ICSIL Recruitment 2022: ಐಸಿಎಸ್​ಐಎಲ್​ನಲ್ಲಿನ ಕ್ರೀಡಾ ಕೋಚ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Jun 06, 2022 | 12:53 PM

ICSIL Recruitment 2022: ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.

ICSIL Recruitment 2022: ಐಸಿಎಸ್​ಐಎಲ್​ನಲ್ಲಿನ ಕ್ರೀಡಾ ಕೋಚ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs
Follow us on

ICSIL Recruitment 2022: ಭಾರತ ಸರ್ಕಾರದ ಇಂಟೆಲಿಜೆಂಟ್ ಕಮ್ಯುನಿಕೇಷನ್ಸ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL)ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೋಚ್, ಸಹಾಯಕ ಕೋಚ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅಧಿಸೂಚನೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ: 164

ಹುದ್ದೆಗಳ ಹೆಸರು: ಕೋಚ್, ಸಹಾಯಕ ಕೋಚ್ ಹುದ್ದೆಗಳು

ಇದನ್ನೂ ಓದಿ
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕ್ರೀಡೆ: ಫುಟ್ಬಾಲ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಕಬಡ್ಡಿ, ಟೆನಿಸ್, ಬಾಸ್ಕೆಟ್ ಬಾಲ್, ಕಬಡ್ಡಿ, ಬಾಕ್ಸಿಂಗ್, ಕ್ರಿಕೆಟ್, ಬಾಲ್, ಟೇಬಲ್ ಟೆನ್ನಿಸ್ ಇತ್ಯಾದಿ.

ವಯೋಮಿತಿ: ಅಭ್ಯರ್ಥಿಗಳು 40 ರಿಂದ 45 ವರ್ಷ ವಯಸ್ಸಿನವರಾಗಿರಬೇಕು.

ವೇತನ ಶ್ರೇಣಿ: ರೂ. ವೇತನ 46,374 ರಿಂದ 62,356 ರೂ.

ಅರ್ಹತೆಗಳು:
ಕೋಚಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಐ/ಎನ್‌ಎಸ್‌ಎನ್‌ಐಎಸ್ ಅರ್ಹ ವಿಶ್ವವಿದ್ಯಾಲಯಗಳಿಂದ ಕೋಚಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಅಥವಾ ಒಲಿಂಪಿಕ್ಸ್ / ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದಿರಬೇಕು. ಹಾಗೆಯೇ ಸಂಬಂಧಿತ ಕೆಲಸದಲ್ಲಿ ಅನುಭವವನ್ನೂ ಹೊಂದಿರಬೇಕು.

ಸಹಾಯಕ ಕೋಚ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಐ/ಎನ್‌ಎಸ್‌ಎನ್‌ಐಎಸ್ ಅರ್ಹ ವಿಶ್ವವಿದ್ಯಾಲಯಗಳಿಂದ ಕೋಚಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಅಥವಾ ಒಲಿಂಪಿಕ್ಸ್ / ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆ / ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾಗಿದ್ದರೂ ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಆ ಬಳಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 13, 2022.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:49 pm, Mon, 6 June 22