
ಮೊಬೈಲ್ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ, ಆಪಲ್ ಹೆಸರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ.ಇದೀಗ ಈ ದೈತ್ಯ ಕಂಪೆನಿಗೆ ಹೊಸ COO ಆಗಿ ಭಾರತ ಮೂಲದ ಸಬಿಹ್ ಖಾನ್ ಅವರನ್ನು ನೇಮಕ ಮಾಡಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್ ನಗರದಲ್ಲಿ ಜನಿಸಿದ ಸಬಿಹ್ ಖಾನ್, ಟೆಕ್ ಜಗತ್ತಿನ ದೈತ್ಯ ಕಂಪೆನಿಯಲ್ಲಿ ಉನ್ನತ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಸಬಿಹ್ ಖಾನ್ 1995 ರಿಂದ ಆಪಲ್ ಕಂಪೆನಿ ಜೊತೆ ಅಂದರೆ ಅವರು ಕಳೆದ 30 ವರ್ಷಗಳಿಂದ ಈ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಕಂಪನಿಯ ಕಾರ್ಯಾಚರಣೆಗಳು ಮತ್ತು ಉತ್ಪಾದನಾ ವ್ಯವಸ್ಥೆಯನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ, ಸ್ವತಃ ಆಪಲ್ ಸಿಇಒ ಟಿಮ್ ಕುಕ್ ಕೂಡ ಅವರ ಕೆಲಸದ ಅಭಿಮಾನಿಯಾಗಿದ್ದೀನಿ ಎಂದು ಇತ್ತೀಚಿಗಷ್ಟೇ ಹೇಳಿಕೊಂಡಿದ್ದರು. ಈಗ ಸಬಿಹ್ ಖಾನ್ ಅವರನ್ನು ಕಂಪನಿಯ ಹೊಸ ಕಾರ್ಯಾಚರಣೆ ಮುಖ್ಯಸ್ಥರನ್ನಾಗಿ ಅಂದರೆ ಸಿಒಒ ಆಗಿ ನೇಮಿಸಲಾಗಿದೆ.
1966 ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದ ಸಬಿಹ್ ಖಾನ್ 10 ನೇ ವಯಸ್ಸಿನಲ್ಲಿ ಸಿಂಗಾಪುರಕ್ಕೆ ತೆರಳಿದರು. ಅಲ್ಲಿ ಅವರು ಟಫ್ಟ್ಸ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು ಮತ್ತು ಅರ್ಥಶಾಸ್ತ್ರ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ನಂತರ ಅವರು ರೆನ್ಸೆಲೇರ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಶಿಕ್ಷಣ ಸಂಸ್ಥೆ ಯಾವುದು ಗೊತ್ತಾ?
ಬ್ಯಾರನ್ ವರದಿಯ ಪ್ರಕಾರ, ಸಬಿಹ್ ಖಾನ್‌ಗಿಂತ ಮೊದಲು ಆಪಲ್‌ನ ಸಿಒಒ ಆಗಿದ್ದ ಜೆಫ್ ವಿಲಿಯಮ್ಸ್, ಮೂಲ ವೇತನ $1 ಮಿಲಿಯನ್ (ಸುಮಾರು ರೂ. 8 ಕೋಟಿ) ಪಡೆಯುತ್ತಿದ್ದರು. ಬೋನಸ್‌ಗಳು ಮತ್ತು ಇತರ ಸೌಲಭ್ಯಗಳನ್ನು ಸೇರಿಸಿದ ನಂತರ, ಅವರ ಒಟ್ಟು ಗಳಿಕೆ ವಾರ್ಷಿಕವಾಗಿ ಸುಮಾರು $23 ಮಿಲಿಯನ್ (ಸುಮಾರು ರೂ. 191 ಕೋಟಿ) ತಲುಪಿತ್ತು. ಅದರಂತೆ ಇದೀಗ ಸಬಿಹ್ ಖಾನ್ ಅವರ ಸಂಬಳವೂ ಕೂಡ ಅಷ್ಟೇ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಆಪಲ್ ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ