AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಿನಾಮೆ ನೀಡ್ತಾರಂತೆ ಆದ್ರೆ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಸಾವಿರಾರು ಕೋಟಿ ಯೋಜನೆಗೆ ಅನುಮತಿ ನೀಡ್ತಿದ್ದಾರೆ: ಹೆಚ್​ಡಿಕೆ ಆತಂಕ

ನಾಳಿದ್ದು ರಾಜಿನಾಮೆ ನೀಡ್ತಾರೆ ಎನ್ನುತ್ತಿದ್ದಾರೆ, ಅದೇನೋ ನನಗೆ ಗೊತ್ತಿಲ್ಲ. ಆದ್ರೆ ಸಿಎಂ ತರಾತುರಿಯಲ್ಲಿ ಸಾವಿರಾರು ಕೋಟಿಗಳ ಯೋಜನೆಗೆ ಅನುಮತಿ ನೀಡ್ತಿದ್ದಾರೆ. ನಿರಾವರಿ ಇಲಾಖೆಯ 4 ನಿಗಮಗಳಲ್ಲಿ 12 ಸಾವಿರ ಕೋಟಿ ಯೋಜನೆಗೆ ಇವತ್ತಿನ ಸಭೆಯಲ್ಲಿ ಯಡಿಯೂರಪ್ಪ ಅನುಮತಿ ನೀಡ್ತಿದ್ದಾರೆ. -ಹೆಚ್​ಡಿ ಕುಮಾರಸ್ವಾಮಿ

ರಾಜಿನಾಮೆ ನೀಡ್ತಾರಂತೆ ಆದ್ರೆ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಸಾವಿರಾರು ಕೋಟಿ ಯೋಜನೆಗೆ ಅನುಮತಿ ನೀಡ್ತಿದ್ದಾರೆ: ಹೆಚ್​ಡಿಕೆ ಆತಂಕ
ಹೆಚ್.ಡಿ.ಕುಮಾಸ್ವಾಮಿ
TV9 Web
| Edited By: |

Updated on:Jul 22, 2021 | 3:25 PM

Share

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಕೊನೆಗೂ ತುಟಿ ಬಿಚ್ಚಿದ್ದಾರೆ. ಸದ್ಯ ಬಿಎಸ್ವೈ ಹೇಳಿಕೆ ಬಳಿಕ ರಾಜಕೀಯದಲ್ಲಿ ಪರ-ವಿರೋಧ ಚರ್ಚೆಗಳು ಗರಿ ಗೆದರಿವೆ. ಈ ಸಂಬಂಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ನಾಳಿದ್ದು ರಾಜಿನಾಮೆ ನೀಡ್ತಾರಂತೆ ಆದ್ರೆ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಸಾವಿರಾರು ಕೋಟಿ ಯೋಜನೆಗೆ ಅನುಮತಿ ನೀಡ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಾಳಿದ್ದು ರಾಜಿನಾಮೆ ನೀಡ್ತಾರೆ ಎನ್ನುತ್ತಿದ್ದಾರೆ, ಅದೇನೋ ನನಗೆ ಗೊತ್ತಿಲ್ಲ. ಆದ್ರೆ ಸಿಎಂ ತರಾತುರಿಯಲ್ಲಿ ಸಾವಿರಾರು ಕೋಟಿಗಳ ಯೋಜನೆಗೆ ಅನುಮತಿ ನೀಡ್ತಿದ್ದಾರೆ. ನಿರಾವರಿ ಇಲಾಖೆಯ 4 ನಿಗಮಗಳಲ್ಲಿ 12 ಸಾವಿರ ಕೋಟಿ ಯೋಜನೆಗೆ ಇವತ್ತಿನ ಸಭೆಯಲ್ಲಿ ಯಡಿಯೂರಪ್ಪ ಅನುಮತಿ ನೀಡ್ತಿದ್ದಾರೆ. 12ಸಾವಿರ ಕೋಟಿ ಯೋಜನೆಯಲ್ಲಿ ಕಾವೇರಿ ನಿಗಮಕ್ಕೆ ಕೇವಲ 1ಸಾವಿರ ಕೋಟಿ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹಳೇ ಕರ್ನಾಟಕ ಭಾಗದಿಂದ ಹೋಗುತ್ತಿದೆ. ನನಗೆ ಹಳೇ ಕರ್ನಾಟಕ ಹೊಸ ಕರ್ನಾಟಕದ ಪ್ರಶ್ನೆ ಅಲ್ಲ. ಆ ಭಾಗಕ್ಕೆ ನೀಡುವ ಆದ್ಯತೆಯನ್ನ ಈ ಭಾಗಕ್ಕೂ ನೀಡಿ. ಇಲ್ಲಿನ ಜ‌ನ ನಿಮಗೇನು ದ್ರೋಹ ಮಾಡಿದ್ದಾರೆ? ಈ ಭಾಗಕ್ಕೆ 1ಸಾವಿರ ಕೋಟಿ ಆ ಭಾಗಕ್ಕೆ 11ಸಾವಿರ ಕೋಟಿ ಯೋಜನೆ.

ನಿಜವಾಗಲೂ ಆ ಭಾಗದ ಜನರಿಗೆ ನೀರು ಕೊಡಲು ಯೋಜನೆ ರೂಪಿಸಿದ್ದೀರಾ? ದುಡ್ಡು ಹೊಡೆಯುವ ಯೋಜನೆ ನಿಮ್ಮದು. 2 ದಿನದಲ್ಲಿ ಸಿಎಂ‌ ಬದಲಾಗುವುದಾದರೆ ತರಾತುರಿಯಲ್ಲಿ 12ಸಾವಿರ ಕೋಟಿ ಯೋಜನೆ ಯಾಕೆ? ಅವರಿಗೆ ಅಂತಹ ದರದ್ ಏನಿದೆ, ಯಾವ ಕಾರಣಕ್ಕಾಗಿ ಈ ತೀರ್ಮಾನ? ಈಗಲೂ ದುಡ್ಡು ಹೊಡೆಯಲಿಕ್ಕಾ, ರಾಜ್ಯದ ತೆರಿಗೆ ಹಣ ಲೂಟಿ ಮಾಡಲಿಕ್ಕಾ? ಎಂದು ಸಿಎಂ ಬಿಎಸ್‌ವೈ‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ, ಬಿಜೆಪಿ ಆಂತರಿಕ ವಿಚಾರ. ಬಿಜೆಪಿ ನಿರ್ಧಾರದಲ್ಲಿ ಮೂಗು ತೂರಿಸುವುದು ಶೋಭೆ ತರಲ್ಲ. ಸಿಎಂ ಬದಲಾವಣೆ ವಿಚಾರ 2 ವರ್ಷಗಳಿಂದ ನಡೆಯುತ್ತಿದೆ. ಸದ್ಯ ಜನರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.ಇಂತಹ ವಿಷಯಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಬಿಎಸ್‌ವೈಗೆ ಮಠಾಧೀಶರ ಬೆಂಬಲ ವಿಚಾರಕ್ಕೆ ನಾನು ಮಹತ್ವ ಕೊಡುವುದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಭಾವನೆ ಇದೆ, ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ಭಾವನೆ ಸರಿಯೋ ತಪ್ಪೋ ನಿರ್ಧಾರ ಜನರದ್ದು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ 2ವರ್ಷಗಳಿಂದ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ; ಬಿಜೆಪಿ ಹೈಕಮಾಂಡ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ

Published On - 2:04 pm, Thu, 22 July 21

ವರ್ಷಗಳ ಕಾಲ ನೆನಪುಳಿವ ಸಿನಿಮಾ: ‘ಫಾದರ್’ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತು
ವರ್ಷಗಳ ಕಾಲ ನೆನಪುಳಿವ ಸಿನಿಮಾ: ‘ಫಾದರ್’ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತು
ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್‌ ಭದ್ರತಾ ಸಿದ್ಧತೆ
ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್‌ ಭದ್ರತಾ ಸಿದ್ಧತೆ
PSI ಜೊತೆಗೆ ವಿವಾಹಿತ ಮಹಿಳೆ ಪರಾರಿ ಕೇಸ್: ಸತ್ಯ ಬಿಚ್ಚಿಟ್ಟ ಸಂತ್ರಸ್ತೆ
PSI ಜೊತೆಗೆ ವಿವಾಹಿತ ಮಹಿಳೆ ಪರಾರಿ ಕೇಸ್: ಸತ್ಯ ಬಿಚ್ಚಿಟ್ಟ ಸಂತ್ರಸ್ತೆ
ಕುಡಿದ ಅಮಲಿನಲ್ಲಿ ಪೊಲೀಸರನ್ನು ಎಳೆದಾಡಿದ ಯುವಕರು
ಕುಡಿದ ಅಮಲಿನಲ್ಲಿ ಪೊಲೀಸರನ್ನು ಎಳೆದಾಡಿದ ಯುವಕರು
ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?