ಯಾವುದೇ ಸೇವೆ, ಇಲಾಖೆ ಅಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡದಂತೆ ಕರ್ನಾಟಕ ಸರ್ಕಾರ ಅಧಿಸೂಚನೆ

| Updated By: ganapathi bhat

Updated on: Jul 30, 2021 | 5:14 PM

ಯಾವುದೇ ಸೇವೆ, ಇಲಾಖೆಯ ಅಧಿಕಾರಿಗಳನ್ನು ತಹಸೀಲ್ದಾರ್ ಹುದ್ದೆಗೆ ವರ್ಗಾವಣೆ, ನಿಯೋಜನೆ ಮತ್ತು ಸ್ಥಳ ನಿಯುಕ್ತಿಗೊಳಿಸದಂತೆ ರಾಜ್ಯ ಸರ್ಕಾರದ ಅಧಿಸೂಚನೆ ತಿಳಿಸಿದೆ.

ಯಾವುದೇ ಸೇವೆ, ಇಲಾಖೆ ಅಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡದಂತೆ ಕರ್ನಾಟಕ ಸರ್ಕಾರ ಅಧಿಸೂಚನೆ
ವಿಧಾನಸೌಧ
Follow us on

ಬೆಂಗಳೂರು: ಕರ್ನಾಟಕ ರಾಜ್ಯದ ಯಾವುದೇ ಸೇವೆ, ಇಲಾಖೆಯ ಅಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ, ನಿಯೋಜನೆ ಮತ್ತು ಸ್ಥಳ ನಿಯುಕ್ತಿಗೊಳಿಸದಂತೆ ಸರ್ಕಾರದಿಂದ ಇಂದು (ಜುಲೈ 30) ಅಧಿಸೂಚನೆ ಹೊರಡಿಸಲಾಗಿದೆ. ಜುಲೈ 22ರಂದು ನಡೆದಿದ್ದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ನಡೆಸಿದ್ದ ಕೊನೆಯ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿತ್ತು. ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದ ರಾಜ್ಯಸರ್ಕಾರ ಬಳಿಕ ಇಂದು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಅದರಂತೆ, ಯಾವುದೇ ಸೇವೆ, ಇಲಾಖೆಯ ಅಧಿಕಾರಿಗಳನ್ನು ತಹಸೀಲ್ದಾರ್ ಹುದ್ದೆಗೆ ವರ್ಗಾವಣೆ, ನಿಯೋಜನೆ ಮತ್ತು ಸ್ಥಳ ನಿಯುಕ್ತಿಗೊಳಿಸದಂತೆ ರಾಜ್ಯ ಸರ್ಕಾರದ ಅಧಿಸೂಚನೆ ತಿಳಿಸಿದೆ.

999 ಪೊಲೀಸ್ ಹೆಡ್​ಕಾನ್​ಸ್ಟೆಬಲ್ ವರ್ಗಾವಣೆ
ಒಂದೇ ಠಾಣೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲಾವಧಿ ಕರ್ತವ್ಯದಲ್ಲಿದ್ದ ಹೆಡ್​ಕಾನ್​ಸ್ಟೆಬಲ್​ಗಳ ವರ್ಗಾವಣೆಗೆ ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ನಿಶಾ‌ ಜೇಮ್ಸ್ ಆದೇಶ ಹೊರಡಿಸಿದ್ದರು. ಬೆಂಗಳೂರಿನ ಒಟ್ಟು 999 ಪೊಲೀಸ್ ಹೆಡ್​ಕಾನ್​ಸ್ಟೆಬಲ್ ವರ್ಗಾವಣೆಗೆ ಆದೇಶ ನೀಡಲಾಗಿದ್ದು, ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಲು ನಿರ್ದೇಶಿಸಲಾಗಿತ್ತು.

ಇದನ್ನೂ ಓದಿ: ಕಾಲೇಜು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಆರಂಭ; ವೇಳಾಪಟ್ಟಿ, ಮಾರ್ಗಸೂಚಿ ಇತರ ವಿವರ ಇಲ್ಲಿದೆ

ರೌಡಿ ಹಾವಳಿ ಹತ್ತಿಕ್ಕಲು ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಚರಿಸಲಿವೆ ಚೀತಾ, ಹೊಯ್ಸಳ; 999 ಹೆಡ್​ಕಾನ್​ಸ್ಟೆಬಲ್ಸ್​​ ವರ್ಗಾವಣೆ

(Karnataka Govt official notice on Tahashildar Post in Karnataka)

Published On - 5:09 pm, Fri, 30 July 21