AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Post Recruitment 2021: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆಗೆ ಆಗಸ್ಟ್ 19 ಕೊನೆ ದಿನ

ಇಂಡಿಯನ್ ಪೋಸ್ಟ್​ನಿಂದ ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿದೆ.

India Post Recruitment 2021: ಅಂಚೆ ಇಲಾಖೆಯಲ್ಲಿ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆಗೆ ಆಗಸ್ಟ್ 19 ಕೊನೆ ದಿನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 24, 2021 | 12:39 PM

Share

ಪಶ್ಚಿಮ ಬಂಗಾಲ ವೃತ್ತದಿಂದ ಗ್ರಾಮೀಣ್ ಡಾಕ್ ಸೇವಕ್ (GDS) ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ವೆಬ್​ಸೈಟ್: https://appost.in/gdsonline/ ಇದರಲ್ಲಿ ಅಪ್ಲೈ ಮಾಡಬಹುದು. ಅಭ್ಯರ್ಥಿಗಳು ಗಮನಿಸಬೇಕಾದ ಸಂಗತಿ ಏನೆಂದರೆ, ಬ್ರ್ಯಾಂಚ್ ಪೋಸ್ಟ್​ಮಾಸ್ಟರ್ (ಬಿಪಿಎಂ), ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್​ಮಾಸ್ಟರ್​ (ಎಬಿಪಿಎಂ) ಇವುಗಳಿಗೆ 2357 ಗ್ರಾಮೀಣ್ ಡಾಕ್​ ಸೇವಕ್, ಡಾಕ್​ ಸೇವಕ್ ಹುದ್ದೆಗಳಿವೆ ಎಂದು ಜುಲೈ 20, 2021ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. Live Notification ಸೆಕ್ಷನ್ ಅಡಿಯಲ್ಲಿ ಪಶ್ಷಿಮ ಬಂಗಾಲ (2357 ಹುದ್ದೆಗಳು) ಕ್ಲಿಕ್ ಮಾಡಬೇಕು. ಸಂಪೂರ್ಣ ಮಾಹಿತಿಯೊಂದಿಗೆ ಪಿಡಿಎಫ್ ಡೌನ್​ಲೋಡ್ ಆಗುತ್ತದೆ.

* ನೇಮಕಾತಿ ಪ್ರಕ್ರಿಯೆ ಆರಂಭದ ದಿನಾಂಕ: ಜುಲೈ 20, 2021 * ಅಪ್ಲೈ ಮಾಡಲು ಕೊನೆ ದಿನಾಂಕ: ಆಗಸ್ಟ್​ 19, 2021 * ಕೊನೆ ದಿನಾಂಕದ ನಂತರ ಬಂದ ಅರ್ಜಿಯನ್ನು ಪರಿಗಣಿಸುವುದಿಲ್ಲ

ಅರ್ಜಿಯನ್ನು ಹಾಕಿಕೊಳ್ಳುವುದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹಂತಹಂತವಾದ ಮಾಹಿತಿ ಇಲ್ಲಿ ನೀಡಲಾಗಿದೆ: 1. https://appost.in/gdsonline/ ಅಥವಾ https://indiapost.gov.in ಈ ಎರಡರಲ್ಲಿ ಒಂದು ಇಂಡಿಯಾ ಪೋಸ್ಟ್​ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. 2. ಆರಂಭದಲ್ಲಿ “Registration” ಲಿಂಕ್ ಮೇಲೆ ಕ್ಲಿಕ್ ಮಾಡಿ, ಒಂದು ಸೈಕಲ್​ಗೆ ಒಮ್ಮೆ ರಿಜಿಸ್ಟ್ರೇಷನ್ ಮಾಡ್ಯುಲ್​ನಲ್ಲಿ ನೋಂದಣಿ ಮಾಡಬೇಕು ಹಾಗೂ ವಿಶಿಷ್ಟ ನೋಂದಣಿ ಸಂಖ್ಯೆ ಪಡೆಯಬೇಕು. 3. ಆಧಾರ್ ಮಾಹಿತಿ, ಫೋನ್ ನಂಬರ್, ಜನ್ಮದಿನಾಂಕ, ಕೆಟಗಿರಿ ಮತ್ತು ಇತರ ಕಲಂಗಳನ್ನು ಭರ್ತಿ ಮಾಡಬೇಕು. 4. ನೀವು ಬೈಸಿಕಲ್ ಓಡಿಸಬಲ್ಲಿರಾ ಅಥವಾ ಉದ್ಯೋಗದಾತರ ನಿರಾಕ್ಷೇಪಣಾ ಪ್ರಮಾಣಪತ್ರ (NOC) ದೊರೆಯುತ್ತದೆಯೇ ಎಂಬಂಥ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. 5. UR/OBC/EWS ಕೆಟಗರಿ ಅಡಿಯಲ್ಲಿ ಬರುವವರು 100 ರೂಪಾಯಿ ಶುಲ್ಕ ಪಾವತಿಸಬೇಕು. ಈ ಕೆಟಗರಿ ವಿಭಾಗದ ಅಡಿಯಲ್ಲಿ ಬಾರದ ಇತರರಿಗೆ ಇಂಡಿಯಾ ಪೋಸ್ಟ್​ನಿಂದ ಶುಲ್ಕ ಇರುವುದಿಲ್ಲ. 6. ಹುದ್ದೆಯ ಆದ್ಯತೆಯನ್ನು ಸಲ್ಲಿಸಬೇಕು. 7. ಒಮ್ಮೆ ಪ್ರಿವ್ಯೂವ್ ಮಾಡಿ, ಆ ನಂತರ​ ಭವಿಷ್ಯದ ರೆಫರೆನ್ಸ್​ಗಾಗಿ ಪ್ರಿಂಟ್​ಔಟ್ ತೆಗೆದುಕೊಳ್ಳಿ. 8. ಈ ಹಂತಗಳನ್ನು ಮುಗಿಸಿದ ಮೇಲೆ ಅರ್ಜಿ ಸಲ್ಲಿಸಿದಂತಾಗುತ್ತದೆ.

ಅರ್ಹತಾ ಮಾನದಂಡಗಳು * ಅರ್ಜಿದಾರರ 18ರಿಂದ 40 ವರ್ಷ ವಯಸ್ಸಿನ ಮಧ್ಯ ಇರಬೇಕು * ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷದ ವಿನಾಯಿತಿ ಇರುತ್ತದೆ * ಹಿಂದುಳಿದ ವರ್ಗದವರಿಗೆ 3 ವರ್ಷ ವಿನಾಯಿತಿ ಇದೆ. * ಅಂಗವೈಕಲ್ಯ ಇರುವವರಿಗೆ (PwD) 10 ವರ್ಷದ ವಿನಾಯಿತಿ * ಅಂಗವೈಕಲ್ಯ (PwD) +ಒಬಿಸಿ ಅಡಿ ಬರುವವರಿಗೆ 13 ವರ್ಷ ವಿನಾಯಿತಿ * ಅಂಗವೈಕಲ್ಯ (PwD) +ಎಸ್ಸಿ/ಎಸ್ಟಿ ಅಡಿ ಬರುವವರಿಗೆ 15 ವರ್ಷ ವಿನಾಯಿತಿ ಸಿಗುತ್ತದೆ.

ಇದನ್ನೂ ಓದಿ: Indian Army Recruitment 2021: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ನೀಡಿದ ಭಾರತೀಯ ಸೇನೆ; 1 ಲಕ್ಷ ರೂ.ವರೆಗೂ ವೇತನ ಪಡೆಯಬಹುದು

(Indian Post Gramin Dak Sevak 2357 Posts Recruitment In West Bengal Circle)