AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8ನೇ ತರಗತಿ ಪಾಸಾಗಿದ್ದೀರಾ? ಹಾಗಿದ್ರೆ ಇಲ್ಲಿದೆ ಉದ್ಯೋಗಾವಕಾಶಗಳು

Territorial Army Recruitment 2024: ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಅದರಲ್ಲೂ 8ನೇ ತರಗತಿಯಲ್ಲಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

8ನೇ ತರಗತಿ ಪಾಸಾಗಿದ್ದೀರಾ? ಹಾಗಿದ್ರೆ ಇಲ್ಲಿದೆ ಉದ್ಯೋಗಾವಕಾಶಗಳು
Territorial Army Recruitment
ಝಾಹಿರ್ ಯೂಸುಫ್
|

Updated on: Oct 21, 2024 | 2:37 PM

Share

ಭಾರತೀಯ ಸೇನೆಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಪ್ರಾದೇಶಿಕ ಸೇನಾ ವಿಭಾಗದಲ್ಲಿನ 340 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ನೇರ ಸಂದರ್ಶನದ ಮೂಲಕ ಈ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

  • ಸಂಸ್ಥೆಯ ಹೆಸರು : ಟೆರಿಟೋರಿಯಲ್ ಆರ್ಮಿ
  • ಹುದ್ದೆಗಳ ಸಂಖ್ಯೆ: 340
  • ಉದ್ಯೋಗ ಸ್ಥಳ: ಭಾರತ
  • ಹುದ್ದೆಗಳ ಹೆಸರು: ಸೋಲ್ಜರ್ ಜನರಲ್ ಡ್ಯೂಟಿ, ಕ್ಲರ್ಕ್

ಹುದ್ದೆಗಳ ವಿವರಗಳು:

 ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಸೈನಿಕ (ಸಾಮಾನ್ಯ ಕರ್ತವ್ಯ) 274
ಸೈನಿಕ (ಗುಮಾಸ್ತ) 20
ಸೈನಿಕ (ಚೆಫ್) 17
ಸೈನಿಕ (ಚೆಫ್ Spl) 1
ಸೈನಿಕ (ಕುಕ್ ಮೆಸ್) 1
ಸೈನಿಕ (ಕೇಶ ವಿನ್ಯಾಸಕಿ) 11
ಸೈನಿಕ (ಹೌಸ್ ಕೀಪರ್) 14
ಸೈನಿಕ (ಸಲಕರಣೆ ದುರಸ್ತಿ) 1
ಸೈನಿಕ (ಮಸಾಲ್ಚಿ) 1

ಶೈಕ್ಷಣಿಕ ಅರ್ಹತೆ:

ಹುದ್ದೆಗಳ ಹೆಸರು ಅರ್ಹತೆ
ಸೈನಿಕ (ಸಾಮಾನ್ಯ ಕರ್ತವ್ಯ) 10ನೇ ತರಗತಿ ಪಾಸ್ ಆಗಿರಬೇಕು.
ಸೈನಿಕ (ಗುಮಾಸ್ತ) 12ನೇ ತರಗತಿ ಪಾಸ್ ಆಗಿರಬೇಕು.
ಸೈನಿಕ ವ್ಯಾಪಾರಿಗಳು 10ನೇ ತರಗತಿ ಪಾಸ್ ಆಗಿರಬೇಕು.
ಸೋಲ್ಜರ್ ಟ್ರೇಡ್ಸ್‌ಮೆನ್ (ಹೌಸ್ ಕೀಪರ್ ಮತ್ತು ಮೆಸ್ ಕೀಪರ್) 8ನೇ ತರಗತಿ ಪಾಸ್ ಆಗಿರಬೇಕು.

ವಯೋಮಿತಿ:

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೆಯೇ ಗರಿಷ್ಠ 42 ವರ್ಷಗಳನ್ನು ಮೀರಿರಬಾರದು.

ಆಯ್ಕೆ ಪ್ರಕ್ರಿಯೆ:

  • ನೇರ ಸಂದರ್ಶನ, ದಾಖಲೆ ಪರಿಶೀಲನೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:

  • ನವೆಂಬರ್ 27 ರಂದು ಈ ನೇಮಕಾತಿಯ ನೇರ ಸಂದರ್ಶನ ನಡೆಯಲಿದೆ.

ಸಂದರ್ಶನ ನಡೆಯುವ ಸ್ಥಳಗಳ ವಿಳಾಸ:

  • ಉತ್ತರಾಖಂಡ್ ವಿಳಾಸ: 111 Infantry Batalion (TA) KUMAON, 151 Infantry Batalion (TA) JAT, 151 Infantry Batallion (TA) DOGRA: Pithoragarh Military Station, (Uttarakhand), Pin-262501
  • ಬಿಹಾರ್ ವಿಳಾಸ: 120 Infantry Batalion (TA) BIHAR, 114 Infantry Batalion (TA) JAT: BIHAR Regimental Centre, Danapur (Bihar), Pin-801503
  • ಮಧ್ಯಪ್ರದೇಶ್ ವಿಳಾಸ: 108 Infantry Batalion (TA) MAHAR, 155 Infantry Batalion (TA) JAK RIF: MAHAR Regimental Centre, Sagar (Madhya Pradesh), Pin-470001

ಇದನ್ನೂ ಓದಿ: ಸರ್ಕಾರಿ ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಪ್ರಮುಖ ಲಿಂಕ್‌ಗಳು: