ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬುಧವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಅಂಕಿ ಅಂಶಗಳ ಮಾಹಿತಿಯೊಂದಿಗೆ ಈ ವರ್ಷದ ಆಗಸ್ಟ್‌ನಲ್ಲಿ ಸೇರಿಸಲಾದ ಹೊಸ ಉದ್ಯೋಗಿಗಳ ಸಂಖ್ಯೆ 1.85 ಮಿಲಿಯನ್ ಆಗಿದ್ದು , ತಿಂಗಳಿನಿಂದ ತಿಂಗಳಿಗೆ 1.6 ಶೇಕಡಾ ಹೆಚ್ಚಳವಾಗಿದೆ. ಇಪಿಎಫ್‌ಒಗೆ ಸೇರಿರುವ ಹೊಸ ಉದ್ಯೋಗಿಗಳ ಸಂಖ್ಯೆ ಏಪ್ರಿಲ್‌ನಲ್ಲಿ 1.41 ಮಿಲಿಯನ್, ಮೇನಲ್ಲಿ 1.51 ಮಿಲಿಯನ್, ಜೂನ್‌ನಲ್ಲಿ 1.67 ಮಿಲಿಯನ್ ಮತ್ತು ಜುಲೈನಲ್ಲಿ 1.99 ಮಿಲಿಯನ್ ಎನ್ನಲಾಗಿದೆ.
ಈ ಅಂಕಿ ಅಂಶಗಳ ಪ್ರಕಾರ, ಸೆಪ್ಟೆಂಬರ್ 2024 ರಲ್ಲಿ ಸುಮಾರು 0.95 ಮಿಲಿಯನ್ ಹೊಸ ಸದಸ್ಯರು ಸೇರಿಕೊಂಡಿದ್ದಾರೆ, ಇದು ಸೆಪ್ಟೆಂಬರ್ 2023 ಕ್ಕೆ ಹೋಲಿಸಿದರೆ 6.2% ರಷ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಉದ್ಯೋಗಿಗಳ ಪ್ರಯೋಜನಗಳ ಬಗ್ಗೆ ಹೆಚ್ಚಿದ ಜಾಗೃತಿ ಮತ್ತು ಇಪಿಎಫ್ಒನ ಕುರಿತಾದ ಕಾರ್ಯಕ್ರಮಗಳು ಹೊಸ ಸದಸ್ಯತ್ವಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದು ದೇಶದಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳಿಗೆ ಸಾಕ್ಷಿಯಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅದಲ್ಲದೇ, ಸೆಪ್ಟೆಂಬರ್ 2024 ರಲ್ಲಿ ದಾಖಲಾದವರಲ್ಲಿ 0.84 ಮಿಲಿಯನ್ ಜನರು 18 ರಿಂದ 25 ವರ್ಷ ವಯಸ್ಸಿನವರಾಗಿದ್ದು, ಯುವಕರು ದೇಶೀಯ ಉದ್ಯೋಗಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ವೇತನದಾರರ ದತ್ತಾಂಶದಲ್ಲಿ 1.41 ಮಿಲಿಯನ್ ಸದಸ್ಯರು ಇಪಿಎಫ್‌ಒನಿಂದ ನಿರ್ಗಮಿಸಿದ್ದಾರೆ, ಮತ್ತೆ ಅಷ್ಟೇ ಪ್ರಮಾಣದಲ್ಲಿ ಸದಸ್ಯರು ಸೇರಿಕೊಂಡಿದ್ದಾರೆ.
ಇದನ್ನೂ ಓದಿ: 70 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ವಿಮೆ! ಯೋಜನೆ ಕುರಿತಾದ ಮಾಹಿತಿ ಇಲ್ಲಿದೆ
ಹೀಗಾಗಿ ಸೆಪ್ಟೆಂಬರ್ 2023 ಕ್ಕೆ ಹೋಲಿಸಿದರೆ, 18.2 ಶೇಕಡಾ ಏರಿಕೆಯಾಗಿದೆ. ಅದಲ್ಲದೇ, ಸೆಪ್ಟೆಂಬರ್‌ನಲ್ಲಿ 0.37 ಮಿಲಿಯನ್ ಮಹಿಳಾ ಸದಸ್ಯರು ಇಪಿಎಫ್‌ಒಗೆ ಸೇರಿದ್ದಾರೆ. 2023 ಕ್ಕೆ ಹೋಲಿಸಿದರೆ 12.1 ಶೇಕಡಾ ಹೆಚ್ಚಳ ಕಂಡಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ ಮತ್ತು ಗುಜರಾತ್‌ನಿಂದ 1.13 ಮಿಲಿಯನ್ ಸದಸ್ಯರನ್ನು ಇಪಿಎಫ್ ಅಡಿಯಲ್ಲಿ ಉದ್ಯೋಗಕ್ಕೆ ಸೇರಿಸಲಾಗಿದೆ. ಈ ಸದಸ್ಯರ ಪೈಕಿ ಮಹಾರಾಷ್ಟ್ರವೊಂದರ ಒಟ್ಟು ಪಾಲು ಶೇ.21.2 ರಷ್ಟಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ