ಬಿಎಸ್​ವೈ ಬಿಜೆಪಿ ತೊರೆದಾಗ ಪಕ್ಷ ಉಳಿಸಿದ ಈಶ್ವರಪ್ಪಗೆ ಸಿಎಂ ಹುದ್ದೆ ಕೊಡಿ: ಹಾಲುಮತ ಮಹಾಸಭಾದಿಂದ ಬಿಜೆಪಿಗೆ ಎಚ್ಚರಿಕೆ

CM BS Yediyurappa: ಬಿ.ಎಸ್.ಯಡಿಯೂರಪ್ಪ ಪಕ್ಷ ತ್ಯಜಿಸಿದಾಗ ಈಶ್ವರಪ್ಪ ಬಿಜೆಪಿ ಪಕ್ಷ ಉಳಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆ.ಎಸ್.ಈಶ್ವರಪ್ಪ ಅವರನ್ನೇ ಸಿಎಂ ಮಾಡಬೇಕು ಎಂದು ಆಗ್ರಹಿಸಿದೆ ಹಾಲುಮತ ಮಹಾಸಭಾ.

ಬಿಎಸ್​ವೈ ಬಿಜೆಪಿ ತೊರೆದಾಗ ಪಕ್ಷ ಉಳಿಸಿದ ಈಶ್ವರಪ್ಪಗೆ ಸಿಎಂ ಹುದ್ದೆ ಕೊಡಿ: ಹಾಲುಮತ ಮಹಾಸಭಾದಿಂದ ಬಿಜೆಪಿಗೆ ಎಚ್ಚರಿಕೆ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ

ದಾವಣಗೆರೆ: ಸಿಎಂ ಯಡಿಯೂಪ್ಪ ರಾಜೀನಾಮೆ ನೀಡಿದರೆ ಸಚಿವ ಕೆ.ಎಸ್​.ಈಶ್ವರಪ್ಪ ಅವರನ್ನು ಮುಖ್ಯಂಮಂತ್ರಿ ಮಾಡಬೇಕು. ಈಶ್ವರಪ್ಪ ಸಿಎಂ ಆಗದಿದ್ದರೆ ರಾಜ್ಯವ್ಯಾಪ್ತ ಹೋರಾಟ ನಡೆಸುತ್ತೇವೆ ಎಂದು ದಾವಣಗೆರೆಯಲ್ಲಿ ಹಾಲುಮತ ಮಹಾಸಭಾ ಎಚ್ಚರಿಕೆ ನೀಡಿದೆ. ಬಿ.ಎಸ್.ಯಡಿಯೂರಪ್ಪ ಪಕ್ಷ ತ್ಯಜಿಸಿದಾಗ ಈಶ್ವರಪ್ಪ ಬಿಜೆಪಿಯನ್ನು ಉಳಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದರೆ ಈಶ್ವರಪ್ಪಗೆ ಸಿಎಂ ಸ್ಥಾನ ಕೊಡಲೇಬೇಕು ಎಂದು ಮಹಾಸಭಾ ಆಗ್ರಹಿಸಿದೆ.

ಕೆ.ಎಸ್. ಈಶ್ವರಪ್ಪ 1975-77ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧನವಾಗಿದ್ದರು. ಶೇಕಡ 55ರಷ್ಟು ಇರುವ ಹಿಂದುಳಿದ ವರ್ಗಕ್ಕೆ ಬಿಜೆಪಿ ಅನ್ಯಾಯವೆಸಗಿದೆ. ಬಿ.ಎಸ್.ಯಡಿಯೂರಪ್ಪ ಪಕ್ಷ ತ್ಯಜಿಸಿದಾಗ ಈಶ್ವರಪ್ಪ ಬಿಜೆಪಿ ಪಕ್ಷ ಉಳಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆ.ಎಸ್.ಈಶ್ವರಪ್ಪ ಅವರನ್ನೇ ಸಿಎಂ ಮಾಡಬೇಕು ಎಂದು ಆಗ್ರಹಿಸಿದೆ ಹಾಲುಮತ ಮಹಾಸಭಾ.

ಇದನ್ನೂ ಓದಿ: 

ನಾಳಿದ್ದು ರಾಜಿನಾಮೆ ನೀಡ್ತಾರಂತೆ ಆದ್ರೆ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಸಾವಿರಾರು ಕೋಟಿ ಯೋಜನೆಗೆ ಅನುಮತಿ ನೀಡ್ತಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ ಆತಂಕ

BS Yediyurappa: ಸಿಎಂ ಹುದ್ದೆಗೆ ರಾಜೀನಾಮೆ? ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ

(If CM Yediyurappa resigns KS Eshwarappa must become chief minister Warns Halumatha Mahasabha to BJP)