KMF Recruitment 2023: ಕೆಎಂಎಫ್ ನೇಮಕಾತಿ: ತಿಂಗಳ ವೇತನ 97 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Mar 18, 2023 | 3:15 PM

KMF TUMUL Recruitment 2023: ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕೃತ ವೆಬ್​ಸೈಟ್​ tumul.coop ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

KMF Recruitment 2023: ಕೆಎಂಎಫ್ ನೇಮಕಾತಿ: ತಿಂಗಳ ವೇತನ 97 ಸಾವಿರ ರೂ.
KMF TUMUL Recruitment 2023
Follow us on

KMF TUMUL Recruitment 2023: ಕರ್ನಾಟಕ ಹಾಲು ಒಕ್ಕೂಟದ ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿನ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 219 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 17 ರೊಳಗೆ ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕೃತ ವೆಬ್​ಸೈಟ್​ tumul.coop ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು? ವೇತನ ಎಷ್ಟಿರಲಿದೆ ಎಂಬಿತ್ಯಾದಿ ಮಾಹಿತಿಗಳ ಸಂಪೂರ್ಣ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರಗಳು:

  • ಸಂಸ್ಥೆಯ ಹೆಸರು : KMF ತುಮಕೂರು ಕೋ-ಆಪರೇಟಿವ್ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ( KMF TUMUL)
  • ಹುದ್ದೆಗಳು ಸಂಖ್ಯೆ: 219
  • ಉದ್ಯೋಗ ಸ್ಥಳ: ತುಮಕೂರು – ಕರ್ನಾಟಕ
  • ಹುದ್ದೆಯ ಹೆಸರು: ಸಹಾಯಕ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್

ಹುದ್ದೆಗಳ ವಿವರ ಮತ್ತು ಸಂಖ್ಯೆ:

ಇದನ್ನೂ ಓದಿ
FCI Recruitment 2023: ಭಾರತೀಯ ಆಹಾರ ನಿಗಮದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 1.80 ಲಕ್ಷ ರೂ.
DC Office Belagavi Recruitment 2023: ಬೆಳಗಾವಿ ಜಿಲ್ಲೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
DC Office Recruitment 2023: ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗಾವಕಾಶ: ವಿದ್ಯಾರ್ಹತೆ ಬೇಕಿಲ್ಲ, ಕನ್ನಡ ಗೊತ್ತಿದ್ದರೆ ಸಾಕು..!
Canara Bank Recruitment 2023: ಕೆನರಾ ಬ್ಯಾಂಕ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ
  • ಸಹಾಯಕ ವ್ಯವಸ್ಥಾಪಕ – 28 ಹುದ್ದೆಗಳು
  • ವೈದ್ಯಕೀಯ ಅಧಿಕಾರಿ- 1 ಹುದ್ದೆ
  • ಆಡಳಿತ ಅಧಿಕಾರಿ- 1 ಹುದ್ದೆ
  • ಖರೀದಿ/ಸ್ಟೋರ್​ಕೀಪರ್- 3 ಹುದ್ದೆಗಳು
  • MIS/ಸಿಸ್ಟಮ್ ಅಧಿಕಾರಿ- 1 ಹುದ್ದೆ
  • ಲೆಕ್ಕಪತ್ರ ಅಧಿಕಾರಿ- 2 ಹುದ್ದೆಗಳು
  • ಮಾರ್ಕೆಟಿಂಗ್ ಅಧಿಕಾರಿ- 3 ಹುದ್ದೆಗಳು
  • ತಾಂತ್ರಿಕ ಅಧಿಕಾರಿ- 14 ಹುದ್ದೆಗಳು
  • ತಂತ್ರಜ್ಞ- 1 ಹುದ್ದೆ
  • ವಿಸ್ತರಣಾಧಿಕಾರಿ- 22 ಹುದ್ದೆ
  • MIS ಸಹಾಯಕ ಗ್ರೇಡ್I- 2 ಹುದ್ದೆಗಳು
  • ಆಡಳಿತ ಸಹಾಯಕ ಗ್ರೇಡ್ 2- 13 ಹುದ್ದೆಗಳು
  • ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್2- 12 ಹುದ್ದೆಗಳು
  • ಮಾರ್ಕೆಟಿಂಗ್ ಸಹಾಯಕ ಗ್ರೇಡ್2- 18 ಹುದ್ದೆಗಳು
  • ಖರೀದಿ ಸಹಾಯಕ ಗ್ರೇಡ್2 – 6 ಹುದ್ದೆಗಳು
  • ರಸಾಯನಶಾಸ್ತ್ರಜ್ಞ ಗ್ರೇಡ್2- 4 ಹುದ್ದೆಗಳು
  • ಜೂನಿಯರ್ ಸಿಸ್ಟಮ್ ಆಪರೇಟರ್- 10 ಹುದ್ದೆಗಳು
  • ಕೋ-ಆರ್ಡಿನೇಟರ್ (ರಕ್ಷಣೆ)- 2 ಹುದ್ದೆಗಳು
  • ದೂರವಾಣಿ ನಿರ್ವಾಹಕ- 2 ಹುದ್ದೆಗಳು
  • ಜೂನಿಯರ್ ತಂತ್ರಜ್ಞ- 64 ಹುದ್ದೆಗಳು
  • ಚಾಲಕರು- 8 ಹುದ್ದೆಗಳು
  • ಲ್ಯಾಬ್ ಸಹಾಯಕ- 2 ಹುದ್ದೆಗಳು

ಅರ್ಹತಾ ಮಾನದಂಡಗಳು:

  • ಸಹಾಯಕ ವ್ಯವಸ್ಥಾಪಕ: BVSc & AH, ಎಂಜಿನಿಯರಿಂಗ್‌ನಲ್ಲಿ ಪದವಿ, M.Sc, ಸ್ನಾತಕೋತ್ತರ ಪದವಿ ಮಾಡಿರಬೇಕು.
  • ವೈದ್ಯಕೀಯ ಅಧಿಕಾರಿ: ಎಂಬಿಬಿಎಸ್ ಮಾಡಿರಬೇಕು.
  • ಆಡಳಿತಾಧಿಕಾರಿ: LLB, BAL, MBA, MSW ಪದವಿ ಮಾಡಿರಬೇಕು.
  • ಖರೀದಿ/ಸ್ಟೋರ್​ಕೀಪರ್ : BBM, BBA, M.Com, MBA, ಸ್ನಾತಕೋತ್ತರ ಮಾಡಿರಬೇಕು.
  • MIS/ಸಿಸ್ಟಮ್ ಆಫೀಸರ್: BE (CS/IS/E&C), MCA ಪದವಿ ಮಾಡಿರಬೇಕು.
  • ಅಕೌಂಟ್ಸ್ ಆಫೀಸರ್: M.Com, MBA (ಫೈನಾನ್ಸ್) ಮಾಡಿರಬೇಕು.
  • ಮಾರ್ಕೆಟಿಂಗ್ ಅಧಿಕಾರಿ: B.Sc, MBA (ಮಾರ್ಕೆಟಿಂಗ್) ಮಾಡಿರಬೇಕು.
  • ತಾಂತ್ರಿಕ ಅಧಿಕಾರಿ: ಬಿ.ಟೆಕ್ (ಡಿಟಿ) ಮಾಡಿರಬೇಕು.
  • ತಂತ್ರಜ್ಞ: ಮೆಕ್ಯಾನಿಕಲ್‌ನಲ್ಲಿ ಬಿಇ, ಸಿವಿಲ್, ಎಂಎಸ್ಸಿ ಪದವಿ ಮಾಡಿರಬೇಕು.
  • ವಿಸ್ತರಣಾ ಅಧಿಕಾರಿ: ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.
  • MIS ಸಹಾಯಕ ಗ್ರೇಡ್-I: B.Sc, BCA, BE (CS) ಮಾಡಿರಬೇಕು.
  • ಆಡಳಿತ ಸಹಾಯಕ ಗ್ರೇಡ್-2: ಯಾವುದಾದರು ಪದವಿ ಹೊಂದಿರಬೇಕು.
  • ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2: ಬಿ.ಕಾಂ ಪದವಿ ಮಾಡಿರಬೇಕು.
  • ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್-2: ಬಿಬಿಎ, ಬಿಬಿಎಂ ಮಾಡಿರಬೇಕು.
  • ಖರೀದಿ ಸಹಾಯಕ ಗ್ರೇಡ್-2: ಯಾವುದಾದರು ಪದವಿ ಹೊಂದಿರಬೇಕು.
  • ರಸಾಯನಶಾಸ್ತ್ರಜ್ಞ ಗ್ರೇಡ್-2: ವಿಜ್ಞಾನದಲ್ಲಿ ಪದವಿ ಮಾಡಿರಬೇಕು.
  • ಜೂನಿಯರ್ ಸಿಸ್ಟಮ್ ಆಪರೇಟರ್: B.Sc, BCA, BE (CS/IS) ಮಾಡಿರಬೇಕು.
  • ಕೋ-ಆರ್ಡಿನೇಟರ್ (ಪ್ರೊಟೆಕ್ಷನ್): ಎಸ್.ಎಸ್.ಎಲ್.ಸಿ ಪಾಸ್ ಆಗಿರಬೇಕು.
  • ಟೆಲಿಫೋನ್ ಆಪರೇಟರ್: ಯಾವುದೇ ಪದವಿ ಹೊಂದಿರಬೇಕು.
  • ಜೂನಿಯರ್ ಟೆಕ್ನಿಷಿಯನ್: SSLC, ಮೆಕ್ಯಾನಿಕಲ್/ಎಲೆಕ್ಟ್ರಿಕಲ್/E&C ನಲ್ಲಿ ಡಿಪ್ಲೊಮಾ, ITI ಮಾಡಿರಬೇಕು.
  • ಚಾಲಕರು: SSLC ಪಾಸ್ ಆಗಿರಬೇಕು. ಜೊತೆ LMV/HMV ಚಾಲನಾ ಪರವಾನಗಿ ಹೊಂದಿರಬೇಕು.
  • ಲ್ಯಾಬ್ ಅಸಿಸ್ಟೆಂಟ್: ಪಿಯುಸಿ ಪಾಸ್ ಆಗಿರಬೇಕು.

ವಯೋಮಿತಿ:

KMF ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. ಇನ್ನು ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವೇತನ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ವೇತನ ನಿಗದಿ ಮಾಡಲಾಗುತ್ತದೆ. ಅಂದರಂತೆ ಕನಿಷ್ಠ 21 ಸಾವಿರದಿಂದ ಗರಿಷ್ಠ 97 ಸಾವಿರದವರೆಗೆ ವೇತನ ಸಿಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಪರಿಶೀಲಿಸಬಹುದು.

ಅರ್ಜಿ ಶುಲ್ಕ:

  • SC/ST/Cat-I ಅಭ್ಯರ್ಥಿಗಳಿಗೆ: ರೂ.500/-
  • ಇತರ ಎಲ್ಲಾ ಅಭ್ಯರ್ಥಿಗಳಿಗೆ: ರೂ.1000/-

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್​ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕ:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಏಪ್ರಿಲ್ 17, 2023

ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್‌ಗಳು:

 

 

Published On - 3:14 pm, Sat, 18 March 23