Drug Analyst Recruitment 2022 : ಔಷಧ ವಿಶ್ಲೇಷಕರು ಹುದ್ದೆಗೆ ಅರ್ಜಿ ಆಹ್ವಾನ

Drug Analyst Recruitment 2022 : ಔಷಧ ವಿಶ್ಲೇಷಕರು (ಬಾಟನಿ) ಮತ್ತು ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) ವಿಭಾಗಗಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಔಷಧ ವಿಶ್ಲೇಷಕರು (ಬಾಟನಿ) ಮತ್ತು ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) ವಿಭಾಗದಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ ಇದೆ.

Drug Analyst Recruitment 2022 : ಔಷಧ ವಿಶ್ಲೇಷಕರು ಹುದ್ದೆಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 18, 2022 | 7:12 PM

ಲೋಕಸೇವಾ ಆಯೋಗವು ಕರ್ನಾಟಕದ ನಾಗರಿಕ ಸೇವೆಯಲ್ಲಿ ಇರುವ ಹುದ್ದೆಗಳಲ್ಲಿ ಔಷಧ ವಿಶ್ಲೇಷಕರು (ಬಾಟನಿ) ಮತ್ತು ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) ವಿಭಾಗಗಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಔಷಧ ವಿಶ್ಲೇಷಕರು (ಬಾಟನಿ) ಮತ್ತು ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) ವಿಭಾಗದಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿದ್ದು, ತಕ್ಷಣವೇ  ಆಸಕ್ತರು “http:://kpsc.kar.nic.inಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 21ರಿಂದ ಪ್ರಾರಂಭಗೊಂಡು ಎಪ್ರಿಲ್ 20ಕ್ಕೆ ಕೊನೆಗೊಳ್ಳುವುದು ಮತ್ತು ಎಪ್ರಿಲ್ 21ಕ್ಕೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

ಹುದ್ದೆಯ ಹೆಸರು ಔಷಧ ವಿಶ್ಲೇಷಕರು (ಬಾಟನಿ) ಮತ್ತು ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ)
ಹುದ್ದೆಗಳು 2
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 21-03-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-04-2022
ಔಷಧ ವಿಶ್ಲೇಷಕರು (ಬಾಟನಿ) ವೇತನ ರೂ.30,350ರಿಂದ 58,250ವರೆಗೆ
ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) ರೂ.30,350ರಿಂದ 58,250/ವರೆಗೆ

ಅರ್ಜಿಸಲ್ಲಿಸುವ 3 ಹಂತಗಳು 

1. ಮೊದಲನೇ ಹಂತ: Profile Creation/Updation 2.ಎರಡನೇ ಹಂತ : Application Submission 3. ಮೂರನೇ ಹಂತ : Fees Payment through My Application section

ಶುಲ್ಕ

 ಸಾಮಾನ್ಯ ಅಭ್ಯರ್ಥಿಗಳಿಗೆ –  ರೂ.600/- ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಸೇರಿದ ಅಭ್ಯರ್ಥಿಗಳಿಗೆ – ರೂ.300/- ಮಾಜಿ ಸೈನಿಕ ಅಭ್ಯರ್ಥಿಗಳಿಗೆ –  ರೂ. 50/                                                                                                             ಪರಿಶಿಷ್ಟ ಜಾತಿ, ಪಂಗಡ ,ಪವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – ಶುಲ್ಕ ವಿಲಾಯಿತಿಗಳನ್ನು ನೀಡಲಾಗಿದೆ.

ವಿದ್ಯಾಹರ್ತೆ 

ಔಷಧ ವಿಶ್ಲೇಷಕರು (ಬಾಟನಿ)

  1. ಮಾನ್ಯತೆ ಪಡೆದ  ವಿಶ್ವವಿದ್ಯಾಲಯದಿಂದ  ವಿಜ್ಞಾನ ಬಾಟನಿಯಲ್ಲಿ ಸ್ನಾತಕೋತ್ತರ  ಪದವಿಯನ್ನು ಹೊಂದಿರಬೇಕು.
  2.  ಯಾವುದೇ ಗುರುತಿಸಲ್ಪಟ್ಟ ಅಥವಾ ಔಷಧ ವಿಶ್ಲೇಷಣೆ ಅನುಮೋದಿತ ಉತ್ಪಾದನಾ ಘಟಕ ಅಥವಾ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು

ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ)

  1. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ  ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  2. ಯಾವುದೇ ಗುರುತಿಸಲ್ಪಟ್ಟ ಅಥವಾ ಔಷಧ ವಿಶ್ಲೇಷಣೆ ಅನುಮೋದಿತ ಉತ್ಪಾದನಾ ಘಟಕ ಅಥವಾ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು