AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನೇತ್ರಾ ಮೇಟಿ ಹಾಗೂ ಸಾಗರ ವಾಡಿಗೆ ರ್‍ಯಾಂಕ್

UPSC Results: ವಿಜಯಪುರ ಜಿಲ್ಲೆಯ ನೇತ್ರಾ ಮೇಟಿ ಹಾಗೂ ಸಾಗರ ವಾಡಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ ಸ್ಥಾನ ಗಳಿಸಿದ್ದು, ಜಿಲ್ಲೆಯ ಜನರಿಗೆ ಕೀರ್ತಿ ತಂದಿದ್ದಾರೆ. ಈ ಕುರಿತು ಟಿವಿ9ನೊಂದಿಗೆ ಅವರು ಸಂತಸ ಹಂಚಿಕೊಂಡಿದ್ದಾರೆ.

ವಿಜಯಪುರ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನೇತ್ರಾ ಮೇಟಿ ಹಾಗೂ ಸಾಗರ ವಾಡಿಗೆ ರ್‍ಯಾಂಕ್
ಸಾಗರ ಎ ವಾಡಿ(ಎಡ), ನೇತ್ರಾ ಮೇಟಿ (ಬಲ)
TV9 Web
| Updated By: shivaprasad.hs|

Updated on: Sep 25, 2021 | 7:58 AM

Share

ವಿಜಯಪುರ: ಯುಪಿಎಸ್​ಸಿ ಫಲಿತಾಂಶ ಪ್ರಕಟವಾಗಿದ್ದು ವಿಜಯಪುರ ಜಿಲ್ಲೆಯ ಇಬ್ಬರು ತೇರ್ಗಡೆಯಾಗಿದ್ದಾರೆ. ವಿಜಯಪುರದ ವಿವೇಕ ನಗರದ ವಾಸಿ ನೇತ್ರಾ ಮೇಟಿ ಹಾಗೂ ಘೇವರಚಂದ ಕಾಲೋನಿಯ ಸಾಗರ ಎ ವಾಡಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ್ದಾರೆ. ನೇತ್ರಾ ಮೇಟಿ 326 ನೇ ರ್ಯಾಂಕ್ ಪಡೆದಿದ್ದರೆ, ಸಾಗರ ವಾಡಿ 385 ನೇ ರ್‍ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆಯಾಗಿದ್ದಾರೆ. ಇಬ್ಬರು ಸಾಧಕರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ನೇತ್ರಾ ಮೇಟಿ ತಂದೆ ತಾಯಿ ಹಾಗೂ ನೆರೆ ಹೊರೆಯವರು ಅವರಿಗೆ ಸಿಹಿ ತಿನ್ನಿಸಿ ಆಭಿನಂದಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಯುಪಿಎಸ್ಸಿಗಾಗಿ ಕಠಿಣ ಪರಿಶ್ರಮ ಪಟ್ಟಿದ್ದ ನೇತ್ರಾರಿಗೆ ಇಂದು ಪ್ರತಿಫಲ ಸಿಕ್ಕಿದೆ. ಕಳೆದ ವರ್ಷ ಸಂದರ್ಶನವರೆಗೂ ಹೋಗಿದ್ದ ಅವರಿಗೆ ಕೊನೆಯ ಕ್ಷಣದಲ್ಲಿ ಅವಕಾಶ ತಪ್ಪಿ ಹೋಗಿತ್ತು. ಬೆಂಗಳೂರಿನ‌ ಜೆ.ಎಸ್.ಎಸ್ ತರಬೇತಿ ಸಂಸ್ಥೆ ಹಾಗೂ ವಿವಿಧ ಆನ್​ಲೈನ್ ತರಬೇತಿ ಕೇಂದ್ರಗಳಲ್ಲಿ ನೇತ್ರಾ ತರಬೇತಿ ಪಡೆದಿದ್ದಾರೆ. ನೇತ್ರಾರಿಗೆ ಸಿಕ್ಕ ರ್ಯಾಂಕ್ ಆಧಾರದಲ್ಲಿ ಐಎಎಸ್ ಅಥವಾ ಐಎಫ್ಎಸ್ ನಲ್ಲಿ ಹುದ್ದೆ ಸಿಗೋ ಸಾಧ್ಯತೆಯಿದೆ, ಆದರೆ ಈಗಲೇ ಯಾವುದೆಂದು ಹೇಳಲಾಗದು ಎಂದು ನೇತ್ರಾ ಟಿವಿ9 ಗೆ ಮಾಹಿತಿ ನೀಡಿದ್ದಾರೆ.

ನೇತ್ರಾಳ ತಂದೆ ಬಾಲಚಂದ್ರ ಮೂಲತಃ ಬಾಗಲಕೋಟೆ ತಾಲೂಕಿನ‌ ರಾಂಪೂರ ಗ್ರಾಮವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತ ಜೀವನ ನಡೆಸುತ್ತಿದ್ದಾರೆ. ತಾಯಿ ಅಕ್ಕಮ್ಮ ಗೃಹಿಣಿ, ಬಾಲಚಂದ್ರ ಹಾಗೂ ಅಕ್ಕಮ್ಮರಿಗೆ ಮೂವರು ಹೆಣ್ಣು ಮಕ್ಕಳು ಮಾತ್ರ. ಮೊದಲ ಮಗಳು ಶ್ವೇತಾ ವಿವಾಹವಾಗಿ ರಾಜಧಾನಿ ಬೆಂಗಳೂರಿನ ಅಮೇಜಾನ್‌ ಕಂಪನಿಯಲ್ಲಿ ಎಚ್.ಆರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇ ಮಗಳೇ ನೇತ್ರಾ ಹಾಗೂ ಮೂರನೇ ಮಗಳು ಅನುಷಾ ಹುಬ್ಬಳ್ಳಿಯ ಕಿಮ್ಸ್ ನಲ್ಲಿ‌ ಎಂಬಿಬಿಎಸ್ ಓದುತ್ತಿದ್ದಾರೆ.

ನೇತ್ರಾ ಮೇಟಿ ಸಾಧನೆಯ ಹಾದಿ:

ನೇತ್ರಾ ಮೇಟಿ ಪಡೆದ ರ್ಯಾಂಕ್ ಹಿಂದೆ ಅಪಾರ ಪರಿಶ್ರಮವಿದೆ. ಅವರು ನಿತ್ಯ 5 ರಿಂದ 7 ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡಿದ್ದಾರೆ. ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯ ಹೇಮವೇಮ ಸಂಸ್ಥೆಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ಐದರಿಂದ ದ್ವಿತೀಯ ಪಿಯುಸಿವರೆಗೆ ವಿಜಯಪುರ ನಗರದ ಪಿಡಿಜೆ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಬೆಂಗಳೂರಿನ ಬಿಎಂಎಸ್ಸಿಇ ಬಸವಗುಡಿಯಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಶನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬೆಂಗಳೂರಿನ‌ ಮರ್ಸಿಡೀಸ್ ಬೆಂಜ್ ರಿಸರ್ಚ್ ಹಾಗೂ ಡೆವಲಪ್ಮೆಂಟ್ ನಲ್ಲಿ ಮೂರು ವರ್ಷ ಕೆಲಸ ಮಾಡಿದ ಅವರು, ಬಳಿಕ ರಾಜೀನಾಮೆ ನೀಡಿ 2015-16 ರಿಂದ ಯುಪಿಎಸ್ಸಿಗೆ ಸಿದ್ಧತೆ ಆರಂಭಿಸಿದ್ದಾರೆ. ಮಗಳ ಸಾಧನೆಗೆ ನೇತ್ರಾ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ತರಬೇತಿ ಪಡೆಯದೇ ಸ್ವಪ್ರಯತ್ನದಿಂದಲೇ 385ನೇ ಸ್ಥಾನ ಗಳಿಸಿದ ಸಾಗರ ವಾಡಿ: ಯುಪಿಎಸ್ಸಿಯಲ್ಲಿ 385 ನೇ ಸ್ಥಾನ ಪಡೆದ ವಿಜಯಪುರ ಜಿಲ್ಲೆಯ ಮತ್ತೋರ್ವ ಪ್ರತಿಭೆ ಸಾಗರ ವಾಡಿ ಅವರ ಮನೆಯಲ್ಲೂ ಸಂತಸದ ವಾತಾವರಣವಿದೆ. ಯಾವುದೇ ತರಬೇತಿ ಪಡೆಯದೇ ಸ್ವಪ್ರಯತ್ನದ ಮೂಲಕ ಸಾಗರ ವಾಡಿ ಯುಪಿಎಸ್ಸಿಯಲ್ಲಿ ಸಾಧನೆ ಮಾಡಿ ಜಿಲ್ಲೆಯ ಜನರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಸಾಗರ ವಾಡಿ ಮೂಲತಃ ಇಂಡಿ ತಾಲೂಕಿನ ಹಿಂಗನಿ ಗ್ರಾಮದವರಾಗಿದ್ದು ಸದ್ಯ ಕೆಲವು ವರ್ಷಗಳಿಂದ ಪೋಷಕರೊಂದಿಗೆ ವಿಜಯಪುರ ನಗರದ ಘೇರವಚಂದ್ ಕಾಲೋನಿಯಲ್ಲಿ ವಾಸವಿದ್ದಾರೆ.

ಸಾಗರ ವಾಡಿ ತಂದೆ ಅಮಗೊಂಡ ವಾಡಿ ಅವರು ದೇವರಹಿಪ್ಪರಗಿ ತಾಲೂಕಿನ ಕೋರವಾರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ವಿಜಯಲಕ್ಷ್ಮೀ ಗೃಹಿಣಿಯಾಗಿದ್ದಾರೆ. ಸಾಗರ ವಾಡಿ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದಲ್ಲಿ 1 ನೇ ತರಗತಿಯನ್ನು, ದೇವರಹಿಪ್ಪರಗಿ ತಾಲೂಕಿನ ಕೋರವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ 2- 5 ನೇ ತರಗತಿಯನ್ನು ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ 6 ರಿಂದ ದ್ವಿತೀಯ ಪಿಯುಸಿಯನ್ನು ನಿಡಗುಂದಿ ತಾಲೂಕಿನ ಆಲಮಟ್ಟಿಯ ನವೋದಯ ಶಾಲೆಯಲ್ಲಿ ಪೂರೈಸಿದ್ದಾರೆ. ಸುರತ್ಕಲ್ ನಲ್ಲಿ ಎಲೆಕ್ಟಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ನಲ್ಲಿ ಬಿಟೆಕ್ ಪದವಿ ಮುಗಿಸಿ, ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಪವರ್ ಗ್ರಿಡ್ ಎಲೆಕ್ಟ್ರಿಕಲ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಸಾಗರ ವಾಡಿ ಯುಪಿಎಸ್​ಸಿ ಯಲ್ಲಿ 385 ನೇ ಸ್ಥಾನ ಪಡೆದಿದ್ದು, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ವರದಿ: ಅಶೋಕ್ ಯಡಳ್ಳಿ, ವಿಜಯಪುರ

ಇದನ್ನೂ ಓದಿ:

ಯುಪಿಎಸ್​ಸಿ ಫಲಿತಾಂಶ ಪ್ರಕಟ; ಕರ್ನಾಟಕದ 35ಕ್ಕೂ ಅಧಿಕ ಅಭ್ಯರ್ಥಿಗಳು ಉತ್ತೀರ್ಣ, ಅಕ್ಷಯ್​ ಸಿಂಹಗೆ 77ನೇ ರ್‍ಯಾಂಕ್

Quad Summit | ವಿಶ್ವದ ಅಭ್ಯುದಯ ಮತ್ತು ಶಾಂತಿಗಾಗಿ ಕ್ವಾಡ್ ಶ್ರಮಿಸುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

(Netra Meti and Sagar Wadi from Vijayapura got rank in UPSC exams)

ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ