KSP Recruitment 2021: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: Digi Tech Desk

Updated on: May 25, 2021 | 9:52 PM

ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆಗೆ ಆಹ್ವಾನ ನೀಡಲಾಗಿದ್ದು, ಜೂನ್​ 25, 2021 ಕಡೆಯ ದಿನಾಂಕವಾಗಿದೆ. ಪುರುಷ ಮತ್ತು ಸ್ತ್ರೀ ಅಭ್ಯರ್ಥಿಗಳನ್ನೊಳಗೊಂಡ ಒಟ್ಟು 4,000 ಹುದ್ದೆಗಳು ಖಾಲಿ ಇದ್ದು, ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ.

KSP Recruitment 2021: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ದುರ್ದೆಸೆಯಿಂದ ಔದ್ಯೋಗಿಕ ವಲಯ ಸಂಪೂರ್ಣ ಕಳೆಗುಂದಿದೆ. ವಿದ್ಯಾಭ್ಯಾಸ ಮುಗಿಸಿ ಸಂಬಳ ಕಾಣುವ ಆಸೆಯಲ್ಲಿದ್ದವರಿಗೆ, ಹೊಸ ಕೆಲಸಗಳ ಅನ್ವೇಷಣೆಯಲ್ಲಿದ್ದವರಿಗೆ, ಉದ್ಯೋಗಲ್ಲಿ ಉನ್ನತ ಹಂತಕ್ಕೆ ತಲುಪುವ ನಿರೀಕ್ಷೆಯಲ್ಲಿದ್ದವರಿಗೆ ಕೊರೊನಾ ಬಲವಾದ ಹೊಡೆತ ನೀಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಉದ್ಯೋಗವನ್ನರಸುತ್ತಿರುವ ಕನ್ನಡಿಗರಿಗೆ ಆಶಾದಾಯಕ ಎನ್ನಬಲ್ಲ ಸುದ್ದಿಯೊಂದು ಇಲ್ಲಿದೆ. ದ್ವಿತೀಯ ಪಿಯು ಉತ್ತೀರ್ಣರಾದವರಿಗೆ 4,000 ಸರ್ಕಾರಿ ಹುದ್ದೆ ಲಭ್ಯವಿದ್ದು, ಕರ್ನಾಟಕ ರಾಜ್ಯ ಪೊಲೀಸ್ (KSP) ವತಿಯಿಂದ ಈ ಸಂಬಂಧ ಪ್ರಕಟಣೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್​ ಹುದ್ದೆಗಳು ಖಾಲಿ ಇದ್ದು, ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆಗೆ ಆಹ್ವಾನ ನೀಡಲಾಗಿದ್ದು, ಜೂನ್​ 25, 2021 ಕಡೆಯ ದಿನಾಂಕವಾಗಿದೆ. ಪುರುಷ ಮತ್ತು ಸ್ತ್ರೀ ಅಭ್ಯರ್ಥಿಗಳನ್ನೊಳಗೊಂಡ ಒಟ್ಟು 4,000 ಹುದ್ದೆಗಳು ಖಾಲಿ ಇದ್ದು, ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ.

ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ?
ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಆಯ್ಕೆಯಾಗಲು ಲಿಖಿತ ಪರೀಕ್ಷೆಯನ್ನು ಬರೆಯಬೇಕಿದ್ದು ನಂತರ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲೂ ಉತ್ತೀರ್ಣರಾಗಬೇಕಿದೆ. ಈ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ತೋರಿದವರಿಗೆ ಉದ್ಯೋಗ ಲಭಿಸುವ ಅವಕಾಶವಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್​​ಲೈನ್ ಮುಖೇನ ಅರ್ಜಿ ಸಲ್ಲಿಸಬೇಕಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹400 ಹಾಗೂ SC, ST ಮತ್ತು CAT ವರ್ಗದ ಅಭ್ಯರ್ಥಿಗಳಿಗೆ ₹200 ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು 2021ರ ಜೂನ್ 25ರ ತನಕ ಸಮಯಾವಕಾಶವನ್ನೂ ನೀಡಲಾಗಿದೆ.

ಅರ್ಹತೆ ಏನು?
ವಯೋಮಿತಿ 19ರಿಂದ 25ರೊಳಗಿರಬೇಕು ಹಾಗೂ ದ್ವಿತೀಯ ಪಿಯು ಅಥವಾ ಅದಕ್ಕೆ ಸರಿಸಮನಾದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಇದರ ಹೊರತಾದ ಅರ್ಹತಾ ವಿವರ ಸೇರಿದಂತೆ ಎಲ್ಲಾ ಬಗೆಯ ಮಾಹಿತಿ ಕರ್ನಾಟಕ ರಾಜ್ಯ ಪೊಲೀಸ್​ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದೆ.

ಅರ್ಜಿ ಸಲ್ಲಿಸಲು ಇಚ್ಛಿಸುವವರು recruitment.ksp.gov.in ಅಥವಾ cpc21.ksp-online.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ಇಲ್ಲವೇ ಇಲ್ಲಿ ಕ್ಲಿಕ್​ ಮಾಡುವ ಮೂಲಕ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬಹುದು.

ಇದನ್ನೂ ಓದಿ:
ಲಾಕ್​ಡೌನ್ ಹಿನ್ನೆಲೆ ಮನೆ ಬಾಡಿಗೆದಾರರು, ಕಂಪನಿ ಉದ್ಯೋಗಿಗಳಿಗೆ ಹೊಸ ಆದೇಶ ಕೊಟ್ಟ ಸರ್ಕಾರ 

ಈಗಷ್ಟೇ ಓದು ಮುಗಿಸಿರುವ ಹೈದರಾಬಾದ್​ ಹುಡುಗಿಗೆ 2 ಕೋಟಿ ರೂಪಾಯಿ ಸಂಬಳದ ಕೆಲಸ ನೀಡಿದ ಮೈಕ್ರೋಸಾಫ್ಟ್

Published On - 9:09 pm, Tue, 25 May 21