ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು; ಬಿಜೆಪಿ ಸಚಿವರ ವಿವಾದಾತ್ಮಕ ಹೇಳಿಕೆ

Anand Swaroop Shukla | ರಾಮ, ಕೃಷ್ಣ ಮತ್ತು ಶಿವ ಮುಸ್ಲಿಮರ ಪೂರ್ವಜರಾಗಿದ್ದಾರೆ. ಮುಸ್ಲಿಮರು ಭಾರತದ ಭೂಮಿ ಮತ್ತು ಸಂಸ್ಕೃತಿಗೆ ತಲೆಬಾಗಬೇಕು ಎಂದು ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ

ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು; ಬಿಜೆಪಿ ಸಚಿವರ ವಿವಾದಾತ್ಮಕ ಹೇಳಿಕೆ
ಆನಂದ್ ಸ್ವರೂಪ್ ಶುಕ್ಲಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 24, 2021 | 7:59 PM

ನವದೆಹಲಿ: ಭಾರತದಲ್ಲಿ ವಾಸವಾಗಿರುವ ಮುಸ್ಲಿಮರು ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು, ಅದನ್ನು ಅಳವಡಿಸಿಕೊಳ್ಳಬೇಕು. ಹಿಂದೂಗಳ ದೇವರಾದ ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರೇ ಆಗಿದ್ದರು ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಆನಂದ್ ಸ್ವರೂಪ್ ಶುಕ್ಲಾ (Anand Swaroop Shukla) ವಿವಾದಕ್ಕೆ ತುತ್ತಾಗಿದ್ದಾರೆ. ಇಷ್ಟೇ ಅಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ಮೂಲಕ ಭಾರತದಲ್ಲಿ ಇಸ್ಲಾಮಿಕ್ ರಾಜ್ಯವನ್ನು ರಚಿಸುವ ಉದ್ದೇಶವನ್ನು ಮಣಿಸಿದ್ದಾರೆ ಎಂದು ಕೂಡ ಹೇಳಿದ್ದಾರೆ.

ಕಳೆದ ವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯ ಸಭೆಯ ಬಳಿಕ ಸಂಭಾಲ್​ ಘಾಜಿಗಳ ನಾಡು ಎಂಬ ವಿವಾದಾತ್ಮಕ ಪೋಸ್ಟರ್‌ಗಳನ್ನು ಸಂಭಾಲ್​ನಲ್ಲಿ ಅಂಟಿಸಿದ ಬೆನ್ನಲ್ಲೇ ಸಚಿವ ಸ್ವರೂಪ್ ಶುಕ್ಲಾ ಈ ಹೇಳಿಕೆ ನೀಡಿದ್ದಾರೆ. ಇಸ್ಮಾಮಿಕ್ ಉಗ್ರರು ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಈ ರೀತಿ ಹೇಳಿದ್ದಾಗಿ ಅವರು ಹೇಳಿದ್ದಾರೆ. ಇನ್ನೂ ಇಸ್ಲಾಮಿಕ್ ಮನಸ್ಥಿತಿಯ ಜನರಿದ್ದಾರೆ ಮತ್ತು ಅವರು ಸ್ಟುಪಿಡ್ ಆಗಿದ್ದಾರೆ. ಅವರ ಪೂರ್ವಜರು ಭಯದಿಂದ ಮುಸ್ಲಿಮರಾದರು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಈ ರೀತಿಯ ಯೋಚನೆಗಳು ಮತ್ತೆ ಹುಟ್ಟಲು ಸಾಧ್ಯವಿಲ್ಲ ಎಂದು ಸಚಿವ ಶುಕ್ಲಾ ಹೇಳಿದ್ದಾರೆ.

ರಾಮ, ಕೃಷ್ಣ ಮತ್ತು ಶಿವ ಮುಸ್ಲಿಮರ ಪೂರ್ವಜರಾಗಿದ್ದಾರೆ. ಅವರು ಕಾಬಾ ಭೂಮಿಯನ್ನು ನೋಡುವ ಅವಶ್ಯಕತೆಯಿಲ್ಲ. ಮುಸ್ಲಿಮರು ಭಾರತದ ಭೂಮಿ ಮತ್ತು ಸಂಸ್ಕೃತಿಗೆ ತಲೆಬಾಗಬೇಕು ಎಂದು ಉತ್ತರ ಪ್ರದೇಶದ ಸಚಿವ ಹೇಳಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್​ ವರದಿ ಮಾಡಿದೆ.

ಸಿರಿಯಾ ಮತ್ತು ಅಫ್ಘಾನಿಸ್ತಾನದ ನಂತರ ವಿವಿಧ ದೇಶಗಳ ಕೆಲವರು ಇಡೀ ಪ್ರಪಂಚವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ಬಯಸುತ್ತಾರೆ. ಭಾರತದಲ್ಲಿಯೂ ಕೆಲವರಿಗೆ ಈ ಮನಸ್ಥಿತಿ ಇದೆ. ಯೋಗಿ ಸರ್ಕಾರ ಮತ್ತು ಮೋದಿ ಸರ್ಕಾರ ಭಾರತದಲ್ಲಿ ಹಿಂದುತ್ವ ಹಾಗೂ ಭಾರತೀಯ ಸಂಸ್ಕೃತಿಯ ಧ್ವಜವನ್ನು ಹಾರಿಸಿದೆ ಹಾಗೂ ಮುಸ್ಲಿಮರ ಮನಸ್ಥಿತಿಯನ್ನು ಸೋಲಿಸಿದೆ ಎಂದು ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಸೀರೆಯಿಂದ ವಿವಾದಕ್ಕೀಡಾದ ದೆಹಲಿ ರೆಸ್ಟೋರೆಂಟ್​; ತಾನೇ ಮ್ಯಾನೇಜರ್​​ಗೆ ಹೊಡೆದು, ಸುಳ್ಳು ಆರೋಪ ಮಾಡಿದರಾ ಮಹಿಳೆ?

ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ; ದೂರು ದಾಖಲು

(Ram, Krishna, Shiva were ancestors of Indian Muslims Uttar Pradesh minister Anand Swaroop Shukla Controversial Statement)

Published On - 7:56 pm, Fri, 24 September 21