ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು 1,200ಕ್ಕೂ ಹೆಚ್ಚು ವೃತ್ತ ಆಧಾರಿತ ಅಧಿಕಾರಿಗಳ (CBO) ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಡಿಸೆಂಬರ್ 29ರೊಳಗೆ ಇತ್ತೀಚಿನ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ CBO ನೇಮಕಾತಿ 2021: ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: https://sbi.co.in/web/careers/current-openingsಗೆ ತೆರಳಿ
ಹಂತ 2: ಈ ಮೊದಲು SBIನಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಈಗಾಗಲೇ ಅಸ್ತಿತ್ವದಲ್ಲಿರುವ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಬೇಕು. ಮತ್ತು ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ಮಾತ್ರ ನೋಂದಣಿ ಮಾಡಬೇಕು.
ಹಂತ 3: ಅರ್ಜಿ ನಮೂನೆಯಲ್ಲಿ ಸರಿಯಾದ ವಿವರಗಳನ್ನು ಸಲ್ಲಿಸಿ
ಹಂತ 4: ಅಪ್ಲಿಕೇಷನ್ ಪ್ರಕ್ರಿಯೆಯನ್ನು ಬರೆಯುವಾಗ ಅಭ್ಯರ್ಥಿಗಳು ತಮ್ಮ ಹೆಸರನ್ನು ಸರಿಯಾಗಿ ಗಮನಿಸಬೇಕು. ನಮೂದಿಸಿದ ಹೆಸರು ಅಗತ್ಯ ದಾಖಲೆಗಳೊಂದಿಗೆ ಹೊಂದಿಕೆಯಾಗಬೇಕು. ಹೆಸರಿನ ಕಾಗುಣಿತವು ಅಗತ್ಯ ದಾಖಲೆಗಳಿಗೆ ಹೊಂದಿಕೆ ಆಗದಿದ್ದರೆ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಡಿಬಾರ್ ಮಾಡಲಾಗುತ್ತದೆ. ಅಡ್ಮಿಟ್ ಕಾರ್ಡ್‌ನಲ್ಲಿ ಹೆಸರಿನ 35 ಅಕ್ಷರಗಳನ್ನು ಮಾತ್ರ ಮುದ್ರಿಸಲಾಗುತ್ತದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ CBO ನೇಮಕಾತಿ 2021: ಅರ್ಹತೆ
– ನೇಮಕಾತಿಗಳು 21 ಮತ್ತು 30 ವರ್ಷಗಳ ಮಧ್ಯದ ಪದವೀಧರರಿಗೆ
– ಅಭ್ಯರ್ಥಿಗಳು ಡಿಸೆಂಬರ್ 1, 2021ಕ್ಕೆ ಅನ್ವಯ ಆಗುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎರಡನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಯಾವುದೇ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಅಥವಾ ಯಾವುದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಎರಡು ವರ್ಷಗಳ ಅನುಭವವನ್ನು (ಅಗತ್ಯ ಶೈಕ್ಷಣಿಕ ಅರ್ಹತೆಯ ನಂತರದ ಅನುಭವ) ಹೊಂದಿರಬೇಕು.
– CBOಗಳ ಆಯ್ಕೆಯನ್ನು ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುತ್ತದೆ.
– ಆನ್‌ಲೈನ್ ಪರೀಕ್ಷೆಯನ್ನು ಜನವರಿಯಲ್ಲಿ ನಿಗದಿಪಡಿಸಲಾಗಿದೆ. ಪರೀಕ್ಷೆಯ ನಿಖರವಾದ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಪರೀಕ್ಷೆಯ ಪ್ರವೇಶ ಕಾರ್ಡ್‌ಗಳನ್ನು ಜನವರಿ 12ರಂದು ಬಿಡುಗಡೆ ಮಾಡಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ CBO ನೇಮಕಾತಿ 2021: ಪ್ರಮುಖ ದಿನಾಂಕಗಳು
– ನೋಂದಾಯಿಸಲು ಕೊನೆಯ ದಿನಾಂಕ: ಡಿಸೆಂಬರ್ 29, 2021
– ಆನ್‌ಲೈನ್ ಶುಲ್ಕ ಪಾವತಿ: ಡಿಸೆಂಬರ್ 9 ರಿಂದ 26, 2021
– ಅರ್ಜಿಗಳನ್ನು ಎಡಿಟ್ ಮಾಡಲು ಕೊನೆಯ ದಿನಾಂಕ: ಡಿಸೆಂಬರ್ 29, 2021
– ಆನ್‌ಲೈನ್ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: ಜನವರಿ 13, 2022
– ಎಸ್ಬಿಐ CBO ಪ್ರವೇಶ ಕಾರ್ಡ್: ಜನವರಿ 12, 2022 (ತಾತ್ಕಾಲಿಕ)
– ಎಸ್ಬಿಐ CBO ಪರೀಕ್ಷೆಯ ದಿನಾಂಕ: ಆ ನಂತರ ಪ್ರಕಟಿಸಲಾಗುವುದು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2021: ವಯಸ್ಸಿನ ಮಿತಿ
“01.12.2021ರಂತೆ 21 ವರ್ಷಕ್ಕಿಂತ ಕಡಿಮೆಯಿಲ್ಲದ ಮತ್ತು 30 ವರ್ಷಕ್ಕಿಂತ ಮೇಲ್ಪಟ್ಟಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂದರೆ ಅಭ್ಯರ್ಥಿಗಳು 01.12.2000ಕ್ಕಿಂತ ನಂತರ ಮತ್ತು 02.12.1991ಕ್ಕಿಂತ ಮುಂಚೆಯೇ ಜನಿಸಿರಬೇಕು (ಎರಡೂ ದಿನಗಳನ್ನು ಒಳಗೊಂಡಂತೆ).”
ಈ ನೇಮಕಾತಿ ಮೂಲಕ SBI 126 ಬ್ಯಾಕ್‌ಲಾಗ್ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 1,226 ಹುದ್ದೆಗಳನ್ನು ಭರ್ತಿ ಮಾಡುತ್ತದೆ.
ಇದನ್ನೂ ಓದಿ: Personal loan: ಎಸ್ಬಿಐ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲದ ಮೇಲೆ ವಿಶೇಷ ವಿನಾಯಿತಿ; ಪಡೆಯುವುದು ಹೇಗೆ?