ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ

Crime News: ಕಕ್ಕರಗೊಳ್ಳ ಗ್ರಾಮದ ನಿವಾಸಿ 48 ವರ್ಷದ ರೇವಣಸಿದ್ದಪ್ಪ ಎಂಬಾತ ಬಂಧಿತ ಆರೋಪಿ ಆಗಿದ್ದಾನೆ. ಆರೋಪಿಯಿಂದ 4.10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ
ಪೊಲೀಸ್ ಡಾಗ್ ತುಂಗಾ
Follow us
TV9 Web
| Updated By: ganapathi bhat

Updated on:Jul 21, 2021 | 10:30 PM

ದಾವಣಗೆರೆ: ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡಿದ್ದ ಹೇಯ ಕೃತ್ಯ ಇದೇ ತಿಂಗಳ 18ನೇ ತಾರೀಖಿನಂದು ನಡೆದಿತ್ತು. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಘಟನೆ ನಡೆದಿತ್ತು. ಮನೆಯಲ್ಲಿದ್ದ ಒಂಟಿ ವೃದ್ಧೆ, 75 ವರ್ಷದ ಗೌರಮ್ಮ ಎಂಬಾಕೆಯನ್ನು ಹತ್ಯೆ ಮಾಡಲಾಗಿತ್ತು. ಈ ಕೃತ್ಯಕ್ಕೆ ಸಂಬಂಧಿಸಿ ಆರೋಪಿ ಪತ್ತೆಹಚ್ಚುವಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಒಂಟಿ ವೃದ್ಧೆ ಕೊಲೆ ಪ್ರಕರಣವನ್ನು ಪೊಲೀಸ್ ಶ್ವಾನ ಪತ್ತೆ ಮಾಡಿದೆ.

ಪೊಲೀಸ್ ಶ್ವಾನ ತುಂಗಾ ಒಂಟಿ ವೃದ್ದೆ ಕೊಲೆ ಪ್ರಕರಣ ಪತ್ತೆ ಹಚ್ಚಿದೆ. ದಾವಣಗೆರೆ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಘಟನೆ ಸಂಭವಿಸಿದೆ. ಕಕ್ಕರಗೊಳ್ಳ ಗ್ರಾಮದ ನಿವಾಸಿ 48 ವರ್ಷದ ರೇವಣಸಿದ್ದಪ್ಪ ಎಂಬಾತ ಬಂಧಿತ ಆರೋಪಿ ಆಗಿದ್ದಾನೆ. ಆರೋಪಿಯಿಂದ 4.10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಪೊಲೀಸ್ ತಂಡ ಶ್ವಾನದಳದ ತುಂಗಾಳೊಂದಿಗೆ ಘಟನಾ ಸ್ಥಳದ ಪರಿಶೀಲನೆ ನಡೆಸಿತ್ತು. ಈ ವೇಳೆ ತುಂಗಾ ಹೆಸರಿನ ಶ್ವಾನವೇ ಕೊಲೆಗಾರನ ಸುಳಿವನ್ನು ಕೂಡ ನೀಡಿತ್ತು. ಬಳಿಕ, ವಿಚಾರಣೆಯಲ್ಲಿ‌ ಕೊಲೆ ಮಾಡಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಪಡೆದ ಸಾಲ ಮರಳಿಸಲಾಗದೇ ದುರುದ್ದೇಶದಿಂದ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಇದೀಗ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತುಂಗಾ ಎಂಬ ಶ್ವಾನದ ಯಶೋಗಾಥೆ ತುಂಗಾ ಎಂಬ ಒಂಭತ್ತು ವರ್ಷದ ಚಾಲಕಿ ಶ್ವಾನ ಈಗ ರಾಜ್ಯದ ಗಮನ ಸೆಳೆದಿದ್ದಾಳೆ. ಕೆಲ ತಿಂಗಳ ಹಿಂದೆ ಅಪರೂಪದ ಪ್ರಕರಣ ಪತ್ತೆ ಹಚ್ಚಿ ರಾಜ್ಯದ ಗಮನ ಸೆಳೆದಿದ್ದ ತುಂಗಾ ಎಂಬ ಪೊಲೀಸ್ ಶ್ವಾನ ಮತ್ತೊಮ್ಮೆ ಗಮನ ಸೆಳೆದಿದೆ. ಕೆಲ ತಿಂಗಳ ಹಿಂದೆ ಬರೋಬ್ಬರಿ ಹನ್ನೊಂದು ಕಿಲೋ ಮೀಟರ್ ನಿರಂತರವಾಗಿ ಓಡಿ ಎಲ್ಲರನ್ನ ಸುಸ್ತು ಮಾಡಿದ್ದ ತುಂಗಾ, ಕೊನೆಗೆ ನಿಂತಿದ್ದು ಯಾರು ಕೊಲೆಗಡುಕ ಇದ್ದನೋ ಅವನದೇ ಮನೆಯ ಮುಂದೆ.

ಕಳೆದ ಕೆಲ ತಿಂಗಳ ಹಿಂದೆ ರಾಜ್ಯವನ್ನೇ ಬೆಚ್ಚಿಬಿಳಿಸುವ ಪ್ರಕರಣವೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ನಡೆದಿತ್ತು. ಇಲ್ಲೊಂದಿಷ್ಟು ಯುವಕರು ಧಾರವಾಡದ ಮನೆಯಲ್ಲಿ ಕಳ್ಳತನ ಮಾಡಿ ರಿವಾಲ್ಪರ್​ನಿಂದ ಶೂಟ್ ಮಾಡಿ ಚಂದ್ರಾ ನಾಯ್ಕ ಎಂಬ ಯುವಕನನ್ನ ಕೊಲೆ ಮಾಡಿದ್ದರು. ಪೊಲೀಸರು ಆರೋಪಿಗಳ ಪತ್ತೆಗೆ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ವರದಿ ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಹೇಳಿತ್ತು. ಆದರೆ, ಅಪರಾಧಿ ಪತ್ತೆ ಪೊಲೀಸರಿಗೆ ತಲೆ ನೋವಾಗಿತ್ತು. ಆಗ ಪೊಲೀಸರ ಸಹಾಯಕ್ಕೆ ಬಂದಿದ್ದು ತುಂಗಾ ಎಂಬ ಹೆಸರಿನ ಒಂಭತ್ತು ವರ್ಷದ ಪೊಲೀಸ್ ಡಾಗ್.

Police Dog Thunga Tunga

ಪೊಲೀಸ್ ಶ್ವಾನ ತುಂಗಾಗೆ ಸನ್ಮಾನ

ಹನ್ನೊಂದು ಕಿಲೋ ಮೀಟರ್ ದೂರದ ಅಪರಾಧಿ ಪತ್ತೆ ಸೂಳೆಯ ಗುಡ್ಡದಲ್ಲಿ ನಡೆದ ಕೊಲೆ ಸ್ಥಳದಲ್ಲಿ ವಾಸನೆ ಪಡೆದ ಪೊಲೀಸ್ ಡಾಗ್ ಅಲ್ಲಿಂದ ಹನ್ನೊಂದು ಕಿಲೋ ಮೀಟರ್ ದೂರದಲ್ಲಿ ಇದ್ದ ಕಾಶಿಪುರ ಎಂಬ ಗ್ರಾಮಕ್ಕೆ ಹೋಗಿತ್ತು. ಕೊಲೆ ಮಾಡಿದ ಆರೋಪಿ ಚೇತನ್ ನಾಯ್ಕ ಕೊಲೆ ಮಾಡಿ ನೇರ ತನ್ನ ಸಹೋದರಿ ಮನೆಗೆ ಬಂದಿದ್ದ. ವಿಚಾರಿಸಿದಾಗ ಆರೋಪಿ ಸಿಕ್ಕು ಬಿದ್ದಿದ್ದಾನೆ.

ಸಾಮಾನ್ಯವಾಗಿ ನಾಲ್ಕು ಐದು ಕಿಲೋ ಮೀಟರ್ ದೂರದ ಅಪರಾಧ ಪ್ರಕರಣಗಳನ್ನ ಪೊಲೀಸ್ ಶ್ವಾನಗಳು ಪತ್ತೆ ಹಚ್ಚಿದ ಇತಿಹಾಸವಿದೆ. ಆದ್ರೆ ಬರೋಬ್ಬರಿ ಹನ್ನೊಂದು ಕಿಲೋ ಮೀಟರ್ ದೂರ ಕ್ರಮಿಸಿ ಆರೋಪಿಯನ್ನ ಹಿಡಿದು ಕೊಟ್ಟಿದ್ದು ಅಪರೂಪ. ಇದೇ ಕಾರಣಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಆಗಿನ ಎಡಿಜಿಪಿ ಅಮರಕುಮಾರ ಪಾಂಡೆ ಬಂದು ತುಂಗಾ ಶ್ವಾನಕ್ಕೆ ಮಾಲೆ ಹಾಕಿ ಸನ್ಮಾನಿಸಿದ್ದರು.

Police Dog Thunga Tunga

ಪೊಲೀಸ್ ಡಾಗ್ ತುಂಗಾ

ತುಂಗಾ ಶ್ವಾನ ಪತ್ತೆಹಚ್ಚಿದ್ದು ಬರೋಬ್ಬರಿ 63 ಪ್ರಕರಣಗಳು ಒಂಭತ್ತು ವರ್ಷಗಳ ಹಿಂದೆ ಮೂರು ತಿಂಗಳ ಮರಿಯನ್ನು ಬೆಂಗಳೂರಿನ ಹೆಬ್ಬಗೋಡು ಪೊಲೀಸ್ ತರಬೇತಿ ಕೇಂದ್ರದಿಂದ ತರಲಾಗಿತ್ತು. ಹೀಗೆ ಬುನಾದಿ ತರಬೇತಿ ನೀಡಿದ ಬಳಿಕ ಅಪರಾಧ ಪತ್ತೆಗೆ ಈ ಶ್ವಾನ ಕಾರ್ಯ ಪ್ರವೃತ್ತವಾಗಿತ್ತು. ಇದಕ್ಕೆ ತುಂಗಾ ಎಂಬ ಹೆಸರಿಡಲಾಗಿತ್ತು. ಆ ಬಳಿಕ ಒಂಭತ್ತು ವರ್ಷಗಳಲ್ಲಿ 63 ಪ್ರಕರಣಗಳನ್ನ ತುಂಗಾ ಪತ್ತೆ ಹಚ್ಚಿದ್ದಾಳೆ. ಇವುಗಳಲ್ಲಿ 37 ಕೊಲೆ ಪ್ರಕರಣಗಳೇ ಆಗಿವೆ. ಉಳಿದ ಪ್ರಕರಣಗಳು ಡಕಾಯಿತಿ ಪ್ರಕರಣಗಳಾಗಿವೆ. ಹೀಗೆ ನೂರಾರು ಜನ ಪೊಲೀಸ್ ಸಿಬ್ಬಂದಿ ಮಾಡದ ಕೆಲಸವನ್ನು ಕೇವಲ ಒಂದು ಶ್ವಾನ ಮಾಡಿದೆ. ಈಗ ತುಂಗಾ ಮತ್ತೊಂದು ಸಾಧನೆ ಮಾಡಿದ್ದಾಳೆ.  ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದೆ.

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: Udupi Murder: ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು; ದುಬೈನಿಂದಲೇ ಸುಪಾರಿ ಕೊಟ್ಟನಾ ಗಂಡ?

ಮಾಲಿ ದೇಶದ ಅಧ್ಯಕ್ಷರ ಮೇಲೆ ಚಾಕುವಿನಿಂದ ಹಲ್ಲೆ; ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಕೊಲೆ ಪ್ರಯತ್ನ

(Police Dog Tunga chased a Murder Case by giving Clue about Murderer Crime in Davanagere)

Published On - 10:17 pm, Wed, 21 July 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ