
ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಉತ್ತಮ ಅವಕಾಶ ನೀಡಿದೆ. NCERT ಆಂಕರ್, ವಿಡಿಯೋ ಎಡಿಟರ್, ಕ್ಯಾಮೆರಾ ಪರ್ಸನ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.ncert.nic.in ಗೆ ಭೇಟಿ ನೀಡುವ ಮೂಲಕ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
NCERT ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ವಿವಿಧ ಹುದ್ದೆಗಳಿಗೆ ಸಂದರ್ಶನಗಳು ಮಾರ್ಚ್ 17 ರಿಂದ ಮಾರ್ಚ್ 22, 2025 ರವರೆಗೆ ನಡೆಯಲಿವೆ. ಆಂಕರ್ (ಹಿಂದಿ ಮತ್ತು ಇಂಗ್ಲಿಷ್) ಹುದ್ದೆಗಳಿಗೆ ಮಾರ್ಚ್ 17, ರಂದು, ಪ್ರೊಡಕ್ಷನ್ ಅಸಿಸ್ಟೆಂಟ್ (ವಿಡಿಯೋ ಮತ್ತು ಆಡಿಯೋ) ಹುದ್ದೆಗಳಿಗೆ ಮಾರ್ಚ್ 18 ರಂದು, ವಿಡಿಯೋ ಎಡಿಟರ್ ಹುದ್ದೆಗಳಿಗೆ ಮಾರ್ಚ್ 19 ರಂದು, ಸೌಂಡ್ ರೆಕಾರ್ಡಿಸ್ಟ್ ಹುದ್ದೆಗಳಿಗೆ ಮಾರ್ಚ್ 20 ರಂದು, ಕ್ಯಾಮೆರಾ ಪರ್ಸನ್ ಹುದ್ದೆಗಳಿಗೆ ಮಾರ್ಚ್ 21 ರಂದು ಮತ್ತು ಗ್ರಾಫಿಕ್ ಅಸಿಸ್ಟೆಂಟ್/ಆರ್ಟಿಸ್ಟ್ ಹುದ್ದೆಗಳಿಗೆ ಮಾರ್ಚ್ 22 ರಂದು ಸಂದರ್ಶನ ನಡೆಯಲಿದೆ.
ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ
ಸಂದರ್ಶನಕ್ಕೆ ಹಾಜರಾಗಲು ಅಭ್ಯರ್ಥಿಗಳು ಬೆಳಿಗ್ಗೆ 9 ಗಂಟೆಗೆ ಸಿಐಇಟಿ, ಎನ್‌ಸಿಇಆರ್‌ಟಿ, ನವದೆಹಲಿಯನ್ನು ತಲುಪಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 60 ಸಾವಿರ ರೂ. ವೇತನ ಸಿಗಲಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಸಹಾಯ ಪಡೆಯಬಹುದು.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Wed, 12 March 25