ಕಾಮಾಕ್ಷಿಪಾಳ್ಯ ಬಳಿಕ, ರಾಜಗೋಪಾಲ ನಗರದಲ್ಲಿ ಗ್ರಾಹಕರ ನೆಪದಲ್ಲಿ ಬಂದ ಇಬ್ಬರು ಹಣ ಎಗರಿಸಿಕೊಂಡು ಹೋದರು!

TV9 Digital Desk

| Edited By: ಸಾಧು ಶ್ರೀನಾಥ್​

Updated on: Sep 25, 2021 | 11:18 AM

ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯು ಪೆಟ್ ಶಾಪ್ ಕ್ಯಾಶ್ ಡ್ರಾಯರ್ ಗೆ ಕೈ ಹಾಕಿ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಅದಾದ ಮೇಲೆ ಏನೂ ಪರ್ಚೇಸ್ ಮಾಡದೇ ಇಬ್ಬರೂ ವಾಪಾಸ್ ಆಗಿರುವುದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 11 ಶನಿವಾರ ಮಧ್ಯಾಹ್ನನ ವೇಳೆ ಘಟನೆ ನಡೆದಿದೆ. ಸದ್ಯ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮಾಕ್ಷಿಪಾಳ್ಯ ಬಳಿಕ, ರಾಜಗೋಪಾಲ ನಗರದಲ್ಲಿ ಗ್ರಾಹಕರ ನೆಪದಲ್ಲಿ ಬಂದ ಇಬ್ಬರು ಹಣ ಎಗರಿಸಿಕೊಂಡು ಹೋದರು!
ಕಾಮಾಕ್ಷಿಪಾಳ್ಯ ಬಳಿಕ, ರಾಜಗೋಪಾಲ ನಗರದಲ್ಲಿ ಗ್ರಾಹಕರ ನೆಪದಲ್ಲಿ ಬಂದ ಇಬ್ಬರು ಹಣ ಎಗರಿಸಿಕೊಂಡು ಹೋದರು!

Follow us on

ಬೆಂಗಳೂರು: ಕಾಮಾಕ್ಷಿಪಾಳ್ಯ ಬಳಿಕ, ರಾಜಗೋಪಾಲ ನಗರದಲ್ಲಿ ಗ್ರಾಹಕರ ನೆಪದಲ್ಲಿ ಬಂದ ಇಬ್ಬರು ಹಣ ಎಗರಿಸಿಕೊಂಡು ಹೋಗಿರುವ ಎರಡು ಪ್ರಕರಣಗಳು ಇತ್ತೀಚೆಗೆ ನಡೆದಿವೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರೂ ಕಸ್ಟಮರ್ ನೆಪದಲ್ಲಿ ಬಂದು, ಗಮನ ಬೇರೆಡೆ ಸೆಳೆದು ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ.

ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಆಂಜನೇಯ ಟೆಂಪಲ್ ಬಳಿ ನಡೆದಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ವಿನುತಾ ಎಂಬುವವರ ಪೆಟ್ ಶಾಪ್ ನಲ್ಲಿ ಘಟನೆ ನಡೆದಿದೆ. ಶ್ವಾನದ ಬೆಲ್ಟ್ ಪರ್ಚೇಸ್ ಮಾಡಲು ಇಬ್ಬರು ಬಂದಿದ್ದರು. ಈ ವೇಳೆ ಓರ್ವ ವ್ಯಕ್ತಿ ಫೋನ್ ನಲ್ಲಿ ಮಾತಾನಾಡುತ್ತಿದ್ದ. ಇನ್ನೋರ್ವ ವ್ಯಕ್ತಿ ಶ್ವಾನ ಬೆಲ್ಟ್ ನೋಡ್ತಿದ್ದ. ಈ ವೇಳೆ ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯಿಂದ ಕೃತ್ಯ ನಡೆದಿದೆ.

ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯು ಪೆಟ್ ಶಾಪ್ ಕ್ಯಾಶ್ ಡ್ರಾಯರ್ ಗೆ ಕೈ ಹಾಕಿ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಅದಾದ ಮೇಲೆ ಏನೂ ಪರ್ಚೇಸ್ ಮಾಡದೇ ಇಬ್ಬರೂ ವಾಪಾಸ್ ಆಗಿರುವುದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 11 ಶನಿವಾರ ಮಧ್ಯಾಹ್ನನ ವೇಳೆ ಘಟನೆ ನಡೆದಿದೆ. ಸದ್ಯ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕ್ತಿದ್ದಾರೆ. ಇನ್ನು, ಆರೋಪಿಗಳ ಕುಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಟಿವಿ ನೈನ್ ಗೆ ಲಭ್ಯವಾಗಿದೆ. ಇದಕ್ಕೂ ಮುನ್ನ, ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಚಿಕನ್ ಸೆಂಟರ್​ನಲ್ಲಿಯೂ ಇದೇ ಮಾದರಿಯ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

Also Read:
ಕಳ್ಳತನಕ್ಕೆ ಅಡ್ಡಿಯಾಗುತ್ತೆಂದು ಸಿಸಿ ಕ್ಯಾಮರಾ ಹೊಡೆದು ಹಾಕಿದ ಮಹಿಳೆ; ವಿಡಿಯೋ ನೋಡಿ

ಬೇರೆಯವರನ್ನ ಜಡ್ಜ್ ಮಾಡೋ ಮೊದಲು ನಿಮ್ಮ ಬಗ್ಗೆ ತಿಳಿದುಕೊಳ್ಳಿ|Dr.SowjanyaVasista|TV9 counselling

(diversion of attention 2 shoplift in bangalore by duo)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada