Amazon Prime Day Sale: ಅಮೆಜಾನ್ ಪ್ರೈಮ್ ಡೇ ಸೇಲ್​ಗೆ ದಿನಗಣನೆ: ಹಿಂದೆಂದೂ ನೀಡದ ಬಂಪರ್ ಡಿಸ್ಕೌಂಟ್

ಅಮೆಜಾನ್‌ ಪ್ರೈಮ್‌ ಡೇ 2021 ಸೇಲ್‌ ಇದೇ ಜುಲೈ 26 ರಂದು ಶುರುವಾಗುವುದಾಗಿ ಕಂಪೆನಿ ತಿಳಿಸಿದೆ. ಪ್ರತಿವರ್ಷದಂತೆಯೇ, ಈ ಭಾರಿ ಕೂಡ ಅಮೆಜಾನ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಬಹಳಷ್ಟು ವಿಶೇಷ ವ್ಯವಹಾರಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

Amazon Prime Day Sale: ಅಮೆಜಾನ್ ಪ್ರೈಮ್ ಡೇ ಸೇಲ್​ಗೆ ದಿನಗಣನೆ: ಹಿಂದೆಂದೂ ನೀಡದ ಬಂಪರ್ ಡಿಸ್ಕೌಂಟ್
Amazon Prime Day Sale 2021

ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಲು ಇ-ಕಾಮರ್ಸ್‌ಗಳತ್ತ (e-commerce) ಹೆಚ್ಚು ವಾಲುತ್ತಿದ್ದಾರೆ. ನಿವೇನಾದ್ರು ಆನ್‌ಲೈನ್‌ ಮೂಲಕ ಸ್ಮಾರ್ಟ್‌ಫೋನ್‌ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಆಸಕ್ತಿ ಹೊಂದಿದ್ದರೇ ಭರ್ಜರಿ ಮೇಳ ಶುರುವಾಗುವುದರಲ್ಲಿದೆ. ಅಮೆಜಾನ್ ಇಂಡಿಯಾದಲ್ಲಿ ಅಮೆಜಾನ್‌ ಪ್ರೈಮ್‌ ಡೇ 2021 ಸೇಲ್‌ (Amazon Prime Day Sale) ಇದೇ ಜುಲೈ 26 ರ ಸೋಮವಾರದಿಂದ ಪ್ರಾರಂಭವಾಗಲಿದೆ. ಇದು ಒಂದು ದಿನದ ನಂತರ ಜುಲೈ 27 ರಂದು ಕೊನೆಗೊಳ್ಳಲಿದೆ.

ಅಮೆಜಾನ್ ಸಂಸ್ಥೆ ಪ್ರತಿ ವರ್ಷ ಅಮೆಜಾನ್ ಪ್ರೈಮ್ ಡೇ ಸೇಲ್ ಹಮ್ಮಿಕೊಳ್ಳುತ್ತದೆ. ಆದರೆ, ಕಳೆದ ವರ್ಷ ಕೊರೋನಾ ಅವಾಂತರದಿಂದ ಅಮೆಜಾನ್ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ವರ್ಷ ಕೂಡ ಪ್ರೈಮ್ ಡೇ ಸೇಲ್ ಅನುಮಾನ ಎನ್ನಲಾಗಿತ್ತು. ಆದರೆ, ಸದ್ಯ ಅಮೆಜಾನ್‌ ಪ್ರೈಮ್‌ ಡೇ 2021 ಸೇಲ್‌ ಇದೇ ಜುಲೈ 26 ರಂದು ಶುರುವಾಗುವುದಾಗಿ ಕಂಪೆನಿ ತಿಳಿಸಿದೆ.

ಪ್ರತಿವರ್ಷದಂತೆಯೇ, ಈ ಭಾರಿ ಕೂಡ ಅಮೆಜಾನ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಬಹಳಷ್ಟು ವಿಶೇಷ ವ್ಯವಹಾರಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ, ಗ್ರಾಹಕರು ಸ್ಮಾರ್ಟ್‌ಫೋನ್‌ಗಳು, ಧರಿಸಬಹುದಾದ ಸಾಧನಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ವಸ್ತುಗಳು ಮುಂತಾದ ವಿಭಾಗಗಳಲ್ಲಿ ರಿಯಾಯಿತಿಯನ್ನು ನಿರೀಕ್ಷಿಸಬಹುದು.

ಪ್ರಮುಖವಾಗಿ ಸ್ಮಾರ್ಟ್​ಫೋನ್ ಕೋಂಬೊ ಆಫರ್ ಇರಲಿದೆಯಂತೆ. ಇದರಲ್ಲಿ ಎಕೋ ಡಾಟ್ 3rd Gen+ ಸ್ಮಾರ್ಟ್​ ಕಲರ್ ಬಲ್ಬ್ ಕೇವಲ 2,299 ರೂ. ಗೆ ಲಭ್ಯವಾಗಲಿದೆ. ಅಲ್ಲದೆ ಎಕೋ ಸ್ಮಾರ್ಟ್​ ಸ್ಪೀಕರ್ ಮತ್ತು ಸ್ಮಾರ್ಟ್​ ಡಿಸ್​ಪ್ಲೇ ಗಳ ಮೇಲೆ ಶೇ. 50 ರಷ್ಟು ರಿಯಾಯಿತಿ ಇರಲಿದೆ. LED ಸ್ಮಾರ್ಟ್​ಟಿವಿಗಳ ಮೇಲೂ ಭರ್ಜರಿ ಆಫರ್ ಇರಲಿದೆಯಂತೆ.

ಇನ್ನೂ ಅಮೆಜಾನ್ ಪ್ರೈಮ್ ಸದಸ್ಯರಿಗೆ ಆ್ಯಪಲ್, ಸ್ಯಾಮ್‌ಸಂಗ್, ಐಕ್ಯೂ, ರೆಡ್ಮಿ ಮತ್ತು ಅಮೆಜಾನ್‌ನ ಸ್ವಂತ ಎಕೋ ಡಿವೈಸ್‌ಗಳಾದ ಫೈರ್ ಟಿವಿ ಮತ್ತು ಕಿಂಡಲ್‌ನಿಂದ ಡಿವೈಸ್‌ಗಳಲ್ಲಿ ವಿಶೇಷ ರಿಯಾಯಿತಿಯನ್ನು ಪಡೆಯಬಹುದು.

ಸ್ಮಾರ್ಟ್​ಫೋನ್​ಗಳಾದ ಎಂಐ 11X, ಎಂಐ 10 ಐ, ಐಫೋನ್ 12, ಐಫೋನ್ 12 ಪ್ರೊ, ಐಫೋನ್ 11, ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 51, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20, ಐಕ್ಯೂ 7 ಮತ್ತು ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಪ್ರೈಮ್‌ ಡೇ ದಿನದಂದು ದೊಡ್ಡ ಬೆಲೆ ಕಡಿತವನ್ನು ಪಡೆಯುವ ನಿರೀಕ್ಷೆಯಿದೆ.

Super Thanks: ಹಣ ಗಳಿಸಲು ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಿದ ಯೂಟ್ಯೂಬ್: ಹೇಗೆ?, ಇಲ್ಲಿದೆ ನೋಡಿ

Samsung galaxy M21: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ನ ಗ್ಯಾಲಕ್ಸಿ ಎಮ್21 2021 ಎಡಿಷನ್ ಬಿಡುಗಡೆ

(Amazon Prime Day Sale 2021 Amazon smart home products Echo smart speaker Fire TV Stick Up To 50 per Off)