ರೌಡಿ ಹಾವಳಿ ಹತ್ತಿಕ್ಕಲು ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಚರಿಸಲಿವೆ ಚೀತಾ, ಹೊಯ್ಸಳ; 999 ಹೆಡ್​ಕಾನ್​ಸ್ಟೆಬಲ್ಸ್​​ ವರ್ಗಾವಣೆ

ಕಮಾಂಡ್‌ ಸೆಂಟರ್ ಮೂಲಕ ಹೊಯ್ಸಳ ವಾಹನದ ಚಲನವಲನ ನಿಯಂತ್ರಣದಲ್ಲಿರಲಿದ್ದು, ಪ್ರತಿ ಐದು ಹತ್ತು ನಿಮಿಷಕ್ಕೊಮ್ಮೆ ಏರಿಯಾ ಬದಲು ಮಾಡಬೇಕು, ನಿಂತಲ್ಲಿ ನಿಲ್ಲದಂತೆ ಪ್ರತಿ ಏರಿಯಾದಲ್ಲಿ ಗಸ್ತು ಹೊಡೆಯಬೇಕು, ಪ್ರತಿ ಏರಿಯಾದ ಎಲ್ಲಾ ಆಗುಹೋಗುಗಳ ಬಗ್ಗೆ ನಿಗಾ ಇಡಬೇಕು ಎಂದು ಸೂಚಿಸಿದ್ದು, ಚೀತಾ ಸಿಬ್ಬಂದಿಗೂ ಇದೇ ರೀತಿ ಜವಾಬ್ದಾರಿ ವಹಿಸಲಾಗಿದೆ.

ರೌಡಿ ಹಾವಳಿ ಹತ್ತಿಕ್ಕಲು ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಚರಿಸಲಿವೆ ಚೀತಾ, ಹೊಯ್ಸಳ; 999 ಹೆಡ್​ಕಾನ್​ಸ್ಟೆಬಲ್ಸ್​​ ವರ್ಗಾವಣೆ
ಹೊಯ್ಸಳ ವಾಹನ (ಸಂಗ್ರಹ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 24, 2021 | 8:30 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುಡಾರಿಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತ ಪೊಲೀಸರು ಕಠಿಣ ಕ್ರಮಕ್ಕೆ ಸಿದ್ಧರಾಗಿದ್ದಾರೆ. ರೌಡಿಗಳನ್ನು (Rowdies) ನಿಯಂತ್ರಿಸುವ ಸಲುವಾಗಿ ಸ್ಥಳೀಯವಾಗಿ ಖಾಕಿ ಪಡೆಗೆ ಚುರುಕು ಮುಟ್ಟಿಸಲು ಮುಂದಾದ ಪೊಲೀಸ್ ಕಮಿಷನರ್ (Bengaluru Police Commissioner) , ತಳಮಟ್ಟದಲ್ಲಿ ಪೊಲೀಸಿಂಗ್ ವ್ಯವಸ್ಥೆಯನ್ನು ಬಿಗಿಗೊಳಿಸಲು ಮುಂದಾಗಿದ್ದಾರೆ. ಸರಗಳ್ಳತನ, ಸುಲಿಗೆ, ದರೋಡೆ, ಪುಂಡರ (Anti Social Elements) ಹಾವಳಿ ತಪ್ಪಿಸಲು ಹೊಸ ಕ್ರಮ ರೂಪಿಸುತ್ತಿರುವ ಪೊಲೀಸ್ ಕಮಿಷನರ್ ಹೊಯ್ಸಳ ಮತ್ತು ಚೀತಾ ವಾಹನಗಳಿಗೆ ಚುರುಕು ಮುಟ್ಟಿಸಿ ಪ್ರತಿ ಏರಿಯಾದಲ್ಲೂ ಕಣ್ಗಾವಲಿಡಲು ಸೂಚಿಸಿದ್ದಾರೆ. ಹೊಯ್ಸಳ ಮತ್ತು ಚೀತಾ ರೌಂಡ್ಸ್ ಮಾಡುವ ಏರಿಯಾದಲ್ಲಿ ಏನೇ ಆದರೂ ಅವರೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದು, ಪೊಲೀಸರು (Bengaluru Police) ಶಿಸ್ತುಬದ್ಧ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

ಅನ್​ಲಾಕ್ ಬಳಿಕ ಬೆಂಗಳೂರಿನಲ್ಲಿ ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸ ಹೆಚ್ಚಾಗಿರುವುದರಿಂದ ಪೊಲೀಸರು ಕಠಿಣ ಕ್ರಮದ ಮೊರೆ ಹೋಗಿದ್ದು, ಹೊಯ್ಸಳ ಮತ್ತು ಚೀತಾ ವಾಹನಗಳನ್ನು ಕಮಾಂಡ್ ಸೆಂಟರ್ ಮೂಲಕ ಅಪರೇಟ್ ಮಾಡಲು ನಿರ್ಧರಿಸಿದ್ದಾರೆ. ಠಾಣೆ ಸುಪರ್ದಿಯಿಂದ ಕಮಾಂಡ್‌ ಸೆಂಟರ್ ವ್ಯಾಪ್ತಿಗೆ ಹೊಯ್ಸಳ ಮತ್ತು ಚೀತಾ ವಾಹನಗಳನನ್ನು ಪಡೆಯಲು ಮುಂದಾದ ಕಮಿಷನರ್ ಕಮಲ್ ಪಂತ್, ಪುಂಡ ಪೋಕರಿಗಳ ಪುಂಡಾಟಕ್ಕೆ ಸಂಪೂರ್ಣ ತಡೆ ಒಡ್ಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಕಮಾಂಡ್‌ ಸೆಂಟರ್ ಮೂಲಕ ಹೊಯ್ಸಳ ವಾಹನದ ಚಲನವಲನ ನಿಯಂತ್ರಣದಲ್ಲಿರಲಿದ್ದು, ಪ್ರತಿ ಐದು ಹತ್ತು ನಿಮಿಷಕ್ಕೊಮ್ಮೆ ಏರಿಯಾ ಬದಲು ಮಾಡಬೇಕು, ನಿಂತಲ್ಲಿ ನಿಲ್ಲದಂತೆ ಪ್ರತಿ ಏರಿಯಾದಲ್ಲಿ ಗಸ್ತು ಹೊಡೆಯಬೇಕು, ಪ್ರತಿ ಏರಿಯಾದ ಎಲ್ಲಾ ಆಗುಹೋಗುಗಳ ಬಗ್ಗೆ ನಿಗಾ ಇಡಬೇಕು ಎಂದು ಸೂಚಿಸಿದ್ದು, ಚೀತಾ ಸಿಬ್ಬಂದಿಗೂ ಇದೇ ರೀತಿ ಜವಾಬ್ದಾರಿ ವಹಿಸಲಾಗಿದೆ.

ಹೊಯ್ಸಳ, ಚೀತಾ ಸಿಬ್ಬಂದಿ ಸುಖಾಸುಮ್ಮನೆ ಗಾಡಿ ಒಂದೆಡೆ ನಿಲ್ಲಿಸಿ ಹರಟೆ ಹೊಡೆಯುವಂತಿಲ್ಲ. ಕಮಾಂಡ್‌ ಸೆಂಟರ್​ನಿಂದ ಪ್ರತಿ ವಾಹನದ ಮೇಲೆ ನಿಗಾ ಇರಲಿದ್ದು, ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಐದಾರು ನಿಮಿಷದಲ್ಲಿ ತಲುಪುವಂತೆ ತಯಾರಿ ನಡೆಸಿಕೊಳ್ಳಬೇಕು. ಹೊಯ್ಸಳ ಮತ್ತು ಚೀತಾ ಎಲ್ಲಿದೆ ಎಂದು ಪ್ರತಿ ಕ್ಷಣ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಬೀಟ್ ಪೊಲೀಸ್ ವ್ಯವಸ್ಥೆ ಗಟ್ಟಿಯಾದಲ್ಲಿ ಅಪರಾಧ ಕೃತ್ಯಗಳನ್ನು ತಡೆಯಬಹುದು ಎಂದು ಈ ರೀತಿ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ.

999 ಪೊಲೀಸ್ ಹೆಡ್​ಕಾನ್​ಸ್ಟೆಬಲ್ ವರ್ಗಾವಣೆ: ಈ ಮಧ್ಯೆ, ಒಂದೇ ಠಾಣೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲಾವಧಿ ಕರ್ತವ್ಯದಲ್ಲಿದ್ದ ಹೆಡ್​ಕಾನ್​ಸ್ಟೆಬಲ್​ಗಳ ವರ್ಗಾವಣೆಗೆ ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ನಿಶಾ‌ ಜೇಮ್ಸ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಒಟ್ಟು 999 ಪೊಲೀಸ್ ಹೆಡ್​ಕಾನ್​ಸ್ಟೆಬಲ್ ವರ್ಗಾವಣೆಗೆ ಆದೇಶ ನೀಡಲಾಗಿದ್ದು, ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಲು ನಿರ್ದೇಶಿಸಲಾಗಿದೆ.

(Bengaluru Police to take strict action on Anti Social elements Hoysala and Cheetah vehicles on alert)

ಇದನ್ನೂ ಓದಿ: ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ 

ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ ಸೇರಿದಂತೆ 45 ರೌಡಿಶೀಟರ್ಸ್​ ಮನೆಗಳ ಮೇಲೆ ಸಿಸಿಬಿ ಪೊಲೀಸರ ರೇಡ್

Published On - 8:19 am, Sat, 24 July 21

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್