ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕ್​ಗೆ ವಂಚನೆ; ದಂಪತಿ ವಿರುದ್ಧ ದೂರು ದಾಖಲು

ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಗುರುತನ್ನು ಮರೆಮಾಚಿದ ದಂಪತಿ, ಬ್ಯಾಂಕಿಗೆ 12,85,000 ರೂ. ವಂಚನೆ ಮಾಡಿದ್ದಾರೆ. ಬೇರೆ ಬೇರೆ ಹೆಸರಿನಲ್ಲಿ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿ ಕಾರುಗಳನ್ನು ಖರೀದಿಸುತ್ತಿದ್ದರು.

ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕ್​ಗೆ ವಂಚನೆ; ದಂಪತಿ ವಿರುದ್ಧ ದೂರು ದಾಖಲು
ಕರ್ನಾಟಕ ಗ್ರಾಮೀಣ ಬ್ಯಾಂಕ್
Follow us
TV9 Web
| Updated By: guruganesh bhat

Updated on:Sep 25, 2021 | 7:06 PM

ನೆಲಮಂಗಲ: ನಕಲಿ ದಾಖಲೆ ಸೃಷ್ಟಿಸಿದ ದಂಪತಿ, ಬ್ಯಾಂಕ್​ನಿಂದ ಸಾಲ ಪಡೆದು ವಂಚನೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ದಂಪತಿ ವಂಚನೆ ಮಾಡಿದ್ದು, ಬ್ಯಾಂಕ್ ಮ್ಯಾನೇಜರ್ ಮಂಜುನಾಥ್, ದಂಪತಿ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿ ಹಲವು ಬ್ಯಾಂಕುಗಳಿಗೆ ವಂಚಸಿರುವ ಚನ್ನರಾಯಪಟ್ಟಣ ತಾಲ್ಲೂಕಿನ ದಿಲೀಪ್ ರಾಜೇಗೌಡ ಮತ್ತು ಪ್ರೀತಿ ಸದ್ಯ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಗುರುತನ್ನು ಮರೆಮಾಚಿದ ದಂಪತಿ, ಬ್ಯಾಂಕಿಗೆ 12,85,000 ರೂ. ವಂಚನೆ ಮಾಡಿದ್ದಾರೆ. ಬೇರೆ ಬೇರೆ ಹೆಸರಿನಲ್ಲಿ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿ ಕಾರುಗಳನ್ನು ಖರೀದಿಸುತ್ತಿದ್ದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೆಲಮಂಗಲದಲ್ಲಿ ಎರಡು ಸ್ವಿಫ್ಟ್ ಕಾರುಗಳನ್ನು ಪಡೆದು ಬ್ಯಾಂಕಿಗೆ ವಂಚನೆ ಮಾಡಿದ್ದಾರೆ. ಸಾಲ ಮರುಪಾವತಿ ಆಗದೆ ಇದ್ದಾಗ ಅಧಿಕಾರಿಗಳು ವಿಳಾಸಕ್ಕೆ ಭೇಟಿ ನೀಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ನೆಲಮಂಗಲ, ಬ್ಯಾಡರಹಳ್ಳಿ ಠಾಣೆಯಲ್ಲಿ ಬ್ಯಾಂಕ್​ಗಳಿಗೆ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಿಸಲಾಗಿದೆ. IPC 1860 (U/S 406,419,420,465, 468,471,120B,34)ರೀತ್ಯಾ ಕೇಸ್ ದಾಖಲಿಸಲಾಗಿದೆ.

ದಂಪತಿಗಳ ವಂಚನೆ ಪ್ರಕರಣ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಎಂ. ಮಂಜುನಾಥ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ವಿನಯ್.ಎಸ್, ಬಿನ್ ಶ್ರೀಧರ ಚಿನ್ನಪ್ಪ ಎಂಬ ವ್ಯಕ್ತಿ ನಮ್ಮ ಬ್ಯಾಂಕಿನ ಶಾಖೆಗೆ ಭೇಟಿ ಕೊಟ್ಟು ಉಳಿತಾಯ ಖಾತೆ ತೆರೆಯಲು ಕೇಳಿಕೊಳ್ಳಲಾಗಿ ಉಳಿತಾಯ ಖಾತೆ ತೆರೆಯಲು ಬೇಕಾದ ದಾಖಲಾತಿಗಳ ಮಾಹಿತಿ ನೀಡಿದ್ದು, ಆ ಸಮಯದಲ್ಲಿ, ಮೇಲ್ಕಂಡ ವ್ಯಕ್ತಿ ಒರಿಜಿನಲ್ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್​ಗಳು ಹಾಗೂ ಇವುಗಳ ಜೆರಾಕ್ಸ್​, ಪ್ರತಿ ತಂದಿದ್ದೇನೆಂದು ತಿಳಿಸಿ ನೀಡಿದ್ದರು. ಅದರಂತೆ ಅಂದಿನ ಮ್ಯಾನೇಜರ್​ ರವರು ಒರಿಜಿನಲ್ ಆಧಾರ್ ಮತ್ತು ಪಾನ್ ಕಾರ್ಡ್​ಗಳನ್ನು ಜೆರಾಕ್ಸ್, ಜೊತೆ ಹೋಲಿಕೆ ಮಾಡಿ ಮೇಲ್ಕಂಡ ವ್ಯಕ್ತಿಯ ಪೋಟೋಗಳನ್ನು ಪಡೆದು ಆತನ ಹೆಸರಿನಲ್ಲಿ ನಮ್ಮ ಬ್ಯಾಂಕಿನಲ್ಲಿ, ಉಳಿತಾಯ ಖಾತೆಯನ್ನು ತೆರೆದಿರುತ್ತಾರೆ. ಇದು ಉಳಿತಾಯ ಖಾತಾ ನಂ 12211100016220 ಆಗಿರುತ್ತದೆ.

ಇದಾದ ಬಳಿಕ ಬ್ಯಾಂಕಿನ ವ್ಯವಸ್ಥಾಪಕರನ್ನು ಕಂಡು ಕಾರಿನ ಸಾಲಕ್ಕೆ ಬೇಕಾದ ಎಲ್ಲ ದಾಖಲಾತಿಗಳನ್ನು ಒದಗಿಸಿ ತುರ್ತಾಗಿ ಸಾಲ ಮಂಜೂರು ಮಾಡಬೇಕೆಂದು ವಿನಂತಿಸಿಕೊಂಡಿದ್ದು, ವ್ಯವಸ್ಥಾಪಕರು ದಾಖಲೆಗಳನ್ನು ಪರಿಶೀಲಿಸಿ 07 ಲಕ್ಷ ರೂ. ಗಳನ್ನು ಮಂಜೂರು ಮಾಡಿದ್ದು, ಇದರ ಸಾಲದ ಖಾತೆ ಸಂಖ್ಯೆ: 124111100002935 ಬ್ಯಾಂಕ್ ಯಶವಂತಪುರ ಶಾಖೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ.

ಯುಟಿಆರ್ ನಂ ಕೆಆರ್​ಬಿಹೆಚ್​ 192943112515 ಆಗಿರುತ್ತದೆ. ಉಳಿದ ಹಣವನ್ನು ಕೊಟೇಷನ್​ನಲ್ಲಿ ವಿನಯ್. ಎಸ್ ಹೆಸರಿನವರೇ ಇರುವಂತೆ ಮೇ, ಅಕ್ಷತಾ ಮೋಟಾರ್ಸ್​ಗೆ ನಗದು ರೂಪದಲ್ಲಿ ಪಾವತಿಸಿದ್ದು, ಒಟ್ಟು ಮೊತ್ತ ಪಡೆದ ಬಗ್ಗೆ, ಅಕ್ಷತಾ ಮೋಟಾರ್ಸ್​ರವರಿಗೆ ಸಂದಾಯ ರಶೀದಿಯನ್ನು ಬ್ಯಾಂಕಿಗೆ ಸಲ್ಲಿಸಿರುತ್ತಾರೆ. ತದನಂತರ ಕಾರನ್ನು ಸುಪರ್ದಿಗೆ ಪಡೆದು ಕಾರಿನ ವಿಮೆ  ಪ್ರತಿಯನ್ನು ತಂದು ಬ್ಯಾಂಕಿಗೆ ಸಲ್ಲಿಸಿದ್ದಾರೆ. ಬಳಿಕ ಹಣ ಪಾವತಿಸದೇ ಇದ್ದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ನಂಜನಗೂಡು ಯುವತಿಗೆ ಪ್ರೀತಿ ಹೆಸರಲ್ಲಿ ವಂಚನೆ; ಮಂಗಳೂರು ನಿವಾಸಿ ಮೊಹಮ್ಮದ್ ಅಜ್ವಾನ್ ಬಂಧನ

ರಾಜಧಾನಿಯಲ್ಲಿ ನಿವೇಶನ ಮಾರಾಟ ನೆಪದಲ್ಲಿ ಮತ್ತೊಂದು ವಂಚನೆ ಪ್ರಕರಣ: ಪ್ರತಿಭಟನೆ, ರಾಜಾಜಿನಗರ ಪೊಲೀಸರಿಗೆ ದೂರು

Published On - 1:13 pm, Sat, 25 September 21