ್ನು ಬಿಟ್ಟರೆ ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ ನಾನೇ ಸ್ವಂತ ಪರಿಶ್ರಮದಿಂದ ಓದಿದ್ದೇನೆ. ಇನ್ನು ನನ್ನ ಮುಂದಿನ ಆಯ್ಕೆ ಬಗ್ಗೆ ಮಾತನಾಡುವುದಾದರೆ ಮೊದಲ ಆದ್ಯತೆ ಐಎಎಸ್ ( Indian Administration Service). ಇದರಲ್ಲಿಯೇ ಮುಂದುವರಿಯುತ್ತೇನೆ ಎನ್ನುತ್ತಾರೆ ಅಪರ್ಣಾ.

ಇನ್ನಿತರ ಹವ್ಯಾಸ ಓದುವುದನ್ನು ಹೊರತು ಪಡಿಸಿದರೆ ಬೇರೆ ಬೇರೆ ಊರುಗಳಿಗೆ ಅಥವಾ ಸ್ಥಳಗಳಿಗೆ ಭೇಟಿ ನೀಡುವುದು ನನಗೆ ಹೆಚ್ಚು ಖುಷಿ ನೀಡುತ್ತದೆ. ಇನ್ನು ಮಿಕ್ಕ ಸಮಯದಲ್ಲಿ ಯೋಗಾಸನ ಮಾಡುತ್ತೇನೆ ಎಂದು ತಮ್ಮ ಹವ್ಯಾಸದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಪರ್ಣಾ ರಮೇಶ್​ ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ. ಆದಷ್ಟು ಬೇಗ ಬೆಂಗಳೂರಿಗೆ ಬರುತ್ತೇನೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಧಾನಿ ಅಭಿನಂದನೆ; ಫೇಲ್​ ಆದವರಲ್ಲೂ ಧೈರ್ಯ ತುಂಬಿದ ಮೋದಿ

ಯುಪಿಎಸ್​ಸಿ 2020: 35ನೇ ಶ್ರೇಣಿಯಲ್ಲಿ ಪಾಸಾದ ಬೆಂಗಳೂರು ಮೂಲದ ಅಪರ್ಣಾ ರಮೇಶ್!

(Aparna Ramesh who secured 35th Rank in UPSC Civil Services Examination 2020 spoke to TV9 Digital)

Published On - 4:45 pm, Sat, 25 September 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ