TMC Recruitment 2022: ಟಾಟಾ ಮೆಮೋರಿಯಲ್ ಸೆಂಟರ್ (TMC) ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಸೇರಿದಂತೆ ವಿವಿಧ ಅಧ್ಯಾಪಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಟಾಟಾ ಸ್ಮಾರಕ ಕೇಂದ್ರದಲ್ಲಿ ಒಟ್ಟು 23 ಹುದ್ದೆಗಳು ಖಾಲಿ ಇವೆ. ವಾರಣಾಸಿಯ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ / ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವಿಯಾ ಕ್ಯಾನ್ಸರ್ ಕೇಂದ್ರದಲ್ಲಿರುವ ಖಾಲಿ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಈ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಫ್ಯಾಕಲ್ಟಿ ನೇಮಕಾತಿಗಾಗಿ, ಅಭ್ಯರ್ಥಿಗಳು ಆಯಾ ವಿಭಾಗದಲ್ಲಿ MD/DNB ಮಾಡಿರಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ tmc.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಯ ವಿವರಗಳು:
ಸಹಾಯಕ ವೈದ್ಯಕೀಯ ಅಧೀಕ್ಷಕರು – 2 ಹುದ್ದೆಗಳು
ಸಹಾಯಕ ಪ್ರಾಧ್ಯಾಪಕರು – 17 ಹುದ್ದೆಗಳು
ಪ್ರಾಧ್ಯಾಪಕರು – 3 ಹುದ್ದೆಗಳು
ವಿದ್ಯಾರ್ಹತೆ:
ಸಹಾಯಕ ವೈದ್ಯಕೀಯ ಅಧೀಕ್ಷಕರು – MD ಆಸ್ಪತ್ರೆ ಆಡಳಿತ, PG ನಂತರ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಕನಿಷ್ಠ ಒಂದು ವರ್ಷದ ಅನುಭವ. ಅಥವಾ MBBS/BDS/BAMS ಜೊತೆಗೆ ಆಸ್ಪತ್ರೆ ಆಡಳಿತದಲ್ಲಿ ಪೂರ್ಣ ಸಮಯದ PG ಪದವಿ ಮಾಡಿರಬೇಕು.
ಸಹಾಯಕ ಪ್ರಾಧ್ಯಾಪಕರು – ಸಂಬಂಧಿತ ಕ್ಷೇತ್ರದಲ್ಲಿ MD/DNB ಅಥವಾ ಅದರ ಸಮಾನ ವೃತ್ತಿಯನ್ನು ಮಾಡಿರಬೇಕು.
ಪ್ರೊಫೆಸರ್ – MD/DNB ನಂತರ 13 ವರ್ಷಗಳ ಅನುಭವದೊಂದಿಗೆ ಸಂಬಂಧಿತ ವಿಭಾಗದಲ್ಲಿ MD/DNB ಮಾಡಿರಬೇಕು.
ವೇತನ:
ಸಹಾಯಕ ವೈದ್ಯಕೀಯ ಅಧೀಕ್ಷಕರು- 15600 ರಿಂದ 39100 ರೂ. + + 6600 ರೂ. ಗ್ರೇಡ್ ಪೇ
ಸಹಾಯಕ ಪ್ರಾಧ್ಯಾಪಕ- 15600 ರಿಂದ 39100 ರೂ. + 7600 ರೂ. ಗ್ರೇಡ್ ಪೇ
ಪ್ರಾಧ್ಯಾಪಕರು- 37400 ರಿಂದ 67000 ರೂ. + 8900 ರೂ. ಗ್ರೇಡ್ ಪೇ
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜೂನ್ 11, 2022
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.