80 ಕೋಟಿ ರೂ. ಮೌಲ್ಯದ ಬಿಡಿಎ ಆಸ್ತಿ ತೆರವು ಕಾರ್ಯಕ್ಕೆ ತಡೆ; ಪ್ರಭಾವಿ ಸಚಿವ ವಿರುದ್ಧ ಗಂಭೀರ ಆರೋಪ

ನ್ಯಾಯಾಲಯದ ಆದೇಶದಂತೆ 80 ಕೋಟಿ ರೂ. ಮೌಲ್ಯದ ಒತ್ತುವರಿ ಜಾಗವನ್ನು ವಶಪಡಿಸಿಕೊಳ್ಳಲು ಹಾಗೂ ಒತ್ತುವರಿ ಜಾಗ ತೆರವು ಮಾಡಲು ಬಿಡಿಎ ಅಧಿಕಾರಿಗಳು ಮುಂದಾಗಿದ್ದರು. ಆದರೆ ಅಧಿಕಾರಿಗಳ ಕಾರ್ಯಾಚರಣೆಗೆ ಸರ್ಕಾರ ಮಟ್ಟದಲ್ಲಿ ಪ್ರಭಾವ ಬಳಸಿ ಒತ್ತುವರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂಬ ಆರೋಪವಿದೆ.

80 ಕೋಟಿ ರೂ. ಮೌಲ್ಯದ ಬಿಡಿಎ ಆಸ್ತಿ ತೆರವು ಕಾರ್ಯಕ್ಕೆ ತಡೆ; ಪ್ರಭಾವಿ ಸಚಿವ ವಿರುದ್ಧ ಗಂಭೀರ ಆರೋಪ
ಬಿಡಿಎ ಆಸ್ತಿ ತೆರವು ಕಾರ್ಯಕ್ಕೆ ತಡೆ

ಬೆಂಗಳೂರು: ಒತ್ತುವರಿಯಾಗಿದ್ದ 80 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ ಪಡೆಯಲು ಸಚಿವರೊಬ್ಬರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಬಿಡಿಎಗೆ (BDA) ಸೇರಿದ್ದ ಜಾಗವನ್ನು ವಶಪಡಿಸಿಕೊಳ್ಳಲು ಮುಂದಾದ ಅಧಿಕಾರಿಗಳಿಗೆ ಸರ್ಕಾರದ ಪ್ರಭಾವ ಬಳಸಿ, ಒತ್ತುವರಿ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಲಯದ ಆದೇಶದಂತೆ 80 ಕೋಟಿ ರೂ. ಮೌಲ್ಯದ ಒತ್ತುವರಿ ಜಾಗವನ್ನು ವಶಪಡಿಸಿಕೊಳ್ಳಲು ಹಾಗೂ ಒತ್ತುವರಿ ಜಾಗ ತೆರವು ಮಾಡಲು ಬಿಡಿಎ ಅಧಿಕಾರಿಗಳು ಮುಂದಾಗಿದ್ದರು. ಆದರೆ ಅಧಿಕಾರಿಗಳ ಕಾರ್ಯಾಚರಣೆಗೆ ಸರ್ಕಾರ ಮಟ್ಟದಲ್ಲಿ ಪ್ರಭಾವ ಬಳಸಿ ಒತ್ತುವರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂಬ ಆರೋಪವಿದೆ.

ಬೆಂಗಳೂರಿನ ಭೂಪಸಂದ್ರದ ಸರ್ವೆ ನಂಬರ್‌ 17 ರ ಒಂದು ಎಕರೆ ಜಾಗಕ್ಕೆ ಸಂಬಂಧಪಟ್ಟ ಪ್ರಕರಣ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ನಡೆದು ಬಿಡಿಎ ಪರ ತೀರ್ಪು ಬಂದಿತ್ತು. ಕೋರ್ಟ್ ಆದೇಶದಂತೆ ಒತ್ತುವರಿ ತೆರವು ಮಾಡಲು ಹೋಗಿದ್ದ ಬಿಡಿಎ ಅಧಿಕಾರಿಗಳು ಅಕ್ರಮವಾಗಿ ಈ ಜಾಗದಲ್ಲಿ ನಿರ್ಮಾಣ ಮಾಡಲಾಗಿದ್ದ ಕಾಂಪೌಂಡ್‌ ಮತ್ತು ಕೋಳಿ ಫಾರಂ ನೆಲಸಮ ಮಾಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ, ಈ ವಿಷಯಕ್ಕೆ ಸಂಬಂಧಪಡದೇ ಇದ್ದರೂ ಪ್ರಭಾವಿ ಸಚಿವರೊಬ್ಬರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೋರ್ಟ್ ಆದೇಶದ ಕಾರಣ ಸಚಿವರ ಒತ್ತಡಕ್ಕೆ ಅಧಿಕಾರಿಗಳು ಮಣಿಯದೆ ಇದ್ದಿದ್ದರಿಂದ, ಸಚಿವರು ಸರಕಾರದ ಮಟ್ಟದಲ್ಲಿ ತಮ್ಮ ಪ್ರಭಾವ ಬೀರಿ ತಡೆಯೊಡ್ಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:
ಸೀರೆಯಿಂದ ವಿವಾದಕ್ಕೀಡಾದ ದೆಹಲಿ ರೆಸ್ಟೋರೆಂಟ್​; ತಾನೇ ಮ್ಯಾನೇಜರ್​​ಗೆ ಹೊಡೆದು, ಸುಳ್ಳು ಆರೋಪ ಮಾಡಿದರಾ ಮಹಿಳೆ?

ಅಸ್ಸಾಂನಲ್ಲಿ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ, ಗುಂಡಿನ ದಾಳಿಗೆ ಇಬ್ಬರು ವ್ಯಕ್ತಿಗಳು ಸಾವು

(Serious allegations against influential minister who trying to stop eviction of BDA property in Bengaluru)

Read Full Article

Click on your DTH Provider to Add TV9 Kannada