ತಕ್ಷಣವೇ, ಖಾಲಿ ಇರುವ ಪೊಲೀಸ್ ಹುದ್ದೆಗಳ ಭರ್ತಿ ಮಾಡಿಕೊಳೀ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಖಡಕ್​ ಸೂಚನೆ

| Updated By: ಸಾಧು ಶ್ರೀನಾಥ್​

Updated on: Nov 18, 2021 | 1:33 PM

ರಾಜ್ಯದಲ್ಲಿ ಸದ್ಯಕ್ಕೆ 1,142 ಪೊಲೀಸ್​ ಸಬ್​​ಇನ್ಸ್​​ಪೆಕ್ಟರ್​​, 4,460 ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇವೆ. ಕಾಲಮಿತಿಯಲ್ಲಿ ಖಾಲಿ ಹುದ್ದೆ ಭರ್ತಿ ಬಗ್ಗೆ 1 ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು.

ತಕ್ಷಣವೇ, ಖಾಲಿ ಇರುವ ಪೊಲೀಸ್ ಹುದ್ದೆಗಳ ಭರ್ತಿ ಮಾಡಿಕೊಳೀ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಖಡಕ್​ ಸೂಚನೆ
ಹೈಕೋರ್ಟ್
Follow us on

ಬೆಂಗಳೂರು: ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಹುದ್ದೆಗಳ ಭರ್ತಿ ವಿಚಾರವಾಗಿ ಹೈಕೋರ್ಟ್‌ನಲ್ಲಿ ಇಂದು ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ನಡೆಯಿತು. ಆ ವೇಳೆ, ಖಾಲಿ ಹುದ್ದೆಗಳ ಭರ್ತಿಗಾಗಿ 8 ತಿಂಗಳು ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಶೀಘ್ರವೇ ಹುದ್ದೆಗಳ ಭರ್ತಿ ಮಾಡಿಕೊಳೀ ಎಂದು ಹೈಕೋರ್ಟ್ ನಿರ್ದೇಶನ ನೀಡಿತು.

1 ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ:
ರಾಜ್ಯದಲ್ಲಿ ಸದ್ಯಕ್ಕೆ 1,142 ಪೊಲೀಸ್​ ಸಬ್​​ಇನ್ಸ್​​ಪೆಕ್ಟರ್​​, 4,460 ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇವೆ. ಹಾಗಾಗಿ ಭರ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ ಕೋರಿದ್ದ ರಾಜ್ಯ ಸರ್ಕಾರವನ್ನು ಕೋರ್ಟ್,​ ತರಾಟೆಗೆ ತೆಗೆದುಕೊಂಡಿತು. 2022ರ ಜುಲೈವರೆಗೆ ಕಾಲಾವಕಾಶ ಕೋರಿ, ರಾಜ್ಯ ಸರ್ಕಾರ ಅಲವತ್ತುಕೊಂಡಿತ್ತು. ಸರ್ಕಾರದ ಈ ಮನವಿಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು. ಕಾಲಮಿತಿಯಲ್ಲಿ ಖಾಲಿ ಹುದ್ದೆ ಭರ್ತಿ ಬಗ್ಗೆ 1 ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ ನೀಡಿತು.

ಇದನ್ನೂ ಓದಿ:
ನವ ಉದ್ಯಮಿಗಳಿಗಾಗಿ ಟಿವಿ9 ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ಆರಂಭವಾಗಿದೆ: ಪಾಲ್ಗೊಳ್ಳುವುದು ಹೇಗೆ? ವಿವರ ಇಲ್ಲಿದೆ ನೋಡಿ

(immediately recruit police department vacant seats orders karnataka high court to state government)