ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ; ಬಿಜೆಪಿ ಹೈಕಮಾಂಡ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ

ಜನರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.ಇಂತಹ ವಿಷಯಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ; ಬಿಜೆಪಿ ಹೈಕಮಾಂಡ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ
ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಸುಳಿವು ವಿಚಾರಕ್ಕೆ ಸಂಬಂಧಿಸಿ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ, ಬಿಜೆಪಿ ಆಂತರಿಕ ವಿಚಾರ. ಬಿಜೆಪಿ ನಿರ್ಧಾರದಲ್ಲಿ ಮೂಗು ತೂರಿಸುವುದು ಶೋಭೆ ತರಲ್ಲ. ಸಿಎಂ ಬದಲಾವಣೆ ವಿಚಾರ 2 ವರ್ಷಗಳಿಂದ ನಡೆಯುತ್ತಿದೆ. ಸದ್ಯ ಜನರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.ಇಂತಹ ವಿಷಯಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಬಿಎಸ್‌ವೈಗೆ ಮಠಾಧೀಶರ ಬೆಂಬಲ ವಿಚಾರಕ್ಕೆ ನಾನು ಮಹತ್ವ ಕೊಡುವುದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಭಾವನೆ ಇದೆ, ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ಭಾವನೆ ಸರಿಯೋ ತಪ್ಪೋ ನಿರ್ಧಾರ ಜನರದ್ದು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ 2ವರ್ಷಗಳಿಂದ ನಡೆಯುತ್ತಿದೆ ಎಂದರು.

ನಾಳಿದ್ದು ರಾಜಿನಾಮೆ ನೀಡ್ತಾರಂತೆ ಆದ್ರೆ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಸಾವಿರಾರು ಕೋಟಿ ಯೋಜನೆಗೆ ಅನುಮತಿ ನೀಡ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಾಳಿದ್ದು ರಾಜಿನಾಮೆ ನೀಡ್ತಾರೆ ಎನ್ನುತ್ತಿದ್ದಾರೆ, ಅದೇನೋ ನನಗೆ ಗೊತ್ತಿಲ್ಲ. ಆದ್ರೆ ಸಿಎಂ ತರಾತುರಿಯಲ್ಲಿ ಸಾವಿರಾರು ಕೋಟಿಗಳ ಯೋಜನೆಗೆ ಅನುಮತಿ ನೀಡ್ತಿದ್ದಾರೆ. ನಿರಾವರಿ ಇಲಾಖೆಯ 4 ನಿಗಮಗಳಲ್ಲಿ 12 ಸಾವಿರ ಕೋಟಿ ಯೋಜನೆಗೆ ಇವತ್ತಿನ ಸಭೆಯಲ್ಲಿ ಯಡಿಯೂರಪ್ಪ ಅನುಮತಿ ನೀಡ್ತಿದ್ದಾರೆ. 12ಸಾವಿರ ಕೋಟಿ ಯೋಜನೆಯಲ್ಲಿ ಕಾವೇರಿ ನಿಗಮಕ್ಕೆ ಕೇವಲ 1ಸಾವಿರ ಕೋಟಿ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹಳೇ ಕರ್ನಾಟಕ ಭಾಗದಿಂದ ಹೋಗುತ್ತಿದೆ. ನನಗೆ ಹಳೇ ಕರ್ನಾಟಕ ಹೊಸ ಕರ್ನಾಟಕದ ಪ್ರಶ್ನೆ ಅಲ್ಲ. ಆ ಭಾಗಕ್ಕೆ ನೀಡುವ ಆದ್ಯತೆಯನ್ನ ಈ ಭಾಗಕ್ಕೂ ನೀಡಿ. ಇಲ್ಲಿನ ಜ‌ನ ನಿಮಗೇನು ದ್ರೋಹ ಮಾಡಿದ್ದಾರೆ? ಈ ಭಾಗಕ್ಕೆ 1ಸಾವಿರ ಕೋಟಿ ಆ ಭಾಗಕ್ಕೆ 11ಸಾವಿರ ಕೋಟಿ ಯೋಜನೆ.

ನಿಜವಾಗಲೂ ಆ ಭಾಗದ ಜನರಿಗೆ ನೀರು ಕೊಡಲು ಯೋಜನೆ ರೂಪಿಸಿದ್ದೀರಾ? ದುಡ್ಡು ಹೊಡೆಯುವ ಯೋಜನೆ ನಿಮ್ಮದು. 2 ದಿನದಲ್ಲಿ ಸಿಎಂ‌ ಬದಲಾಗುವುದಾದರೆ ತರಾತುರಿಯಲ್ಲಿ 12ಸಾವಿರ ಕೋಟಿ ಯೋಜನೆ ಯಾಕೆ? ಅವರಿಗೆ ಅಂತಹ ದರದ್ ಏನಿದೆ, ಯಾವ ಕಾರಣಕ್ಕಾಗಿ ಈ ತೀರ್ಮಾನ? ಈಗಲೂ ದುಡ್ಡು ಹೊಡೆಯಲಿಕ್ಕಾ, ರಾಜ್ಯದ ತೆರಿಗೆ ಹಣ ಲೂಟಿ ಮಾಡಲಿಕ್ಕಾ? ಎಂದು ಸಿಎಂ ಬಿಎಸ್‌ವೈ‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 5G Smartphones: 5G ಸ್ಮಾರ್ಟ್​ಫೋನ್ ಬೇಕೆಂಬವರು ಒಮ್ಮೆ ಇಲ್ಲಿನೋಡಿ: ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್​ 5G ಫೋನ್ ಇವು

Click on your DTH Provider to Add TV9 Kannada