KSRLPS Recruitment 2023: ಸರ್ಕಾರಿ ಹುದ್ದೆಗಳ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ

| Updated By: ಝಾಹಿರ್ ಯೂಸುಫ್

Updated on: Jun 20, 2023 | 2:06 PM

KSRLPS Recruitment 2023: ಈ ನೇಮಕಾತಿ ಅಡಿಯಲ್ಲಿ ಒಟ್ಟು 25 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು,  ಆಸಕ್ತ ಅಭ್ಯರ್ಥಿಗಳು ಜೂನ್ 27 ರಿಂದ ಜೂ. 30 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

KSRLPS Recruitment 2023: ಸರ್ಕಾರಿ ಹುದ್ದೆಗಳ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ
KSRLPS Recruitment 2023
Follow us on

KSRLPS Recruitment 2023: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿಯು (KSRLPS) ಕ್ಲಸ್ಟರ್ ಮೇಲ್ವಿಚಾರಕರು, ಕಛೇರಿ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 25 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು,  ಆಸಕ್ತ ಅಭ್ಯರ್ಥಿಗಳು ಜೂನ್ 27 ರಿಂದ ಜೂ. 30 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ಸಂಕ್ಷಿಪ್ತ ಮಾಹಿತಿ:

  • ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ( KSRLPS )
  • ಒಟ್ಟು ಹುದ್ದೆಗಳ ಸಂಖ್ಯೆ: 25
  • ಉದ್ಯೋಗ ಸ್ಥಳ: ಚಾಮರಾಜನಗರ ಮತ್ತು ಬೆಂಗಳೂರು
  • ಹುದ್ದೆಗಳ ಹೆಸರು: ಕ್ಲಸ್ಟರ್ ಮೇಲ್ವಿಚಾರಕರು, ಕಚೇರಿ ಸಹಾಯಕ

ಹುದ್ದೆಯ ವಿವರಗಳು:

  • ಕ್ಲಸ್ಟರ್ ಮೇಲ್ವಿಚಾರಕ-ಕೌಶಲ್ಯ- 4 ಹುದ್ದೆಗಳು
  • ಜಿಲ್ಲಾ ವ್ಯವಸ್ಥಾಪಕರು ಜೀವನೋಪಾಯ- 2 ಹುದ್ದೆಗಳು
  • ಕಚೇರಿ ಸಹಾಯಕ- 2 ಹುದ್ದೆಗಳು
  • ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯ- 8 ಹುದ್ದೆಗಳು
  • ಬ್ಲಾಕ್ ಮ್ಯಾನೇಜರ್-ಫಾರ್ಮ್ ಜೀವನೋಪಾಯ- 8 ಹುದ್ದೆಗಳು
  • ತಾಲೂಕು ಕಾರ್ಯಕ್ರಮ ನಿರ್ವಾಹಕ- 1 ಹುದ್ದೆ

ವಿದ್ಯಾರ್ಹತೆ:

  • ಕ್ಲಸ್ಟರ್ ಮೇಲ್ವಿಚಾರಕ-ಕೌಶಲ್ಯ- ಪದವಿ
  • ಜಿಲ್ಲಾ ವ್ಯವಸ್ಥಾಪಕರು ಜೀವನೋಪಾಯ- M.Sc, B.Sc, ಸ್ನಾತಕೋತ್ತರ ಪದವಿ
  • ಕಚೇರಿ ಸಹಾಯಕ- ಪದವಿ
  • ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯ- M.Sc, B.Sc, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿ
  • ಬ್ಲಾಕ್ ಮ್ಯಾನೇಜರ್-ಫಾರ್ಮ್ ಜೀವನೋಪಾಯ- B.Sc, M.Sc, ಸ್ನಾತಕೋತ್ತರ ಪದವಿ
  • ತಾಲೂಕು ಕಾರ್ಯಕ್ರಮ ನಿರ್ವಾಹಕ- ಸ್ನಾತಕೋತ್ತರ ಪದವಿ

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

  • ಕ್ಲಸ್ಟರ್ ಮೇಲ್ವಿಚಾರಕ-ಕೌಶಲ್ಯ: 30-06-2023
  • ಜಿಲ್ಲಾ ವ್ಯವಸ್ಥಾಪಕರು ಜೀವನೋಪಾಯ: 27-06-2023
  • ಕಚೇರಿ ಸಹಾಯಕ: 27-06-2023
  • ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯ: 27-06-2023
  • ಬ್ಲಾಕ್ ಮ್ಯಾನೇಜರ್-ಫಾರ್ಮ್ ಜೀವನೋಪಾಯ: 27-06-2023
  • ತಾಲೂಕು ಕಾರ್ಯಕ್ರಮ ನಿರ್ವಾಹಕ: 27-06-2023

ಇದನ್ನೂ ಓದಿ: SAI Recruitment 2023: ಕ್ರೀಡಾ ಪ್ರಾಧಿಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ: ಆರಂಭಿಕ ವೇತನ 78 ಸಾವಿರ ರೂ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್‌ಸೈಟ್: ksrlps.karnataka.gov.in

 

 

Published On - 2:04 pm, Tue, 20 June 23