Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಆರ್​​ಎಸ್ ಅಣೆಕಟ್ಟೆಗೆ ಅಪಾಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್

Sumlatha ambareesh: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ ಕೆಆರ್ ಎಸ್ ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆ ಮತ್ತು ಅಣೆಕಟ್ಟಿಗೆ ಇರುವ ಅಪಾಯದ ಕುರಿತು ಮನವಿ ಪತ್ರ (memorandum) ಸಲ್ಲಿಸಿ, ಉಪರಾಷ್ಟ್ರಪತಿ ಗಮನಸೆಳೆದರು. ಇದಕ್ಕೆ ಸ್ಪಂದಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪರಿಸರ ಸಚಿವಾಲಯದ (Environmental Ministry) ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಾಗಿ ಸುಮಲತಾಗೆ ಭರವಸೆ ನೀಡಿದರು.

ಕೆಆರ್​​ಎಸ್ ಅಣೆಕಟ್ಟೆಗೆ ಅಪಾಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್
ಕೆಆರ್​​ಎಸ್ ಅಣೆಕಟ್ಟೆಗೆ ಅಪಾಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 23, 2021 | 2:15 PM

ದೆಹಲಿ: ಐತಿಹಾಸಿಕ ಕನ್ನಂಬಾಡಿ ಕಟ್ಟೆಗೆ (KRS Dam) ಅಕ್ರಮ ಗಣಿಗಾರಿಕೆಯಿಂದ ಅಪಾಯವೊದಗಿದ್ದು, ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಂಡ್ಯದ ಸಂಸದರಾದ ಸುಮಲತಾ ಅಂಬರೀಷ್​ ತಮ್ಮ ಅವಿರತ ಪ್ರಯತ್ನ ಮುಂದುವರಿಸಿದ್ದಾರೆ. ಇತ್ತೀಚೆಗೆ ರಾಜಕೀಯವಾಗಿಯೂ ರಾಜ್ಯದಲ್ಲಿ ತೀವ್ರ ಸಂಚಲವುಂಟುಮಾಡಿದ್ದ ಸಂಸದೆ ಸುಮಲತಾ ಅವರ ಪ್ರಯತ್ನ ಭಾರೀ ಸದ್ದು ಮಾಡಿತ್ತು. ರಾಜ್ಯದಲ್ಲಿ ಗಣಿ ಸಚಿವರು ಮತ್ತು ರಾಜ್ಯಪಾಲರನ್ನೂ ಈ ಸಂಬಂಧ ಭೇಟಿ ಮಾಡಿದ್ದ ಸಂಸದೆ ಸುಮಲತಾ ಅವರು ಕೆಆರ್ ಎಸ್ ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಿಲ್ಲಿಸಿ, ಅಣೆಕಟ್ಟೆಗೆ ಅಪಾಯ ತಪ್ಪಿಸಿ ಎಂದು ಮೊರೆಯಿಟ್ಟಿದ್ದರು.

ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು:

Mandya MP Sumlatha ambareesh meets Vice President Venkayya Naidu regarding illegal mining impact on KRS Dam 1

ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಅದಾದ ಬಳಿಕ ಸಂಸದರಾಗಿ ದೆಹಲಿ ಮಟ್ಟದಲ್ಲಿಯೂ ತಮ್ಮ ಪ್ರಯತ್ನ ಮುಂದುವರಿಸಿದ ಸುಮಲತಾ ಅಂಬರೀಷ್​ ಅವರು ಕೇಂದ್ರ ಜಲ ಸಚಿವರನ್ನೂ ಸಹ ಭೇಟಿ ಮಾಡಿದ್ದರು. ಇಂದು ಉಪರಾಷ್ಟ್ರಪತಿ ಅವರನ್ನೂ ಭೇಟಿ ಮಾಡಿ, ಮಂಡ್ಯ ಸಂಸದೆ ಸುಮಲತಾ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಕೆಆರ್ ಎಸ್ ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆ (illegal mining) ಮತ್ತು ಅಣೆಕಟ್ಟಿಗೆ ಇರುವ ಅಪಾಯದ ಕುರಿತು ಇಂದು ದೆಹಲಿಯಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು (Vice President Venkayya Naidu) ಅವರ ಗಮನಕ್ಕೆ ತಂದರು.

ಸಿಬಿಐ ಅಥವಾ ಬೇರೆ ಕೇಂದ್ರೀಯ ತನಿಖಾ ಏಜೆನ್ಸಿಯಿಂದ ತನಿಖೆ‌ ನಡೆಸುವಂತೆ ನಿರ್ದೇಶನ ನೀಡಲು ಮನವಿ: ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ಅಥವಾ ಬೇರೆ ಕೇಂದ್ರೀಯ ತನಿಖಾ ಏಜೆನ್ಸಿಯಿಂದ ತನಿಖೆ‌ ನಡೆಸುವಂತೆ ನಿರ್ದೇಶನ ನೀಡುವಂತೆ ಉಪರಾಷ್ಟ್ರಪತಿಗೆ ಸಂಸದೆ ಸುಮಲತಾ ಇದೇ ವೇಳೆ ಮನವಿ ಮಾಡಿದರು.

ಕೆಆರ್‌ಎಸ್ ಸುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ದೂರು ನೀಡಿದ ಸಂಸದೆ ಸುಮಲತಾ, ಗಣಿಗಾರಿಕೆಯಿಂದ ಆಣೆಕಟ್ಟಿಗೆ ಅಪಾಯ ಇದೆ. ನೀರು ಮಾಲಿನ್ಯವಾಗುತ್ತಿದೆ. ಜೊತೆಗೆ ಪ್ರಾಣಿ ಸಂಕುಲಕ್ಕೂ ಅಪಾಯ ಇದೆ. ಬಂಡಿಪುರ ನಾಗರಹೊಳೆ ಅಭಯಾರಣ್ಯಕ್ಕೂ ಅಪಾಯವಿದೆ. ಕೂಡಲೆ ಈ ಬಗ್ಗೆ ಕ್ರಮ ವಹಿಸಬೇಕಿದೆ ಎಂದು ಮನವಿ ಮಾಡಿದರು.

ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ ಕೆಆರ್ ಎಸ್ ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆ ಮತ್ತು ಅಣೆಕಟ್ಟಿಗೆ ಇರುವ ಅಪಾಯದ ಕುರಿತು ಮನವಿ ಪತ್ರ (memorandum) ಸಲ್ಲಿಸಿ, ಉಪರಾಷ್ಟ್ರಪತಿ ಗಮನಸೆಳೆದರು. ಇದಕ್ಕೆ ಸ್ಪಂದಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪರಿಸರ ಸಚಿವಾಲಯದ (Environmental Ministry) ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಾಗಿ ಸುಮಲತಾಗೆ ಭರವಸೆ ನೀಡಿದರು.

Mandya MP Sumlatha ambareesh meets Vice President Venkayya Naidu regarding illegal mining impact on KRS Dam 3

ಮಂಡ್ಯ ಸಂಸದೆ ಸುಮಲತಾ ಕೆಆರ್ ಎಸ್ ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟಿಗೆ ಇರುವ ಅಪಾಯದ ಕುರಿತು ಮನವಿ ಪತ್ರ (memorandum) ಸಲ್ಲಿಸಿ, ಉಪರಾಷ್ಟ್ರಪತಿ ಗಮನಸೆಳೆದರು.

Also Read:

ಕೆಆರ್​ಎಸ್ ಸುತ್ತಮುತ್ತಲ ಗಣಿಗಾರಿಕೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆದ ಸುಮಲತಾ

Sumalatha Press Meet: ಮಂಡ್ಯದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ: ಸಂಸದೆ ಸುಮಲತಾ

(Mandya MP Sumlatha ambareesh meets Vice President Venkayya Naidu regarding illegal mining impact on KRS Dam)

Published On - 12:47 pm, Fri, 23 July 21

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ