
ಭಾರತೀಯ ಮಿಲಿಟರಿ ಅಕಾಡೆಮಿಯ (IMA) 157 ನೇ ಪಾಸಿಂಗ್ ಔಟ್ ಪೆರೇಡ್ ಭಾನುವಾರ ಡೆಹ್ರಾಡೂನ್‌ನಲ್ಲಿ ಮುಕ್ತಾಯಗೊಂಡಿದೆ. IMA ಪಾಸಿಂಗ್ ಔಟ್ ಪೆರೇಡ್ ನಂತರ, 491 ಲೆಫ್ಟಿನೆಂಟ್‌ಗಳಾಗಿ ಪದವಿ ಸ್ವೀಕರಿಸಿದ್ದಾರೆ. ಇವರ ಮಧ್ಯೆ ಸಾಯಿ ಜಾಧವ್ ಸದ್ಯ ಸುದ್ದಿಯಲ್ಲಿದ್ದಾರೆ. ಭಾರತೀಯ ಮಿಲಿಟರಿ ಅಕಾಡೆಮಿಯ 93 ವರ್ಷಗಳ ಇತಿಹಾಸದಲ್ಲಿ ಸಾಯಿ ಜಾಧವ್ ಕಮಿಷನ್ ಪಡೆದ ಮೊದಲ ಮಹಿಳಾ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಸಾಯಿ ಇತಿಹಾಸ ಸೃಷ್ಟಿಸಿದ್ದಾರೆ.
ಐಎಂಎ ತನ್ನ 93 ನೇ ವರ್ಷಕ್ಕೆ ಕಾಲಿಟ್ಟಿದೆ. ಸೇನಾ ಅಧಿಕಾರಿಗಳಿಗೆ ತರಬೇತಿ ನೀಡಲು ಇದನ್ನು 1992 ರಲ್ಲಿ ಡೆಹ್ರಾಡೂನ್‌ನಲ್ಲಿ ಸ್ಥಾಪಿಸಲಾಯಿತು. ಆರಂಭವಾದಾಗಿನಿಂದ, ಐಎಂಎ 67,000 ಕೆಡೆಟ್‌ಗಳಿಗೆ ತರಬೇತಿ ನೀಡಿದೆ, ಅಂದರೆ 67,000 ಕೆಡೆಟ್‌ಗಳು ತಮ್ಮ ತರಬೇತಿಯನ್ನು ಪೂರ್ಣಗೊಳಿಸಿ ಅಧಿಕಾರಿಗಳಾಗಿದ್ದಾರೆ. ಈ ವರ್ಷ ಮೊದಲ ಬಾರಿಗೆ ಮಹಿಳೆ ಅಧಿಕಾರಿ ಹೊರಹೊಮ್ಮಿದ್ದು ಹೆಮ್ಮೆಯ ವಿಷಯ.
ಸಾಯಿ ಜಾಧವ್ ಅವರು ಐಎಂಎಯಲ್ಲಿ ತರಬೇತಿ ಪೂರ್ಣಗೊಳಿಸಿ ಲೆಫ್ಟಿನೆಂಟ್ ಆದ ದೇಶದ ಮೊದಲ ಮಹಿಳಾ ಕೆಡೆಟ್. ಸಾಯಿ ಜಾಧವ್ ಅವರು ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿ. ಪಾಸಿಂಗ್ ಔಟ್ ಪೆರೇಡ್ ಪೂರ್ಣಗೊಳಿಸಿದ ನಂತರ, ಅವರ ಹೆಸರು ಐಎಂಎ ಇತಿಹಾಸದಲ್ಲಿ ಕೆತ್ತಲ್ಪಟ್ಟಿದೆ. ಅವರು ಪ್ರಾದೇಶಿಕ ಸೈನ್ಯದಲ್ಲಿ ಮೊದಲ ಮಹಿಳಾ ಲೆಫ್ಟಿನೆಂಟ್ ಆಗಿದ್ದಾರೆ. ಅವರ ತಂದೆ ಕೂಡ ಸೈನ್ಯದಲ್ಲಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಎಸ್‌ಎಸ್‌ಬಿ ಸಂದರ್ಶನದಲ್ಲಿ ಉತ್ತೀರ್ಣರಾದ ನಂತರ ಅವರನ್ನು ಆಯ್ಕೆ ಮಾಡಲಾಯಿತು. ಇದರ ನಂತರ, ಅವರು ಆರು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿ ಈಗ ಸೇನಾ ಅಧಿಕಾರಿಯಾಗಿದ್ದಾರೆ. ಪ್ರಾದೇಶಿಕ ಸೈನ್ಯದ ವಿಶೇಷ ತರಬೇತಿ ಕೋರ್ಸ್‌ಗೆ ದಾಖಲಾದ 16 ಅಧಿಕಾರಿ ಕೆಡೆಟ್‌ಗಳಲ್ಲಿ ಅವರು ಏಕೈಕ ಮಹಿಳೆಯಾಗಿದ್ದರು.
ಇದನ್ನೂ ಓದಿ: ಐಪಿಎಸ್ ಅಧಿಕಾರಿಯಾಗಲು 15 ಸರ್ಕಾರಿ ಉದ್ಯೋಗ ತೊರೆದ ತೃಪ್ತಿ ಭಟ್; ಯಶಸ್ಸಿನ ಕಥೆ ಇಲ್ಲಿದೆ
ಐಎಂಎಯ ಮುಂದಿನ ಪಾಸಿಂಗ್ ಔಟ್ ಪೆರೇಡ್ ಅಥವಾ ಪಿಒಪಿ ಜೂನ್‌ನಲ್ಲಿ ನಡೆಯಲಿದೆ. ಮೊದಲ ಬಾರಿಗೆ ಮಹಿಳಾ ಕೆಡೆಟ್‌ಗಳು ಈ ಪೆರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಇದರರ್ಥ ದೇಶವು ಜೂನ್‌ನಲ್ಲಿ ತನ್ನ ಮೊದಲ ಬ್ಯಾಚ್ ಮಹಿಳಾ ಅಧಿಕಾರಿಗಳನ್ನು ಸ್ವೀಕರಿಸಲಿದೆ. ಆದಾಗ್ಯೂ, ಸಾಯಿ ಜಾಧವ್ ಈಗಾಗಲೇ ತನ್ನ ತರಬೇತಿಯನ್ನು ಪೂರ್ಣಗೊಳಿಸುವ ಮೂಲಕ ಐಎಂಎ ಇತಿಹಾಸದಲ್ಲಿ ಮೊದಲ ಮಹಿಳಾ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ