AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET PG Exam 2025: ನೀಟ್‌-ಪಿಜಿ ಪರೀಕ್ಷೆಯ ನೂತನ ದಿನಾಂಕ ಪ್ರಕಟ; ಆ​​. 3ರಂದು ನಡೆಸಲು ನಿರ್ಧಾರ

ಸುಪ್ರೀಂ ಕೋರ್ಟ್ ನೀಟ್ ಪಿಜಿ ಪರೀಕ್ಷೆಯನ್ನು ಆಗಸ್ಟ್ 3 ರಂದು ಒಂದೇ ಪಾಳಿಯಲ್ಲಿ ನಡೆಸಲು ಆದೇಶಿಸಿದೆ. ಮೊದಲು ಜೂನ್ 15ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಪಾರದರ್ಶಕತೆ ಮತ್ತು ಭದ್ರತೆಗಾಗಿ ಮುಂದೂಡಲಾಗಿದೆ. NBEMS ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಏಕ ಪಾಳಿಯ ಪರೀಕ್ಷೆಯಿಂದಾಗಿ ದಿನಾಂಕ ಬದಲಾವಣೆ ಅನಿವಾರ್ಯ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ NBEMS ಅರ್ಜಿಯನ್ನು ಅನುಮೋದಿಸಿದೆ.

NEET PG Exam 2025: ನೀಟ್‌-ಪಿಜಿ ಪರೀಕ್ಷೆಯ ನೂತನ ದಿನಾಂಕ ಪ್ರಕಟ; ಆ​​. 3ರಂದು ನಡೆಸಲು ನಿರ್ಧಾರ
Neet Pg 2025 Exam Postponed
ಅಕ್ಷತಾ ವರ್ಕಾಡಿ
|

Updated on:Jun 06, 2025 | 3:34 PM

Share

ನೀಟ್ ಪಿಜಿ ಪರೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ನ್ಯಾಯಾಲಯದ ಆದೇಶದಂತೆ, ನೀಟ್ ಪಿಜಿ 2025 ಪರೀಕ್ಷೆಯನ್ನು ಆಗಸ್ಟ್ 3 ರಂದು ಒಂದೇ ಪಾಳಿಯಲ್ಲಿ ನಡೆಸಲಾಗುವುದು. ಸುಪ್ರೀಂ ಕೋರ್ಟ್ ಎನ್‌ಬಿಇ ಅರ್ಜಿಯನ್ನು ಅನುಮೋದಿಸಿದೆ. ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸುವುದರಿಂದ ದಿನಾಂಕವನ್ನು ವಿಸ್ತರಿಸಬೇಕಾಗಿದೆ ಎಂದು ವಕೀಲರು ಹೇಳಿದ್ದಾರೆ. ಈ ಮೊದಲು ಜೂನ್ 15ರಂದು ನೀಟ್-ಪಿಜಿ ಪರೀಕ್ಷೆ ನಿಗದಿಯಾಗಿತ್ತು.

ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಒಂದೇ ಪಾಳಿಯಲ್ಲಿ ಪರೀಕ್ಷೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಸೋಮವಾರ NEET-PG 2025 ಪರೀಕ್ಷೆಯನ್ನು ಮುಂದೂಡುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: ವಿದೇಶದಲ್ಲಿ MBBS ಓದುವ ಭಾರತೀಯರ ಗಮನಕ್ಕೆ, ಈ ವಿಷ್ಯ ಗೊತ್ತಿಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ

ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ವಿಸ್ತರಿಸುವುದು, ನ್ಯಾಯಸಮ್ಮತತೆ ಮತ್ತು ಭದ್ರತೆಗಾಗಿ ನ್ಯಾಯಾಲಯದ ಮಾನದಂಡಗಳನ್ನು ಪೂರೈಸಲು ಅಗತ್ಯವಿರುವ ಮೂಲಸೌಕರ್ಯವನ್ನು ನವೀಕರಿಸುವುದು ಮುಂದೂಡಿಕೆಯ ಗುರಿಯಾಗಿದೆ ಎಂದು ಮಂಡಳಿ ಒತ್ತಿ ಹೇಳಿದೆ. ದೇಶಾದ್ಯಂತ ಈಗ ಪರೀಕ್ಷಾ ಕೇಂದ್ರಗಳ ಸಂಖ್ಯೆ ದುಪ್ಪಟ್ಟು ಮಾಡಲಾಗಿದೆ ಎಂದು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ ಮಾಹಿತಿ ತಿಳಿಸಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Fri, 6 June 25