AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವ ಉದ್ಯಮಿಗಳಿಗಾಗಿ ಟಿವಿ9 ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ಆರಂಭವಾಗಿದೆ: ಪಾಲ್ಗೊಳ್ಳುವುದು ಹೇಗೆ? ವಿವರ ಇಲ್ಲಿದೆ ನೋಡಿ

TV9 Network and SAP India Dare2Dream Awards Season 3: ಎಂಎಸ್ಎಂಇ ವಲಯವು ಗಣನೀಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದು ಭಾರತದ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ಈ ದಿಸೆಯಲ್ಲಿ ಅಗ್ರಗಣ್ಯ ನವೋದ್ಯಮಿಗಳನ್ನು ಗುರುತಿಸಿ, ಪ್ರಶಂಸಿಸುವ ಸಮಯ ಇದಾಗಿದೆ. ಹಾಗಾಗಿ ಟಿವಿ9 ನೆಟ್​ವರ್ಕ್​ ಮತ್ತು SAP India ಒಟ್ಟುಗೂಡಿ ಡೇರ್​2ಡ್ರೀಮ್​ ಅವಾರ್ಡ್ಸ್​​ 3ನೆ ಸೀಸನ್ ಕಾರ್ಯಕ್ರಮ ಆರಂಭಿಸಿದೆ.

ನವ ಉದ್ಯಮಿಗಳಿಗಾಗಿ ಟಿವಿ9 ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ಆರಂಭವಾಗಿದೆ: ಪಾಲ್ಗೊಳ್ಳುವುದು ಹೇಗೆ? ವಿವರ ಇಲ್ಲಿದೆ ನೋಡಿ
ನವ ಉದ್ಯಮಿಗಳಿಗಾಗಿ ಟಿವಿ9 ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ಆರಂಭವಾಗಿದೆ: ಪಾಲ್ಗೊಳ್ಳುವುದು ಹೇಗೆ? ವಿವರ ಇಲ್ಲಿದೆ ನೋಡಿ
TV9 Web
| Updated By: ಸಾಧು ಶ್ರೀನಾಥ್​|

Updated on:Nov 10, 2021 | 4:42 PM

Share

ಭಾರತದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವು (ಎಂಎಸ್ಎಂಇ- MSMEs) ದೇಶದ ಪ್ರಗತಿ ಮತ್ತು ಉದ್ಯೋಗದ ಪ್ರಮುಖ ಪ್ರೇರಣಾ ಶಕ್ತಿಗಳಲ್ಲಿ ಒಂದಾಗಿದೆ. ಕೋವಿಡ್​ 19 ಸಾಂಕ್ರಾಮಿಕ ರೋಗದಂತಹ ಅಡೆತಡೆಗಳ ಹೊರತಾಗಿಯೂ ಎಂಎಸ್ಎಂಇ ವಲಯವು (Micro Small and Medium Enterprises -MSME sector) ಬಲಾಢ್ಯವಾಗಿ ಹೊರಹೊಮ್ಮಿದೆ. ಕಳೆದ ಕೆಲವೊಂದು ವರ್ಷಗಳಿಂದ ಎಂಎಸ್ಎಂಇ ವಲಯವು ಗಮನಾರ್ಹ ಪ್ರಗತಿಯನ್ನು ತೋರಿಸಿದೆ. ಎಂಎಸ್ಎಂಇ ವಲಯವು 2025ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್​ ಗಾತ್ರದ ಆರ್ಥಿಕತೆ ಸಾಧಿಸಲು ವೇಗವನ್ನು ಹೆಚ್ಚಿಸಬಹುದು. ಎಂಎಸ್ಎಂಇ ಸಚಿವಾಲಯವು (MSME Ministry) ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಸದ್ಯಕ್ಕೆ 6.3 ಕೋಟಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಇವೆಲ್ಲವೂ ಸೇರಿ ದೇಶದ ಜಿಡಿಪಿಗೆ ಶೇ. 29ರಷ್ಟು ಪಾಲು ನೀಡುತ್ತಿವೆ. ದೇಶದ ಒಟ್ಟಾರೆ ರಫ್ತಿನಲ್ಲಿ ಶೇ. 50ರಷ್ಟು ಪ್ರಮಾಣದ ರಫ್ತು ಎಂಎಸ್ಎಂಇ ವಲಯದಿಂದ ಆಗುತ್ತಿದೆ.

ಎಂಎಸ್ಎಂಇ ವಲಯವು ತನ್ನ ಸೇವಾ ಕ್ಷೇತ್ರ ಮತ್ತು ಉತ್ಪಾದನಾ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದು ಭಾರತದ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ಭಾರತದ ಸ್ವದೇಶಿ ಕೈಗಾರಿಕೆಗಳ ಯಶಸ್ಸನ್ನು ಸಂಭ್ರಮಿಸುವ ಮತ್ತು ಈ ದಿಸೆಯಲ್ಲಿ ಆತ್ಮನಿರ್ಭರ್​ ಭಾರತ್​​ ಯೋಜನೆಯ (AatmaNirbhar Bharat) ಅಗ್ರಗಣ್ಯರಾಗಿರುವ ನವೋದ್ಯಮಿಗಳ ಸಾಧನೆಗಳನ್ನು ಗುರುತಿಸಿ, ಪ್ರಶಂಸಿಸುವ ಸಮಯ ಇದಾಗಿದೆ.

ಈ ಸಾಧನೆಗಳ ಸಮ್ಮುಖದಲ್ಲಿ ಟಿವಿ9 ನೆಟ್​ವರ್ಕ್​ ಮತ್ತು SAP India ಒಟ್ಟುಗೂಡಿ ಡೇರ್​2ಡ್ರೀಮ್​ ಅವಾರ್ಡ್ಸ್​​ 3ನೆ ಸೀಸನ್ (TV9 Network and SAP India Dare2Dream Awards Season 3) ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಕೊರೊನಾ ಸಾಂಕ್ರಾಮಿಕದ ಸಂಕಷ್ಟ ಕಾಲವನ್ನು ಮೆಟ್ಟಿ ನಿಂತ ಉದ್ಯಮಿಗಳ ಯಶೋಗಾತೆಯನ್ನು ಗುರುತಿಸುವುದು ಇದರ ಧ್ಯೇಯವಾಗಿದೆ. ಈ ಕೈಗಾರಿಕೋದ್ಯಮಿ ನಾಯಕರು ಕೊರೊನಾ ಪಿಡುಗಿನ ಸಂಕಷ್ಟ ಕಾಲದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಂಡು, ಡಿಜಿಟಲ್​ ಟ್ರಾನ್ಸ್​​ಫಾರ್ಮೇಶನ್​ಗೆ ಮಣೆ ಹಾಕಿ,ಉತ್ಪನ್ನ ಅಭಿವೃದ್ಧಿ ತಂತ್ರಗಳು ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತಮ್ಮ ಕೈಗಾರಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಟಿವಿ9 ಡೇರ್​2ಡ್ರೀಮ್​ ಅವಾರ್ಡ್​ ವಿಭಾಗಗಳು ಹೀಗಿವೆ:

ಎರಡು ವಲಯಗಳಲ್ಲಿ (segment) ಒಟ್ಟು 15 ವಿಭಾಗಗಳಲ್ಲಿ (Categories) ಅವಾರ್ಡ್​​ಗಳನ್ನು ನೀಡಲಾಗುವುದು: 1. 75 ಕೋಟಿ ರೂಪಾಯಿಯಿಂದ 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿರುವ ಕೈಗಾರಿಕೆಗಳು 2. 150 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿರುವ ಮಧ್ಯಮ ಕಾರ್ಪೊರೇಟ್ ವಲಯ

15 ವಿಭಾಗಗಳು ಹೀಗಿವೆ:

1. ಕಂಪನಿ ಆಫ್​ ದಿ ಇಯರ್ – ವಲಯವಾರು ಪ್ರಶಸ್ತಿಗಳು ( ಪ್ರತಿ ವಲಯದಲ್ಲೂ 8-9 ಅವಾರ್ಡ್​​​ಗಳು) 2. ಎಮರ್ಜಿಂಗ್​ ಕಂಪನಿ ಆಫ್​ ದಿ ಇಯರ್​ 3. ತಂತ್ರಜ್ಞಾನ ಅಳವಡಿಸಿಕೊಂಡು ಉದ್ಯಮವನ್ನು ಮಾರ್ಪಾಡು ಮಾಡಿರುವ ಕೈಗಾರಿಕೆ

ಪ್ರೇರಣಾದಾಯಕ ನಾಯಕ: 1. ಯುವ ಉದ್ಯಮ ನಾಯಕ 2. ವರ್ಷದ ಮಹಿಳಾ ಉದ್ಯಮಿ 3. ವರ್ಷದ ಉದ್ಯಮಿ

ಭಾರತದ ಮುಂಚೂಣಿ ನ್ಯೂಸ್​ ಚಾನೆಲ್​ ಟಿವಿ9 ಭಾರತ್​​ವರ್ಷ್​ ​ದಲ್ಲಿ ಮತ್ತು ಟಿವಿ9 ನೆಟ್​ವರ್ಕ್​​ನ ನಾನಾ​​ ಡಿಜಿಟಲ್​ ವೇದಿಕೆಗಳಲ್ಲಿ ಪ್ರಶಸ್ತಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದು.

ಡೇರ್​2ಡ್ರೀಮ್​ ಅವಾರ್ಡ್ಸ್​​ ಸೀಸನ್​-3 ನಾಮಿನೇಶನ್​ ಈಗ ಆರಂಭವಾಗಿದೆ. ಭಾರತದ ಎಲ್ಲಾ ಸ್ವದೇಶಿ ಉದ್ಯಮಗಳು ಮತ್ತು ನವೋದ್ಯಮಿಗಳು ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಇಲ್ಲಿ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 2021 ನವೆಂಬರ್ 18 (ಗುರುವಾರ).

ಪಾಲ್ಗೊಳ್ಳಲು ಇಲ್ಲಿ ಕ್ಲಿಕ್​ ಮಾಡಿ .

Published On - 3:24 pm, Wed, 10 November 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ