UPSC: ಯುಪಿಎಸ್​ಸಿ ಫಲಿತಾಂಶ ಪ್ರಕಟ; ಅಕ್ಷಯ್​ ಸಿಂಹಗೆ 77ನೇ ರ್‍ಯಾಂಕ್, ಸಿರಿವೆನ್ನೆಲಗೆ 204ನೇ ರ್‍ಯಾಂಕ್

UPSC Exam Results 2020: ಒಟ್ಟು 35 ಮಂದಿ ಕನ್ನಡಿಗರು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಕರ್ನಾಟಕದ ಅಕ್ಷಯ್ ಸಿಂಹ 77 ಸ್ಥಾನ ಗಳಿಸಿಕೊಂಡಿದ್ದಾರೆ.

UPSC: ಯುಪಿಎಸ್​ಸಿ ಫಲಿತಾಂಶ ಪ್ರಕಟ; ಅಕ್ಷಯ್​ ಸಿಂಹಗೆ 77ನೇ ರ್‍ಯಾಂಕ್, ಸಿರಿವೆನ್ನೆಲಗೆ 204ನೇ ರ್‍ಯಾಂಕ್
ಕರ್ನಾಟಕದ ಸಾಧಕ ಅಕ್ಷಯ್ ಸಿಂಹ

ದೆಹಲಿ: 2020ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ (UPSC) ಫಲಿತಾಂಶ ಪ್ರಕಟವಾಗಿದೆ. 545 ಪುರುಷರು ಮತ್ತು 216 ಮಹಿಳೆಯರು ಸೇರಿ 2020ನೇ ಸಾಲಿನಲ್ಲಿ ಒಟ್ಟು 761 ಅಭ್ಯರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಒಟ್ಟು 18 ಮಂದಿ ಕನ್ನಡಿಗರು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಕರ್ನಾಟಕದ ಅಕ್ಷಯ್ ಸಿಂಹ (ಕನ್ನಡದ ಹಿರಿಯ ಕತೆಗಾರ ಕೆ ಸತ್ಯನಾರಾಯಣ ಇವರ ದೊಡ್ಡಪ್ಪ) 77 ನೇ ಸ್ಥಾನ ಗಳಿಸಿಕೊಂಡಿದ್ದಾರೆ. ಇದು ಕರ್ನಾಟಕದ ಮಟ್ಟಿಗೆ ಪ್ರಥಮ Rank ಅನ್ನಬಹುದು. ಇನ್ನು, ಕರ್ನಾಟಕದಿಂದ ತೇರ್ಗಡೆಗೊಂಡ 35 ಅಭ್ಯರ್ಥಿಗಳ ಪೈಕಿ 15 ಅಭ್ಯರ್ಥಿಗಳು ಇಂಡಿಯಾ ಫಾರ್ ಐಎಎಸ್ ಸಂಸ್ಥೆಯಿಂದ ತರಬೇತಿ ಪಡೆದಿದ್ದಾರೆ. ಐಐಟಿ ಬಾಂಬೆಯ ಶುಭಂ ಕುಮಾರ್ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಜಾಗ್ರತಿ ಅವಸ್ಥಿಗೆ ಎರಡನೇ ರ್‍ಯಾಂಕ್, ಅಂಕಿತ್ ಜೈನ್ ಮೂರನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ತೇರ್ಗಡೆಗೊಂಡ ಕರ್ನಾಟಕದ ಕೆಲವು ಸಾಧಕರ ಪಟ್ಟಿ ಇಲ್ಲಿದೆ.
ಅಕ್ಷಯ್ ಸಿಂಹ 77 ಸ್ಥಾನ
ನಿಶ್ಚಯ ಪ್ರಸಾದ್ 130
ಸಿರಿವೆನ್ನೆಲ 204

ಅನಿರುಧ್ ಗಂಗಾವರಂ 252
ಸೂರಜ್ ಡಿ 255
ನೇತ್ರಾ ಮೇಟಿ 326
ಮೇಘಾ ಜೈನ್ 354
ಪ್ರಜ್ವಲ್ 367
ಸಾಗರ್ ಎ ವಾಡಿ 385
ನಾಗರೋಜೆ ಶುಭಂ ಬಾವುಸಾಬ್ 453
ಶಕೀರ್ ಅಹಮದ್ 583
ಪ್ರಮೋದ್ ಆರಾಧ್ಯ, 601
ಸೌರಭ್ 725
ವೈಶಾಖ ಬಾಗಿ 744
ಸಂತೋಷ್ ಎಚ್. 751

ಮತ್ತೊಬ್ಬ ಕನ್ನಡದ ಕತೆಗಾರರ ಪುತ್ರ ಸಿರಿವೆನ್ನೆಲಗೆ 204ನೇ Rank:
204ನೇ ಸ್ಥಾನ ಪಡೆದುಕೊಂಡ ಸಿರಿವೆನ್ನೆಲ ಅವರು  ಕನ್ನಡದ ಹಿರಿಯ ಕಥೆಗಾರ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಡೆಪ್ಯುಟಿ ಕಮೀಷನರ್ ಕೇಶವ ರೆಡ್ಡಿ ಹಂದ್ರಾಳ ಅವರ  ಎರಡನೆಯ ಪುತ್ರ. ಟಿವಿ9 ಕನ್ನಡ ಡಿಜಿಟಲ್ ಜತೆ ಸಂತಸ ಹಂಚಿಕೊಂಡ ಕೇಶವ ರೆಡ್ಡಿ ಹಂದ್ರಾಳ ಅವರು, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟ್ ಸಿಕ್ಕಿದ್ದರೂ ನನ್ನ ಪುತ್ರ ಸಿರಿವೆನ್ನೆಲ ಅವುಗಳಿಗೆ ಸೇರಲಿಲ್ಲ. ಬಿಎಸ್ಸಿ ಬಾಟನಿ, ಜ್ಯೂಯಾಲಜಿ ಮತ್ತು ಸೈಕಾಲಜಿ ಓದಿದ್ದ. ಪದವಿಯ ನಂತರ ಟಾಟಾ ಕಂಪನಿಯಿಂದ ಕೆಲಸಕ್ಕೆ ಆಹ್ವಾನ ಬಂದಿತ್ತು. ಆದರೆ ಆತ ಸೇರಲಿಲ್ಲ. ಯುಪಿಎಸ್​ಸಿ ಪರೀಕ್ಷೆಗೆ ಕಟ್ಟಿದ. 2017 ರ ಬ್ಯಾಚಿನಲ್ಲಿ 560 ನೇ ಸ್ಥಾನ ಗಳಿಸಿ Indian Defence Accounts ಗೆ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದ. 2021ನೇ ಸಾಲಿನಲ್ಲಿ 204 ನೇ ಸ್ಥಾನ ಗಳಿಸಿದ್ದಾನೆ. IPS ಅಥವಾ Indian Foreign Service ಸಿಗಲಿದೆ ಎಂದು ಅವರು ಆಶಿಸಿದರು.

Sirivennela gets 204th rank in upsc 2020

IDAS ಅಧಿಕಾರಿಯಾಗಿ ನಾಗಪುರದಲ್ಲಿ ಕೆಲಸ ಮಾಡುತ್ತಿದ್ದಾಗ ಡಿಫೆನ್ಸ್​ ಸೆಕ್ರೆಟರಿಯೇಟ್​​ನಿಂದ ಭಾರೀ ಪ್ರಶಂಸೆಗೊಳಗಾದ ಸಿರಿವೆನ್ನೆಲ, ಪ್ರಧಾನಿ ಮೋದಿಯಿಂದ ಪ್ರಶಸ್ತಿ ಸ್ವೀಕರಿಸಿದ ಘಳಿಗೆ.

ಇದನ್ನೂ ಓದಿ: 

ಪುರಸಭೆಯಲ್ಲಿ ಕಸ ಗುಡಿಸುವ ಮಹಿಳೆಯ ಕೈ ಹಿಡಿದ ಸರ್ಕಾರ! ಏನಿದು ಸ್ಟೋರಿ? ಆ ಮಹಿಳೆ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

Bank Deposits: ಬ್ಯಾಂಕ್​ ಠೇವಣಿಯಲ್ಲಿ ಪ್ರಗತಿ; ಎಷ್ಟಾಗಿದೆ ಎಂಬ ವಿವರಕ್ಕೆ ಇಲ್ಲಿದೆ ಆರ್​ಬಿಐ ಮಾಹಿತಿ

(UPSC 2020 Results anounced Shubham Kumar tops rank 761 candidates passed)

Read Full Article

Click on your DTH Provider to Add TV9 Kannada