Super Thanks: ಹಣ ಗಳಿಸಲು ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಿದ ಯೂಟ್ಯೂಬ್: ಹೇಗೆ?, ಇಲ್ಲಿದೆ ನೋಡಿ

ಸೂಪರ್ ಥ್ಯಾಂಕ್ಸ್ ವೈಶಿಷ್ಟ್ಯದ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ಯೂಟ್ಯೂಬ್ ಚಾನೆಲ್​ಗೆ 2 ಡಾಲರ್ ನಿಂದ ಹಿಡಿದು 50 ಡಾಲರ್ ವರೆಗೆ ಹಣ ನೀಡಬಹುದಾಗಿದೆ.

Super Thanks: ಹಣ ಗಳಿಸಲು ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಿದ ಯೂಟ್ಯೂಬ್: ಹೇಗೆ?, ಇಲ್ಲಿದೆ ನೋಡಿ
Youtube
Follow us
TV9 Web
| Updated By: Vinay Bhat

Updated on:Jul 22, 2021 | 9:11 AM

ಕಾಲಕಾಲಕ್ಕೆ ಹೊಸ ಹೊಸ ಫೀಚರ್​ಗಳನ್ನು ಪರಿಯಿಸುತ್ತಿರುವ ಗೂಗಲ್ (Google) ಒಡೆತನದ ಯೂಟ್ಯೂಬ್ (Youtube) ಸದ್ಯ ಹಣಗಳಿಸಲು ಹೊಸ ಆಯ್ಕೆಯೊಂದನ್ನು ನೀಡಿದೆ. ಯುಟ್ಯೂಬ್  ಕಂಟೆಂಟ್ ನಿರ್ಮಾಣದಲ್ಲಿ ತೊಡಗಿರುವ ಕ್ರಿಯೆಟರ್ ಗಳಿಗಾಗಿ ಸೂಪರ್ ಥ್ಯಾಂಕ್ಸ್ (Super Thanks) ಹೆಸರಿನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಆರಂಭಿಸಿದೆ. ಈ ವೈಶಿಷ್ಟ್ಯದಿಂದ ವಿಡಿಯೋ ಹಂಚಿಕೊಳ್ಳುವವರ ಆದಾಯ ಹೆಚ್ಚಾಗಲಿದೆ.

ಸೂಪರ್ ಥ್ಯಾಂಕ್ಸ್ ವೈಶಿಷ್ಟ್ಯದ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ಯೂಟ್ಯೂಬ್ ಚಾನೆಲ್​ಗೆ 2 ಡಾಲರ್ ನಿಂದ ಹಿಡಿದು 50 ಡಾಲರ್ ವರೆಗೆ ಹಣ ನೀಡಬಹುದಾಗಿದೆ. ಹಣ ಪಾವತಿ ಮಾಡಿದ ನಂತರ ಬಳಕೆದಾರರು ಕಮೆಂಟ್ ನಲ್ಲಿ ಇದನ್ನು ಹೈಲೈಟ್ ಮಾಡಬಹುದು. ಆಗ ಯಾರು, ಎಷ್ಟು ಹಣ ನೀಡಿದ್ದಾರೆ ಎಂಬುದು ಯೂಟ್ಯೂಬ್ ಗಳಿಗೆ ತಿಳಿಯಲಿದೆ.

ಒಟ್ಟು 68 ದೇಶಗಳ ಸಾವಿರಾರು ಕ್ರಿಯೇಟರ್​ಗಳಿಗೆ ಈ ಆಯ್ಕೆ ಲಭ್ಯವಿದೆ. ಯೂಟ್ಯೂಬ್​ನ ಸಹಭಾಗಿತ್ವ ಕಾರ್ಯಕ್ರಮದ ಅಡಿಯಲ್ಲಿ ಎಲ್ಲ ಅರ್ಹ ಯೂಟ್ಯೂಬರ್​ಗಳಿಗೆ ಈ ಫೀಚರ್ ವಿಸ್ತರಣೆಯಾಗಲಿದೆ. ಅಭಿಮಾನಿಗಳು ಎಕ್ಸ್ಕ್ಲೂಸಿವ್ ಕಂಟೆಂಟ್​ಗಳಿಗೆ ಚಾನೆಲ್ ಸದಸ್ಯತ್ವದ ಮೂಲಕ ಪಾವತಿ ಮಾಡಬಹುದಾಗಿದೆ. ಯೂಟ್ಯೂಬ್​ನಲ್ಲಿ ಲೈವ್​ಸ್ಟ್ರೀಮ್ ಆಗುತ್ತಿರುವ ವಿಡಿಯೋದಲ್ಲಿ ತಮ್ಮ ಕಮೆಂಟ್​ಗಳನ್ನು ಕಮೆಂಟ್ ವಿಭಾಗದ ಮೇಲ್ಭಾಗಕ್ಕೆ ಪಿನ್ ಮಾಡುವುದಕ್ಕಾಗಿ ‘ಸೂಪರ್ ಚಾಟ್’ ಹಣ ಪಾವತಿಗೂ ಅವಕಾಶ ನೀಡಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಯೂಟ್ಯೂಬ್​ನ ಮುಖ್ಯ ಉತ್ಪನ್ನ ಅಧಿಕಾರಿ ನೀಲ್ ಮೋಹನ್, “ಈ ಹೊಸ ವೈಶಿಷ್ಟ್ಯ ಯೂಟ್ಯೂಬ್ ವಿಡಿಯೋ ಸೃಷ್ಟಿಕರ್ತರಿಗೆ ಗಳಿಕೆಯ ಹೊಸ ಮಾರ್ಗತೆರೆಯಲಿದೆ. ಈ ಮೂಲಕ  ಯೂಟ್ಯೂಬ್ ವಿಷಯ ರಚನೆಕಾರರು ತಮ್ಮ ಆದಾಯದ ಮೂಲಗಳಲ್ಲಿ ವೈವಿಧ್ಯತೆಗಳನ್ನು ಸಾಧಿಸಬಹುದು” ಎಂದು ಹೇಳಿದ್ದಾರೆ.

Samsung galaxy M21: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ನ ಗ್ಯಾಲಕ್ಸಿ ಎಮ್21 2021 ಎಡಿಷನ್ ಬಿಡುಗಡೆ

ಪ್ರತಿ ಹಳ್ಳಿಗೂ ಬ್ರಾಡ್​ಬ್ಯಾಂಡ್ ಸಂಪರ್ಕ ಒದಗಿಸಲು ಕೇಂದ್ರದ ನಿರ್ಧಾರ

(YouTube rolls out money-making feature Super Thanks here is How it works)

Published On - 9:09 am, Thu, 22 July 21