5G Smartphones: 5G ಸ್ಮಾರ್ಟ್​ಫೋನ್ ಬೇಕೆಂಬವರು ಒಮ್ಮೆ ಇಲ್ಲಿನೋಡಿ: ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್​ 5G ಫೋನ್ ಇವು

ಭಾರತದಲ್ಲಿ ಸದ್ಯ ಕಡಿಮೆ ದರದಲ್ಲಿ ಲಭ್ಯವಿರುವ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

5G Smartphones: 5G ಸ್ಮಾರ್ಟ್​ಫೋನ್ ಬೇಕೆಂಬವರು ಒಮ್ಮೆ ಇಲ್ಲಿನೋಡಿ: ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್​ 5G ಫೋನ್ ಇವು
5G Smartphones

ಕೊರೋನಾ (Corona) ಲಾಕ್​ಡೌನ್​ನಿಂದಾಗಿ ಭಾರತದಲ್ಲಿ ಕುಂಠಿತಗೊಂಡಿದ್ದ ಸ್ಮಾರ್ಟ್​ಫೋನ್​ಗಳ ಮಾರಾಟ ಈಗ ಮತ್ತೆ ಶುರುವಾಗಿದೆ. ಹೊಸ ಹೊಸ ಫೋನುಗಳು ವಾರಕ್ಕೊಂದರಂತೆ ಬಿಡುಗಡೆ ಆಗಲು ಶುರುವಾಗಿದೆ. ಈ ಪೈಕಿ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 5G ಸ್ಮಾರ್ಟ್ ಫೋನುಗಳ (5G Smartphone) ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಕೆಲವು ಕಂಪೆನಿಗಳು ಅತಿ ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ಗಳುಳ್ಳ 5G ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡುತ್ತಿರುವುದು ವಿಶೇಷ. ಹೌದು, ಮಾರುಕಟ್ಟೆಯಲ್ಲಿ ಸದ್ಯ ಕೆಲವು 5G ಸ್ಮಾರ್ಟ್ ಫೋನುಗಳು ಕೈಗೆಟಕುವ ದರದಲ್ಲಿ ಮಾರಾಟವಾಗುತ್ತಿದೆ. ಹಾಗಾದ್ರೆ ಭಾರತದಲ್ಲಿ ಸದ್ಯ ಕಡಿಮೆ ದರದಲ್ಲಿ ಲಭ್ಯವಿರುವ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

ರೆಡ್ನಿ ನೋಟ್ 10T 5G: ಎರಡು ದಿನಗಳ ಹಿಂದೆ ಬಿಡುಗಡೆ ಆದ ಈ ಸ್ಮಾರ್ಟ್​ಫೋನ್​ನ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಬೆಲೆ 13,999 ರೂ. ಆಗಿದೆ. ಅಂತೆಯೆ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿ ಮಾಡಲಾಗಿದೆ. ಇದು 6.5-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್​ನಿಂ ಕಾರ್ಯನಿರ್ವಹಿಸುತ್ತದೆ. ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಎಫ್ / 1.79 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ. ಆದರೆ, ಇದು ಜುಲೈ 26 ರಿಂದಷ್ಟೆ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.

ರಿಯಲ್ ಮಿ 8 5G: ಇತ್ತೀಚೆಗಷ್ಟೆ ಬಿಡುಗಡೆ ರಿಯಲ್ ಮಿ 8 5G ಸ್ಮಾರ್ಟ್ ಫೋನ್ ಕೇವಲ 14,999 ರೂ. ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು 6.5-ಇಂಚಿನ ಫುಲ್‌-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಅಳವಡಿಸಲಾಗಿದೆ. ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಒಳಗೊಂಡಿದೆ. 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಕ್ವಿಕ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.

ರಿಯಲ್ ಮಿ ನಾರ್ಜೊ 30 ಪ್ರೊ: ರಿಯಲ್ ಮಿ ನಾರ್ಜೋ 30 ಪ್ರೊ ಸಾಕಷ್ಟು ಬೇಡಿಕೆಯಲ್ಲಿರುವ ಸ್ಮಾರ್ಟ್​ಫೋನ್.ಇದು ಮೀಡಿಯಾ ಟೆಕ್ ಡಿಮೆನ್ಸಿಟಿ 800ಯು 5G ಪ್ರೊಸೆಸರ್ ಆಧರಿತವಾಗಿದೆ. 6.5 ಇಂಚಿನ ಫುಲ್ ಎಚ್ಡಿ ಡಿಸ್ಲೇ ಹೊಂದಿದ್ದು, 30 ವೋಲ್ಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇದೆ. ಇದರ ಬೆಲೆ 16,999 ರೂ. ಇದು 13 ಮೆಗಾಫಿಕ್ಸಲ್ ಡ್ಯುಯೆಲ್ ಕ್ಯಾಮೆರಾ ಇದ್ದರೆ, 8 ಎಂಪಿಯ ಸೆಲ್ಫಿ ಕ್ಯಾಮೆರಾ ಇದೆ. ಇದರ ಬ್ಯಾಟರಿ ಸಾಮರ್ಥ್ಯ 6,000mAh.

ಶವೋಮಿ ಎಂಐ 10i: ಈ ಸ್ಮಾರ್ಟ್​ಫೋನ್ ಮೂರು ಆಯ್ಕೆಯಲ್ಲಿ ಲಭ್ಯವಿದೆ. 6GB+64GB ಮಾದರಿಗೆ 20,999 ರೂ. , 6GB+128GB ಆವೃತ್ತಿಗೆ 21,999 ರೂ. ಮತ್ತು 8 GB+128 GB ಆವೃತ್ತಿಗೆ 23,999 ರೂ. ದರವಿದೆ. 6.67 ಇಂಚಿನ ಫುಲ್ HD+ ಡಿಸ್ಪ್ಲೇ ಮತ್ತು120Hz ರಿಫ್ರೆಶ್ ರೇಟ್, HDR10+ ಹೊಂದಿದೆ. ಒಕ್ಟಾ ಕೋರ್ Snapdragon 750G SoC ಮತ್ತು Adreno 619 GPU ಬೆಂಬಲ ಹೊಂದಿದೆ. 108+8+2+2 ಮೆಗಾಪಿಕ್ಸೆಲ್ ಹಿಂಬದಿ ಕ್ವಾಡ್ ಕ್ಯಾಮರಾವಿದೆ. ಸೆಲ್ಫಿ ಕ್ಯಾಮರಾ 16 ಮೆಗಾಪಿಕ್ಸೆಲ್. 4820mAh ಬ್ಯಾಟರಿ ಜತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.

ರಿಯಲ್ ಮಿ X7 ಪ್ರೊ: ರಿಯಲ್‌ಮಿ ಎಕ್ಸ್ 7 ಪ್ರೊ ಹ್ಯಾಂಡ್‌ಸೆಟ್‌ 5ಜಿ ಅಂತರ್ಜಾಲ ಸೇವೆಯನ್ನು ಹೊಂದಿದೆ.ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1000+ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. 4500 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಅಲ್ಲದೆ 65 ವ್ಯಾಟ್ ಅಲ್ಟ್ರಾ-ಫಾಸ್ಟ್ ಫ್ಲ್ಯಾಶ್‌ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಸ್ಟೋರೇಜ್‌ 128GB ಇದ್ದು,64 ಮೆಗಾಪಿಕ್ಸೆಲ್‌ + 8ಎಂಪಿ +2ಎಂಪಿ + 2 ಮೆಗಾಫಿಕ್ಸೆಲ್ ಕ್ಯಾಮೆರಾವಿದೆ.

Amazon Prime Day Sale: ಅಮೆಜಾನ್ ಪ್ರೈಮ್ ಡೇ ಸೇಲ್​ಗೆ ದಿನಗಣನೆ: ಹಿಂದೆಂದೂ ನೀಡದ ಬಂಪರ್ ಡಿಸ್ಕೌಂಟ್

Super Thanks: ಹಣ ಗಳಿಸಲು ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಿದ ಯೂಟ್ಯೂಬ್: ಹೇಗೆ?, ಇಲ್ಲಿದೆ ನೋಡಿ

(Best budget price 5G Phones in India Under Rs 20000 in July 2021 Redmi Note 10T 5G)