ಯುಪಿಎಸ್ಸಿ 2020: 35ನೇ ಶ್ರೇಣಿಯಲ್ಲಿ ಪಾಸಾದ ಬೆಂಗಳೂರು ಮೂಲದ ಅಪರ್ಣಾ ರಮೇಶ್!
ಅಪರ್ಣಾ ರಮೇಶ್ ನಾಗ್ಪುರದಲ್ಲಿರುವ ವಿಶ್ವೇಶ್ವರಯ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ವಿಷಯದಲ್ಲಿ 2015ರಲ್ಲಿ ಪದವಿ ಪಡೆದಿದ್ದಾರೆ. ಅಹಮದಾಬಾದ್ನಲ್ಲಿರುವ ಸಿಇಪಿಟಿ ಯೂನಿವರ್ಸಿಟಿಯಲ್ಲಿ ನಗರ ಯೋಜನೆ ವಿಷಯದಲ್ಲಿ 2019ರಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಬೆಂಗಳೂರು: ಅಪರ್ಣಾ ರಮೇಶ್ ಯುಪಿಎಸ್ಸಿ 2020 ನೇ ಬ್ಯಾಚ್ನಲ್ಲಿ 35ನೇ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇವರು ಬೆಂಗಳೂರು ಮೂಲದವರಾಗಿದ್ದು,ಪ್ರಸ್ತುತ ಗುರುಗ್ರಾಮದಲ್ಲಿ ನೆಲೆಸಿದ್ದಾರೆ. ಯುಪಿಎಸ್ಸಿನಲ್ಲಿ (UPSC Civil Services ) ನನ್ನ ಈ ಯಶಸ್ಸಿಗೆ ಅಪ್ಪ-ಅಮ್ಮನೇ ಕಾರಣ ಎಂದು ಅಪರ್ಣಾ ರಮೇಶ್ (Aparna Ramesh) ಪ್ರತಿಕ್ರಿಯಿಸಿದ್ದಾರೆ.
ಅಪರ್ಣಾ ರಮೇಶ್ ನಾಗ್ಪುರದಲ್ಲಿರುವ ವಿಶ್ವೇಶ್ವರಯ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ವಿಷಯದಲ್ಲಿ 2015ರಲ್ಲಿ ಪದವಿ ಪಡೆದಿದ್ದಾರೆ. ಅಹಮದಾಬಾದ್ನಲ್ಲಿರುವ ಸಿಇಪಿಟಿ ಯೂನಿವರ್ಸಿಟಿಯಲ್ಲಿ ನಗರ ಯೋಜನೆ ವಿಷಯದಲ್ಲಿ 2019ರಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದಲ್ಲಿ ಪ್ರತಿಷ್ಠಿತ ಫೆಲೋಶಿಪ್ಗೆ 2020ರಲ್ಲಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ವಿಜಯಪುರ: ಯುಪಿಎಸ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನೇತ್ರಾ ಮೇಟಿ ಹಾಗೂ ಸಾಗರ ವಾಡಿಗೆ ರ್‍ಯಾಂಕ್
UPSC: ಯುಪಿಎಸ್ಸಿ ಫಲಿತಾಂಶ ಪ್ರಕಟ; ಅಕ್ಷಯ್ ಸಿಂಹಗೆ 77ನೇ ರ್‍ಯಾಂಕ್, ಸಿರಿವೆನ್ನೆಲಗೆ 204ನೇ ರ್‍ಯಾಂಕ್