Court jobs: ರಾಮನಗರ ನ್ಯಾಯಾಲಯದಲ್ಲಿ ಎಸ್​ಎಸ್​​ಎಲ್​​ಸಿ ಪಾಸಾದವರಿಗೆ ನೂರಾರು ಹುದ್ದೆಗಳು, ನಾಳಿದ್ದೇ ಕೊನೆಯ ದಿನ, ಇಂದೇ ಅರ್ಜಿ ಹಾಕಿ

Ramanagara Court Recruitment 2024: ರಾಮನಗರ ಜಿಲ್ಲೆ ಮತ್ತು ಜಿಲ್ಲೆಯ ಮೂರು ತಾಲ್ಲೂಕುಗಳಿಂದ ಗೌರವಧನದ ಮೇರೆಗೆ (Scheme for Para-Legal Volunteers by National Legal Services Authority) ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ವರ್ಗೀಕರಣದನ್ವಯ ನಿಗಧಿತ ನಮೂನೆಯಲ್ಲಿ, ಇಚ್ಛೆಯ ಪತ್ರವನ್ನು ಒಳಗೊಂಡಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಾಲೂಕು ವರ್ಗೀಕರಣ ಹೀಗಿದೆ: ರಾಮನಗರ ತಾಲೂಕಿಗೆ -100, ಚನ್ನಪಟ್ಟಣ -25, ಕನಕಪುರ -25 ಮತ್ತು ಮಾಗಡಿ -25 ಹುದ್ದೆಗಳು.

Court jobs: ರಾಮನಗರ ನ್ಯಾಯಾಲಯದಲ್ಲಿ ಎಸ್​ಎಸ್​​ಎಲ್​​ಸಿ ಪಾಸಾದವರಿಗೆ ನೂರಾರು ಹುದ್ದೆಗಳು, ನಾಳಿದ್ದೇ ಕೊನೆಯ ದಿನ, ಇಂದೇ ಅರ್ಜಿ ಹಾಕಿ
ರಾಮನಗರದಲ್ಲಿ ಎಸ್​ಎಸ್​​ಎಲ್​​ಸಿ ಪಾಸಾದವರಿಗೆ ನೂರಾರು ಹುದ್ದೆಗಳು
Follow us
|

Updated on:Jul 18, 2024 | 12:21 PM

Temporary Legal Volunteers Recruitment: ಎಲ್ಲ ಜಿಲ್ಲೆಗಳ ನ್ಯಾಯಾಲಯಗಳಲ್ಲೂ ಈಗ ನೇಮಕಾತಿ ಪರ್ವ ನಡೆದಿದೆ. ನಾನಾ ಅರ್ಹತೆಯ ಮಾನದಂಡವಾಗಿ ನಾನಾ ಹುದ್ದೆಗಳಿಗೆ ನೇಮಕಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಳೆದ ವಾರ ತಿಳಿಸಿದಂತೆ 10 ಮತ್ತು 12 ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ18 ವರ್ಷ ಪೂರೈಸಿರಬೇಕು. ಬೆರಳಚ್ಚುಗಾರರು (Typist) 3 ಹುದ್ದೆ, ಬೆರಳಚ್ಚು ನಕಲುಗಾರರು (Typist-Copyist) 3 ಹುದ್ದೆ, ಆದೇಶ ಜಾರಿಕಾರರು (Process Server) 20 ಹುದ್ದೆ ಖಾಲಿ ಇದೆ. ಗಮನಿಸಿ- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಾಳೆಯೇ -19 ಜುಲೈ 2024.

ಇದೀಗ, ರಾಮನಗರ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರ (District Legal Services Authority Ramanagara) ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳಿಗೆ ಅರೆಕಾಲಿಕ ಕಾನೂನು ಸ್ವಯಂಸೇವಕರ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಜಿಲ್ಲೆಯಲ್ಲಿ 175 ಹುದ್ದೆಗಳ ಭರ್ತಿಗೆ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತೆಗಳು, ಅರ್ಜಿಗೆ ಪ್ರಮುಖ ದಿನಾಂಕಗಳು, ಇನ್ನಿತರೆ ಮುಖ್ಯ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಅಂದಹಾಗೆ ಅರ್ಜಿಯನ್ನು ನಾಳಿದ್ದು ಶನಿವಾರ (ಇದೇ ಜುಲೈ 20) ಸಂಜೆ 05-00 ಗಂಟೆಯೊಳಗಾಗಿ ಸಲ್ಲಿಸಬೇಕು.

ಇದನ್ನೂ ಓದಿ: ADA Bangalore Recruitment 2024: ಎಡಿಎ ಬೆಂಗಳೂರು ಎಂಜಿನಿಯರಿಂಗ್​ ಪದವೀಧರರ ಆಯ್ಕೆ, ನೇರ ಸಂದರ್ಶನ ವಿವರ ಇಲ್ಲಿದೆ

ರಾಮನಗರ ಜಿಲ್ಲೆ ಮತ್ತು ಜಿಲ್ಲೆಯ ಮೂರು ತಾಲ್ಲೂಕುಗಳಿಂದ ಗೌರವಧನದ ಮೇರೆಗೆ (Scheme for Para-Legal Volunteers by National Legal Services Authority) ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ವರ್ಗೀಕರಣದನ್ವಯ ನಿಗಧಿತ ನಮೂನೆಯಲ್ಲಿ, ಇಚ್ಛೆಯ ಪತ್ರವನ್ನು ಒಳಗೊಂಡಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಾಲೂಕು ವರ್ಗೀಕರಣ ಹೀಗಿದೆ: ರಾಮನಗರ ತಾಲೂಕಿಗೆ -100, ಚನ್ನಪಟ್ಟಣ -25, ಕನಕಪುರ -25 ಮತ್ತು ಮಾಗಡಿ -25 ಹುದ್ದೆಗಳು.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕನಿಷ್ಠ ಪಕ್ಷ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಯಾವುದೇ ಕ್ರಿಮಿನಲ್ ಅಪರಾಧದ ಹಿನ್ನೆಲೆಯುಳ್ಳವರಾಗಿರಬಾರದು.

ಇದನ್ನೂ ಓದಿ: National Housing Bank Recruitment 2024: ಮ್ಯಾನೇಜರ್, ಎಕಾನಮಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ

ಶಿಕ್ಷಕರು (ನಿವೃತ್ತ ಶಿಕ್ಷಕರು ಸೇರಿ), ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರಿಕರು, ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು, ರಾಜಕೀಯೇತರ ಸಂಘಗಳು, ಮಹಿಳಾ ಸ್ವಸಹಾಯ ಸಂಘಗಳು, ಮೈತ್ರಿ ಸಂಘಗಳು, ಉತ್ತಮ ನಡತೆಯುಳ್ಳ ಹೆಚ್ಚಿನ ಅವಧಿ ಕಾರಾಗೃಹದಲ್ಲಿ ಕಳೆಯುತ್ತಿರುವ ವಿದ್ಯಾವಂತ ಅಪರಾಧಿಗಳು, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅರೆಕಾಲಿಕ ಕಾನೂನು ಸ್ವಯಂ ಸೇವಕರೆಂದು ನಿರ್ಧರಿಸುವ ಇತರೆ ಯಾವುದೇ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ? ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ನ್ಯಾಯಾಲಯ ಆವರಣ ರಾಮನಗರ – 562159

ಕಾನೂನು ಸ್ವಯಂಸೇವಕರ ನೇಮಕಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಇದನ್ನು ಆದ್ಯವಾಗಿ ಗಮನಿಸಿ:

* ಮೇಲ್ಕಂಡ ನೇಮಕಾತಿ ತಾತ್ಕಾಲಿಕ. * ಕೇವಲ ಗೌರವಧನದ ಆಧಾರದ ಮೇಲೆ 3 ವರ್ಷದ ಅವಧಿಗೆ ಮಾತ್ರ ನೇಮಕಾತಿ /ನಿಯೋಜನೆ ಮಾಡಲಾಗುವುದು. * ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ. * ಅಭ್ಯರ್ಥಿಗಳಿಗೆ ಸದರಿ ಹುದ್ದೆಗಳಲ್ಲಿ ಮುಂದುವರೆಸುವ ಬಗ್ಗೆಯಾಗಲಿ, ಖಾಯಂ ಮಾಡಿಕೊಳ್ಳುವ ಬಗ್ಗೆಯಾಗಲಿ ಈ ಪ್ರಾಧಿಕಾರ ಯಾವುದೇ ಆಶ್ವಾಸನೆ ನೀಡುವುದಿಲ್ಲ. * ಹಾಗೂ ಆ ಬಗ್ಗೆ ಯಾವುದೇ ಹಕ್ಕು ಮಂಡಿಸಲು ಅಭ್ಯರ್ಥಿಗಳಿಗೆ ಅರ್ಹತೆ ಇರುವುದಿಲ್ಲ.

ಇನ್ನಷ್ಟು  ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:37 am, Thu, 18 July 24

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?