ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(NIMHANS) ಅಧಿಕೃತ ಅಧಿಸೂಚನೆಯ ಮೂಲಕ ಫೀಲ್ಡ್ ಡೇಟಾ ಕಲೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 19ರಂದು ಬೆಳಿಗ್ಗೆ 10:00 ಗಂಟೆಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
NIMHANS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಪಿಯುಸಿ, ಐಟಿಐ, ಮನೋವಿಜ್ಞಾನ/ಸಮಾಜಶಾಸ್ತ್ರ/ಗ್ರಾಮೀಣಾಭಿವೃದ್ಧಿ/ಮಹಿಳಾ ಅಧ್ಯಯನದಲ್ಲಿ ಪದವಿಯನ್ನು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು .
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 40 ವರ್ಷಗಳು.
ಇದನ್ನೂ ಓದಿ: ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಸುವರ್ಣವಕಾಶ; ತಿಂಗಳಿಗೆ 60 ಸಾವಿರ ರೂ. ಸಂಬಳ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಮಾಡಲಾಗುತ್ತದೆ.
ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ಮಾರ್ಚ್ 19ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಸಂದರ್ಶನ ನಡೆಯುವ ಸ್ಥಳ: ಪರೀಕ್ಷಾ ಹಾಲ್, 4 ನೇ ಮಹಡಿ, NBRC ಕಟ್ಟಡ, ನಿಮ್ಹಾನ್ಸ್, ಬೆಂಗಳೂರು-560029, ಕರ್ನಾಟಕ
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Fri, 14 March 25