ಜಮೀನು ವಿವಾದ? ಲಾಂಗು ಮಚ್ಚುಗಳಿಂದ ಕೊಚ್ಚಿ ಕೆ.ಆರ್. ಪುರದಲ್ಲಿ ವ್ಯಕ್ತಿಯ ಬರ್ಬರ ಕೊಲೆ

TV9 Digital Desk

| Edited By: preethi shettigar

Updated on:Sep 25, 2021 | 1:45 PM

ಜಮೀನು ವಿಚಾರಕ್ಕೆ ವೆಂಕಟೇಶ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಸ್ಥಳಕ್ಕೆ ಆವಲಹಳ್ಳಿ ಮತ್ತು ಕೆ.ಆರ್.ಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಜಮೀನು ವಿವಾದ? ಲಾಂಗು ಮಚ್ಚುಗಳಿಂದ ಕೊಚ್ಚಿ ಕೆ.ಆರ್. ಪುರದಲ್ಲಿ ವ್ಯಕ್ತಿಯ ಬರ್ಬರ ಕೊಲೆ
ಕುಳ್ಳ ವೆಂಕಟೇಶ್
Follow us

ಬೆಂಗಳೂರು: ಜಮೀನು ವಿಚಾರಕ್ಕೆ ಸಂಬಂಧಿಸಿ ಆಟೋದಲ್ಲಿ ಬಂದ ಐವರು ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಬೆಂಗಳೂರು ಪೂರ್ವ ವಲಯದ ಮಾರ್ಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಲಾಂಗು ಮಚ್ಚುಗಳಿಂದ ಕೊಚ್ಚಿ ಕುಳ್ಳ ವೆಂಕಟೇಶ್ ಎಂಬಾತನನ್ನು ಆವಲಹಳ್ಳಿ ಠಾಣಾ ವ್ಯಾಪ್ತಿ ಮಾರ್ಗೊಂಡನಹಳ್ಳಿಯಲ್ಲಿ ಕೊಲೆ ಮಾಡಲಾಗಿದೆ. ಜಮೀನು ವಿಚಾರಕ್ಕೆ ವೆಂಕಟೇಶ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಸ್ಥಳಕ್ಕೆ ಡಿಸಿಪಿ ದೇವರಾಜ್, ಆವಲಹಳ್ಳಿ ಮತ್ತು ಕೆ.ಆರ್.ಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಆಟೋದಲ್ಲಿ ಬಂದ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕುಳ್ಳ ವೆಂಕಟೇಶ್​ಗೆ ಮೊದಲು ಡಿಕ್ಕಿ ಹೊಡೆದಿದ್ದಾರೆ. ಆತ ಕೆಳಗೆ ಬೀಳುತ್ತಿದ್ದಂತೆ ಲಾಂಗ್​ಗಳಿಂದ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಹತ್ಯೆಗೀಡಾದ ಕುಳ್ಳ ವೆಂಕಟೇಶ್, ರಾಮಮೂರ್ತಿ ನಗರದ ಬೋವಿ ಕಾಲೋನಿಯಲ್ಲಿ ವಾಸವಾಗಿದ್ದ. ಜಮೀನು ವಿಚಾರಕ್ಕೆ ಸಂಬಂಧಿಸಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು: ಅನ್ನಪೂರ್ಣೇಶ್ವರಿ ನಗರದಲ್ಲಿ ಪತ್ನಿ ಕೊಲೆ ಸೆ.22ರ ಸಂಜೆ ಪತಿ ತನ್ನ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ. ಈ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಾಂತರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಿದ್ದ ಕಾಂತರಾಜ್, ತನ್ನ ಪತ್ನಿ ರೂಪಳನ್ನು ಕೊಲೆ ಮಾಡಿದ್ದ. ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿ ಆರೋಪಿ ಪರಾರಿಯಾಗಿದ್ದ. ಆರೋಪಿಯನ್ನು ಎಪಿ ನಗರ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಕೊಲೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಪಕ್ಕಾ ಸಿನಿಮಾ ಸ್ಟೈಲ್​ನಲ್ಲಿ ಕೊಲೆಗೆ ಸ್ಕೆಚ್ ನಡೆದಿತ್ತು. ಹೆಂಡತಿಯ ಕೊಲೆಗೆ ಮನೆಯಲ್ಲೇ ಸ್ಕೆಚ್ ರೆಡಿಯಾಗಿತ್ತು ಅಂತ ವಿಚಾರಣೆ ನಡೆಸಿದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಫೈನಾಶ್ಸಿಯರ್ ಕಾಂತರಾಜ್ ರೂಪಾಳನ್ನು ವರಿಸಿದ್ದ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ದಂಪತಿ ವಾಸವಾಗಿದ್ದರು. ಆದರೆ ಗಂಡ ಕಾಂತರಾಜ್​ಗೆ ಹೆಂಡತಿ ರೂಪಾ ಮೇಲೆ ಅನುಮಾನವಿತ್ತು. ಪತ್ನಿ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವಿತ್ತು. ಇದರಿಂದ ತೀವ್ರ ಖಿನ್ನೆತೆಗೆ ಒಳಾಗಾಗಿದ್ದ ಪತಿ ಕಾಂತರಾಜ್ ಪತ್ನಿಯನ್ನು ಹತ್ಯೆಗೈದಿದ್ದಾನೆ.

ಹೆಂಡತಿ ರೂಪಾಳನ್ನು ಕೊಲೆ ಮಾಡಬೇಕು ಅಂತಾ ನಿರ್ಧರಿಸಿದ್ದ ಗಂಡ ಕಾಂತರಾಜ್, ಟ್ರಿಪ್ ಹೋಗೋಣ ಅಂತಾ ಪತ್ನಿಯೊಂದಿಗೆ ಕರಾವಳಿ ಭಾಗಕ್ಕೆ ಹೋಗಿದ್ದ. ಪ್ರಕೃತಿ ಸೌಂದರ್ಯ ನೋಡಿಸುವ ನೆಪದಲ್ಲಿ ಎತ್ತರಕ್ಕೆ ಕರೆದುಕೊಂಡು ಹೋಗಿದ್ದ. ಹೋಗಿ ಕೆಳಗೆ ತಳ್ಳಿ ಕೊಲೆ ಮಾಡಲು ಸ್ಕೇಚ್ ಹಾಕಿದ್ದ. ಮೂರು ದಿನ ಕೊಲೆ ಮಾಡೋಕೆ ಪ್ರಯತ್ನಿಸಿದ್ದರು ಅದು ಸಾಧ್ಯವಾಗಿರಲಿಲ್ಲ. ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡುವ ಪ್ಲಾನ್ ಕೂಡ ಇತ್ತು. ಆದರೆ ಅದು ಕೂಡ ಸಫಲವಾಗಲಿಲ್ಲ.

ಕೊನೆಗೆ ಕೋಪದಲ್ಲಿ ಕಾಂತರಾಜ್ ಮನೆಗೆ ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ನಂತರ ಮನೆಯ ಬಾಗಿಲು ಹಾಕಿಕೊಂಡು ಗಂಡ ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಎಪಿ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅನ್ನಪೂರ್ಣೇಶ್ವರಿ ನಗರದಲ್ಲಿ ಪತ್ನಿ ಕೊಲೆ ಪ್ರಕರಣ; ಸಿನಿಮೀಯ ಶೈಲಿಯಲ್ಲಿ ನಡೆದಿತ್ತು ಮರ್ಡರ್ ಸ್ಕೆಚ್

ಪತ್ನಿ ಮಾನಸಿಕ ಅಸ್ವಸ್ಥೆ ಆಗಿದ್ದಳು, ನನ್ನ ಕೊಲೆಗೆ ಯತ್ನಿಸಿದ್ದಳು: ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕರ್ ಪ್ರತಿಕ್ರಿಯೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada