ಅಪ್ರೆಂಟಿಸ್ ಕಾಯ್ದೆ 1961ರ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಅಪ್ರೆಂಟಿಸ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದಾದ್ಯಂತ 6100ರಷ್ಟು ಹೆಚ್ಚು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಭರ್ತಿ ಮಾಡುವುದಕ್ಕೆ ಜುಲೈ 26 ಕೊನೆ ದಿನವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಲಿಂಕ್ಗಳ ವಿವರ ಹೀಗಿವೆ:
https://nsdcindia.org/apprenticeship
https://apprenticeindia.org
https://bfsissc.com
https://bank.sbi/careers
https://www.sbi.co.in/careers
ಅಪ್ಲೈ ಮಾಡುವುದು ಹೇಗೆ: ಅಭ್ಯರ್ಥಿಗಳು ಆನ್ಲೈನ್ನಲ್ಲಿ ನೋಂದಣಿ ಮಾಡಬೇಕು. bank.sbi/careers or www.sbi.co.in/careers
ವಯೋಮಿತಿ: ಅಭ್ಯರ್ಥಿಗಳು 20ರಿಂದ 28ರೊಳಗಿರಬೇಕು.
ವಿದ್ಯಾರ್ಹತೆ: ಅಭ್ಯರ್ಥಿಗಳು ನೋಂದಾಯಿತ ವಿಶ್ವವಿದ್ಯಾಲಯ/ಶಿಕ್ಷಣ ಸಂಸ್ಥೆಯಿಂದ ಪದವಿ ಮಾಡಿರಬೇಕು.
ಆಯ್ಕೆ ವಿಧಾನ: ಆನ್ಲೈನ್ನಲ್ಲಿ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷೆ ಪರೀಕ್ಷೆ ಇರುತ್ತದೆ. ಒಂದು ವೇಳೆ ಅರ್ಜಿ ಭರ್ತಿ ಮಾಡುವುದಕ್ಕೆ ಸಮಸ್ಯೆಗಳು ಇದ್ದಲ್ಲಿ ದೂರವಾಣಿ ಸಂಖ್ಯೆ- 022- 22820427 ಇದಕ್ಕೆ ಬೆಳಗ್ಗೆ 11ರಿಂದ ಸಂಜೆ 6 ಗಂಟೆ ಮಧ್ಯೆ ಕಾರ್ಯ ನಿರ್ವಹಣೆ ದಿನಗಳಲ್ಲಿ ಕರೆ ಮಾಡಬಹುದು. ಅಥವಾ http://cgrs.ibps.in ಇದಕ್ಕೆ ಅಹವಾಲು ಸಲ್ಲಿಸಬಹುದು. ಇಮೇಲ್ ಸಬ್ಜೆಕ್ಟ್ನಲ್ಲಿ ‘Engagement of Apprentice in SBI’ ಎಂದಿರಬೇಕು.
(State Bank Of India Apprentice 6100 Post Recruitment 2021)