ಸಂಸತ್ ಭವನದಲ್ಲಿ ವಾಜಪೇಯಿ, ಅಡ್ವಾಣಿ ಕಾರ್ಯನಿರ್ವಹಿಸುತ್ತಿದ್ದ ಕೊಠಡಿ ಈಗ ಜೆ.ಪಿ.ನಡ್ಡಾ ಕಚೇರಿ

ಇದುವರೆಗೆ ರಾಜ್ಯಸಭಾ ಸಂಸದ ಥಾವರ್‌ಚಂದ್ ಗೆಹಲೋತ್ ಅವರೊಂದಿಗೆ ಕೊಠಡಿ ಹಂಚಿಕೊಳ್ಳುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಈ ಕೊಠಡಿ ನೀಡಲಾಗಿದೆ.

ಸಂಸತ್ ಭವನದಲ್ಲಿ ವಾಜಪೇಯಿ, ಅಡ್ವಾಣಿ ಕಾರ್ಯನಿರ್ವಹಿಸುತ್ತಿದ್ದ ಕೊಠಡಿ ಈಗ ಜೆ.ಪಿ.ನಡ್ಡಾ ಕಚೇರಿ
ಜೆ.ಪಿ.ನಡ್ಡಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 20, 2021 | 2:40 PM

ದೆಹಲಿ: 17 ವರ್ಷಗಳ ನಂತರ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಅಧ್ಯಕ್ಷರು- ಈ ಮೂರು ನಾಮಫಲಕಗಳನ್ನು ಸಂಸತ್ ಭವನದ 4 ನೇ ಕೊಠಡಿಯಿಂದ ತೆಗೆದುಹಾಕಲಾಗಿದೆ. ಈ ಕೊಠಡಿಯನ್ನು ಜನತಾದಳ (ಯುನೈಟೆಡ್) 2004 ರಲ್ಲಿ ಎನ್‌ಡಿಎ ಬಳಕೆಗಾಗಿ ನೀಡಿತ್ತು. ಇದಾದ ನಂತರ ವಾಜಪೇಯಿ ಮತ್ತು ಅಡ್ವಾಣಿ ಇಬ್ಬರೂ ಬಿಜೆಪಿ ಸಂಸದೀಯ ಪಕ್ಷದ ಕಚೇರಿಯ ಪಕ್ಕದಲ್ಲಿರುವ ಕೋಣೆಯಲ್ಲಿ ಕುಳಿತುಕೊಳ್ಳಲು ಪ್ರಾರಂಭಿಸಿದರು.

ಕಳೆದ ಸಂಸತ್ತಿನ ಅಧಿವೇಶನದಲ್ಲಿ ಅಡ್ವಾಣಿ ಕೊಠಡಿ ಸಂಖ್ಯೆ 4ನ್ನು ಬಳಸುತ್ತಿದ್ದರು.

ಈಗ ಆ ಫಲಕ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದುವರೆಗೆ ರಾಜ್ಯಸಭಾ ಸಂಸದ ಥಾವರ್‌ಚಂದ್ ಗೆಹಲೋತ್ ಅವರೊಂದಿಗೆ ಕೊಠಡಿ ಹಂಚಿಕೊಳ್ಳುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಈ ಕೊಠಡಿ ನೀಡಲಾಗಿದೆ. ಗೆಹಲೋತ್ ಕೊಠಡಿಯನ್ನು ಈಗ ಪಿಯೂಷ್ ಗೋಯಲ್ ಅವರಿಗೆ ನೀಡಲಾಗಿದೆ.

ಇದನ್ನೂ ಓದಿ: Parliament Monsoon Session 2021: ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಬಗ್ಗೆ ವಿಪಕ್ಷಗಳ ಗದ್ದಲ, ಉಭಯ ಸದನಗಳ ಕಲಾಪ ಮುಂದೂಡಿಕೆ

(BJP chief JP Nadda gets the office of former PM late Atal Bihari Vajpayee at the Parliament)