ಬೆಂಗಳೂರು: ಕರ್ನಾಟಕ ಪಶುವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಪಶುವೈದ್ಯಕೀಯ ಪರೀಕ್ಷಕರು (ಪಶು ವೈದ್ಯಕೀಯ ಸಹಾಯಕರು) ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆಯಾಗಿದೆ.
ಒಟ್ಟು 250 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ: 05-10-2022ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ
ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 750ರೂ. ಇತರೆ ಎಸ್‌ಸಿ / ಎಸ್‌ಟಿ / ಪ್ರವರ್ಗ-1 / ವಿಶೇಷ ಚೇತನ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ
ಪಶು ಆರೋಗ್ಯ (ಪಶುಸಂಗೋಪನೆ) ಡಿಪ್ಲೊಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ನಿರ್ದೇಶಕರು ವೃತ್ತಿ ಶಿಕ್ಷಣ, ಕರ್ನಾಟಕ ಸರ್ಕಾರವು ನಡೆಸಲಾದ ಡೈರಿ / ಪೌಲ್ಟ್ರಿಗೆ ಸಂಬಂಧಿಸಿದ ಎರಡು ವರ್ಷಗಳ ಉದ್ಯೋಗ ಆಧಾರಿತ ಕೋರ್ಸ್ (ಜೆ.ಒ.ಸಿ ಡೈರಿ / (ಪೌಲ್ಟ್ರಿ) ಕುಕ್ಕುಟ) ರಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
– ಕನಿಷ್ಠ 18 ವರ್ಷಗಳು
-ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು
-ಪ್ರವರ್ಗ 2ಎ, 2ಎ, 3ಬಿ, ಅಭ್ಯರ್ಥಿಗಳಿಗೆ 38 ವರ್ಷಗಳು
-ಪರಿಶಿಷ್ಟ ಜಾತಿ ಹಾಗೂ ಪಂಗಡ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಗಳು.
ನೇಮಕಾತಿ ವಿಧಾನ
ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ
100 ಅಂಕಗಳಿಗೆ 100 ಪ್ರಶ್ನೆಗಳ ಒಂದು ಲಿಖಿತ ಪ್ರಶ್ನೆ ಪತ್ರಿಕೆ ಇರುತ್ತದೆ. ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಇರುತ್ತದೆ. ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಳೆಯಲಾಗುತ್ತದೆ.
ವೇತನ ಶ್ರೇಣಿ:
21400-500-22400-550-24600-600-27000-650-29600-750-32600-850-36000-950-39800-1100-42000.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 05-10-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 04-11-2022
ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: 06-10-2022
ಅರ್ಜಿ ಸಲ್ಲಿಸುವ ಪ್ರಕ್ರಿಯೆ
– ಮೊದಲನೇ ಹಂತ: ಅಪ್ಲಿಕೇಶನ್ ಸಬ್‌ಮಿಷನ್
– ಎರಡನೇ ಹಂತ: ಫೋಟೋ ಮತ್ತು ಹೆಬ್ಬೆರಳು ಇಂಪ್ರೆಷನ್ ಅಪ್‌ಲೋಡ್ ಮಾಡುವುದು.
– ಮೂರನೇ ಹಂತ: ಶುಲ್ಕ ಪಾವತಿ ಮಾಡುವುದು.
– ನಾಲ್ಕನೇ ಹಂತ: ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳುವುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-23460460 ಗೆ ಸಂಪರ್ಕಿಸಬಹುದು.
ಇನ್ನಷ್ಟು ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:38 am, Sun, 25 September 22