ಪತ್ನಿ ಮಾನಸಿಕ ಅಸ್ವಸ್ಥೆ ಆಗಿದ್ದಳು, ನನ್ನ ಕೊಲೆಗೆ ಯತ್ನಿಸಿದ್ದಳು: ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕರ್ ಪ್ರತಿಕ್ರಿಯೆ
Crime News: ತಿಥಿ ಕಾರ್ಯ ಹಿನ್ನೆಲೆ ವಿಚಾರಣೆಗೆ 5ದಿನ ಸಮಯ ಕೇಳಿದ್ದೇನೆ. ಬದುಕುಳಿದ ಪ್ರೇಕ್ಷಾಳನ್ನು ಅಳಿಯನ ಮನೆಗೆ ಕಳುಹಿಸಿದ್ದೇನೆ ಎಂದು ಪೊಲೀಸರ ವಿಚಾರಣೆ ಬಳಿಕ ಹಲ್ಲೆಗೆರೆ ಶಂಕರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ನಗರದಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ಮಾನಸಿಕ ಅಸ್ವಸ್ಥೆ ಆಗಿದ್ದಳು, ನನ್ನ ಕೊಲೆಗೆ ಯತ್ನಿಸಿದ್ದಳು. ನನ್ನ ಪತ್ನಿ ವಿರುದ್ಧ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದೆ. ನನಗೆ ಯಾರ ಜೊತೆಯೂ ಅನೈತಿಕ ಸಂಬಂಧವಿಲ್ಲ ಎಂದು ಪೊಲೀಸರ ವಿಚಾರಣೆ ಬಳಿಕ ಹಲ್ಲೆಗೆರೆ ಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಬಗ್ಗೆ ಅಪಪ್ರಚಾರ ಬೇಡ, ನಾನು ಆ ರೀತಿಯ ವ್ಯಕ್ತಿ ಅಲ್ಲ. 2 ಬಾರ್ ಇರೋದು ನಿಜ, ಎಲ್ಲದಕ್ಕೂ ತೆರಿಗೆ ಕಟ್ಟುತ್ತಿದ್ದೇನೆ. ತಿಥಿ ಕಾರ್ಯ ಹಿನ್ನೆಲೆ ವಿಚಾರಣೆಗೆ 5ದಿನ ಸಮಯ ಕೇಳಿದ್ದೇನೆ. ಬದುಕುಳಿದ ಪ್ರೇಕ್ಷಾಳನ್ನು ಅಳಿಯನ ಮನೆಗೆ ಕಳುಹಿಸಿದ್ದೇನೆ ಎಂದು ಪೊಲೀಸರ ವಿಚಾರಣೆ ಬಳಿಕ ಹಲ್ಲೆಗೆರೆ ಶಂಕರ್ ಹೇಳಿಕೆ ನೀಡಿದ್ದಾರೆ.
ಶಂಕರ್ ಕುಟುಂಬದ ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತನಿಖೆ ಚುರುಕುಗೊಂಡಿತ್ತು. ಈ ವೇಳೆ, ಪ್ರತ್ಯೇಕವಾಗಿ ಬರೆದಿದ್ದ 27 ಪುಟಗಳ ಡೆತ್ನೋಟ್ ಪತ್ತೆಯಾಗಿತ್ತು. ಈ ಮೊದಲು ಮನೆಯಲ್ಲಿ 3 ಪ್ರತ್ಯೇಕ ಡೆತ್ನೋಟ್ ಪತ್ತೆಯಾಗಿತ್ತು. ಸಿಂಚನಾ ಎಂಬವರ ಕೊಠಡಿಯಲ್ಲಿ 4 ಪುಟಗಳ ಡೆತ್ನೋಟ್ ಸಿಕ್ಕಿತ್ತು. ಸಿಂಧೂರಾಣಿ ಕೊಠಡಿಯಲ್ಲಿ 4 ಪುಟದ ಡೆತ್ನೋಟ್ ಸಿಕ್ಕಿತ್ತು. ಇಬ್ಬರೂ ತಮ್ಮ ಗಂಡನ ಮನೆ ಮತ್ತು ತಂದೆ ವಿರುದ್ಧ ಆರೋಪ ಮಾಡಿದ್ದರು.
ಮಂಗಳೂರು: ಅಪರಿಚಿತನಿಂದ ತಲ್ವಾರ್ ದಾಳಿ; ಆತ ತನ್ನ ಹೆಸರು, ಉದ್ದೇಶವನ್ನು ಬಾಯಿ ಬಿಟ್ಟಿಲ್ಲ ಮಹಿಳೆಯರ ಮೇಲೆ ಅಪರಿಚಿತನಿಂದ ತಲ್ವಾರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗೆ ಬಂದ ಅಪರಿಚಿತ ಲೆಕ್ಚರರ್ ಹೆಸರು ಕೇಳಿದ್ದಾನೆ. ಆದ್ರೆ ಆ ಲೆಕ್ಚರರ್ ಯಾರೆಂದು ಅಲ್ಲಿದ್ದ ಸಿಬ್ಬಂದಿಗೆ ಗೊತ್ತಾಗಿಲ್ಲ. ಅವರಿಗೊಂದು ಗಿಫ್ಟ್ ಕೊಡುವುದಿದೆ ಎಂದು ಮಚ್ಚು ಬೀಸಿದ್ದಾನೆ. ಘಟನೆಯಲ್ಲಿ ಒಬ್ಬರು ಎಫ್ಡಿಎ, ಸ್ಟೆನ್ನೋಗ್ರಾಫರ್ ಮತ್ತು ಡಿ ಗ್ರೂಪ್ನ ಮಹಿಳಾ ಸಿಬ್ಬಂದಿಗೆ ಗಾಯವಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಪಕ್ಕದಲ್ಲಿದ್ದ ಜೈಲು ಸಿಬ್ಬಂದಿ, ಸ್ಥಳೀಯರು ಆತನನ್ನು ಹಿಡಿದು ಕೊಟ್ಟಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದೇವೆ. ಇದುವರೆಗೆ ಆತ ತನ್ನ ಹೆಸರು, ಉದ್ದೇಶವನ್ನು ಬಾಯಿ ಬಿಟ್ಟಿಲ್ಲ. ಮೂವರೂ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸರ್ಕಾರಿ ಕಚೇರಿಯಲ್ಲಿದ್ದ ಮೂವರು ಮಹಿಳೆಯರ ಮೇಲೆ ತಲ್ವಾರ್ನಿಂದ ಹಲ್ಲೆ
ಇದನ್ನೂ ಓದಿ: ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ ಪ್ರಕರಣ: ಪೊಲೀಸರಿಗೆ ಸಿಕ್ಕಿದ್ದು ಒಟ್ಟು 27 ಪುಟಗಳ ಡೆತ್ ನೋಟ್!