ಕರ್ನಾಟಕದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆ ಇದೆ: ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ
ಪ್ರತಿಯೊಬ್ಬರಿಗೂ ಉದ್ಯೋಗ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಂದಿನ 4 ವರ್ಷಗಳ ಅವಧಿಯಲ್ಲಿ ಉದ್ಯೋಗ ಕೊಡ್ತೇವೆ ಎಂದು ಬೆಳಗಾವಿಯಲ್ಲಿ ಐಟಿ- ಬಿಟಿ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ಬೆಳಗಾವಿ: ಕರ್ನಾಟಕದಲ್ಲಿ ಮಹಿಳಾ ಸ್ವಸಹಾಯ ಬೆಳೆಯುತ್ತಿರುವುದು ಖುಷಿ ವಿಚಾರವಾಗಿದೆ. ಎಲ್ಲ ಕನ್ನಡಿಗರು ಗೌರವಪೂರ್ವಕವಾಗಿ ಕಾಯಕ ನಡೆಸಬೇಕು. ನಮ್ಮ ಸರ್ಕಾರದ ಮುಖ್ಯ ಉದ್ದೇಶವೇ ಇದು. ಇಡೀ ದೇಶದಲ್ಲಿ ತಲಾವಾರು ಆದಾಯದಲ್ಲಿ ಕರ್ನಾಟಕ ರಾಜ್ಯಕ್ಕೆ ಅಗ್ರಸ್ಥಾನ ಇದೆ. ಸುಮಾರು ಎರಡು ಲಕ್ಷದವರೆಗೂ ತಲಾವಾರು ಆದಾಯವಿದೆ. ಶೇಕಡಾ 30ರಷ್ಟು ಜನರಿಂದ ಮಾತ್ರ ತಲಾವಾರು ಹೆಚ್ಚಿಸುವ ಕೆಲಸ ಆಗುತ್ತಿದೆ. ನಿಮ್ಮ ಮೇಲೆ ಬಂಡವಾಳ ಹೂಡಿದರೆ ನಮಗೆ ವಾಪಸ್ ಬರುತ್ತೆ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ವಸ್ತು ಪ್ರದರ್ಶನ, ಮಾರಾಟ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮೊಮ್ಮಕ್ಕಳಿಗೆ ಕಾರು ಖರೀದಿಸಿದ್ದಾರೆ. ಮೊಮ್ಮಕ್ಕಳಿಗೆ ಆಟವಾಡಲು 2 ಕಾರು ಖರೀದಿಸಿದ್ದಾರೆ. 1 ಸಾವಿರ ರೂಪಾಯಿ ಕೊಟ್ಟು ಬೊಮ್ಮಾಯಿ ಕಾರು ಖರೀದಿ ಮಾಡಿದ್ದಾರೆ. ಸರ್ದಾರ್ ಮೈದಾನದಲ್ಲಿ ಆಯೋಜಿಸಿದ್ದ ಮಾರಾಟ ಮೇಳದಲ್ಲಿ ಅವರು ಭಾಗಿ ಆಗಿದ್ದಾರೆ.
ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ, ಮಾರಾಟ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ಕೂಡ ಭಾಗಿ ಆಗಿದ್ದಾರೆ. ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆ ಇದೆ. ಸದ್ಯದಲ್ಲಿ ಮುಖ್ಯಮಂತ್ರಿ ಇದನ್ನ ಉದ್ಘಾಟನೆ ಮಾಡಲಿದ್ದಾರೆ. ಪ್ರತಿಯೊಬ್ಬರಿಗೂ ಉದ್ಯೋಗ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಂದಿನ 4 ವರ್ಷಗಳ ಅವಧಿಯಲ್ಲಿ ಉದ್ಯೋಗ ಕೊಡ್ತೇವೆ ಎಂದು ಬೆಳಗಾವಿಯಲ್ಲಿ ಐಟಿ- ಬಿಟಿ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ನಾಳೆ ಕಾಂಗ್ರೆಸ್ ರಾಲಿ, ಪ್ರತಿಭಟನೆ ವಿಚಾರವಾಗಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಭಟನೆ ಮಾಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಸದನ ಕರೆದಿರುವುದು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು. ಅದರಿಂದ ಸಮಸ್ಯೆ ಬಗೆಹರಿಸಬಹುದೆಂಬುದು ನನ್ನ ಅನಿಸಿಕೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಮತಾಂತರಕ್ಕೊಂದು ಚೌಕಟ್ಟು ನಿಗದಿ ಮಾಡುವ ಬಗ್ಗೆ ಚರ್ಚೆ; ಸಿಎಂ ಬಸವರಾಜ ಬೊಮ್ಮಾಯಿ ಸಭೆ
ಇದನ್ನೂ ಓದಿ: Job Loss: ಝೂಮ್ ಮೀಟಿಂಗ್ನಲ್ಲೇ 900ಕ್ಕೂ ಹೆಚ್ಚು ಜನರ ಕೆಲಸ ಹೋಗುವ ಸುದ್ದಿ ಹೇಳಿದ ಸಿಇಒ; ಹೇಗಿದೆ ಉದ್ಯೋಗ ಮಾರುಕಟ್ಟೆ?