Indian Army Recruitment 2021: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ನೀಡಿದ ಭಾರತೀಯ ಸೇನೆ; 1 ಲಕ್ಷ ರೂ.ವರೆಗೂ ವೇತನ ಪಡೆಯಬಹುದು

ಅರ್ಜಿ ತುಂಬಿದವರಿಗೆ ಲಿಖಿತ ಪರೀಕ್ಷೆ ಇರುತ್ತದೆ..ಸಂದರ್ಶನವನ್ನೂ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಎರಡು ಪೇಪರ್​ಗಳಿದ್ದು, ಒಟ್ಟಾರೆ 200 ಅಂಕ ಇರುತ್ತದೆ. ಎರಡೂ ಪೇಪರ್​ಗಳಿಗೆ ತಲಾ 2 ತಾಸು ಸಮಯ ಇರುತ್ತದೆ.

Indian Army Recruitment 2021: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ನೀಡಿದ ಭಾರತೀಯ ಸೇನೆ; 1 ಲಕ್ಷ ರೂ.ವರೆಗೂ ವೇತನ ಪಡೆಯಬಹುದು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jul 22, 2021 | 10:39 PM

ಭಾರತೀಯ ಟೆರಿಟೋರಿಯಲ್​ ಆರ್ಮಿ (The Territorial Army)  ವಿಭಾಗ ರಹಿತ ಅಧಿಕಾರಿಗಳ ಹುದ್ದೆಗಾಗಿ ಆನ್​ಲೈನ್​ (Online) ಮೂಲಕ ಅರ್ಜಿ ಆಹ್ವಾನ ಮಾಡಿವೆ. ಆಸಕ್ತರು ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್​ 20ರವರೆಗೆ ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಲೆಫ್ಟಿನೆಂಟ್​ ಶ್ರೇಣಿ (Lieutenant Rank)ಯಲ್ಲಿ ನೇಮಕ ಮಾಡಲಾಗುತ್ತದೆ ಮತ್ತು ಇವರಿಗೆ ನೀಡಲಾಗುವ ವೇತನ, ಭತ್ಯೆಗಳು, ಸವಲತ್ತುಗಳೆಲ್ಲ ಸಾಮಾನ್ಯ ಸೇನಾ ಅಧಿಕಾರಿಗಳಿಗೆ ಇರುವಂತೆ ಇರುತ್ತದೆ. ಹಾಗಿದ್ದಾಗ್ಯೂ ಟೆರಿಟೋರಿಯಲ್​ ಆರ್ಮಿಯ ವಿಭಾಗ ರಹಿತ ಅಧಿಕಾರಿಗಳು ಯಾವುದೇ ಒಂದು ಕೆಲಸಕ್ಕೆ ಸೀಮಿತರಾಗಿರುವುದಿಲ್ಲ.   

ಹುದ್ದೆ ನೇಮಕಾತಿಗೆ ಆಯ್ಕೆ ಆಗಬೇಕಾದರೆ ಪರೀಕ್ಷೆ ಲಿಖಿತವಾಗಿ ಬರೆಯಬೇಕು. ಸೆಪ್ಟೆಂಬರ್​ 26ರಂದು ಆಫ್​ಲೈನ್​ ಪರೀಕ್ಷೆ ನಡೆಯಲಿದ್ದು, ಕೊನೆಯಲ್ಲಿ ನೇಮಕಗೊಂಡ ಅಭ್ಯರ್ಥಿಗಳಿಗೆ 56, 100 ರಿಂದ 1,77,500 ರೂ .ನೀಡಲಾಗುತ್ತದೆ.

ಅರ್ಹತೆ ಏನಿರಬೇಕು? ಟೆರಿಟೋರಿಯಲ್​ ಆರ್ಮಿ ಕರೆದಿರುವ ವಿಭಾಗ ರಹಿತ ಅಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು. 18-42ರವರೆಗಿನ ವಯಸ್ಸಿನವರಿಗಷ್ಟೇ ಅವಕಾಶ. ಅರ್ಜಿ ತುಂಬಲು ಕೊನೇ ದಿನ 2021ರ ಆಗಸ್ಟ್​ 19.

ನೋಂದಣಿ ಪ್ರಕ್ರಿಯೆ ಹೀಗೆ.. 1. ಟೆರಿಟೋರಿಯಲ್​ ಆರ್ಮಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ. 2. ಹೋಂ ಪೇಜ್​​ನಲ್ಲಿ ಕಾಣಿಸುವ ಭೂ ಸೇನಾ ಅಧಿಕಾರಿ ನೇಮಕ ಸಂಬಂಧ ಲಿಂಕ್​ ಮೇಲೆ ಕ್ಲಿಕ್​ ಮಾಡಿ. 3. ನಿಮ್ಮ ಇ-ಮೇಲ್ ಐಡಿ, ಮೊಬೈಲ್​ ನಂಬರ್​ ಮತ್ತು ಅಲ್ಲಿ ಕೇಳುವ ಇತರ ಮಾಹಿತಿಯನ್ನು ನೀಡಿ ನೋಂದಣಿ ಮಾಡಿಕೊಳ್ಳಿ 4. ನೋಂದಣಿ ಸಂಖ್ಯೆ ಮತ್ತು ಪಾಸ್​ವರ್ಡ್​ ಜನರೇಟ್ ಆದ ಬಳಿಕ ನೀವು ನಿಮ್ಮ ಅರ್ಜಿ ತುಂಬುವ ಪ್ರಕ್ರಿಯೆ ಮುಂದುವರಿಸಿ. 5. ನಂತರ ಅದಕ್ಕೆ ಫೋಟೋ ಅಂಟಿಸಿ, ಸಹಿ ಮಾಡಿ. ಈ ಸ್ಕ್ಯಾನ್​ ಮಾಡಿದ ಕಾಪಿಯನ್ನು ಅಪ್​ಲೋಡ್ ಮಾಡಿ. 6. ಅರ್ಜಿಯೊಂದಿಗೆ 200 ರೂಪಾಯಿ ಕೂಡ ತುಂಬಬೇಕು. ದೃಢೀಕರಣ ಪುಟದ ಕಾಪಿಯನ್ನು ಡೌನ್​ಲೋಡ್ ಮಾಡಿಟ್ಟುಕೊಳ್ಳಿ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಇನ್ನು ಅರ್ಜಿ ತುಂಬಿದವರಿಗೆ ಲಿಖಿತ ಪರೀಕ್ಷೆ ಇರುತ್ತದೆ..ಸಂದರ್ಶನವನ್ನೂ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಎರಡು ಪೇಪರ್​ಗಳಿದ್ದು, ಒಟ್ಟಾರೆ 200 ಅಂಕ ಇರುತ್ತದೆ. ಎರಡೂ ಪೇಪರ್​ಗಳಿಗೆ ತಲಾ 2 ತಾಸು ಸಮಯ ಇರುತ್ತದೆ. ಅಭ್ಯರ್ಥಿಗಳು ಆಯ್ಕೆಯಾಗಬೇಕು ಎಂದರೆ ಪ್ರತಿ ಪೇಪರ್​ನಲ್ಲೂ ಶೇ.40ರಷ್ಟು ಅಂಕ ಗಳಿಸಬೇಕು.

ಇದನ್ನೂ ಓದಿ: ಸಂಸತ್ ಭವನದಲ್ಲಿ ವಾಜಪೇಯಿ, ಅಡ್ವಾಣಿ ಕಾರ್ಯನಿರ್ವಹಿಸುತ್ತಿದ್ದ ಕೊಠಡಿ ಈಗ ಜೆ.ಪಿ.ನಡ್ಡಾ ಕಚೇರಿ

Indian Territorial army invited online applications for the recruitment of non departmental officers

Published On - 2:53 pm, Tue, 20 July 21