UAS Dharwad Recruitment 2025: ಧಾರವಾಡದ ಕೃಷಿ ವಿಜ್ಞಾನ ವಿವಿಯಲ್ಲಿ ಸೀನಿಯರ್​​​ ರಿಸರ್ಚ್​​​ ಫೆಲೋ ಹುದ್ದೆಗೆ ನೇಮಕಾತಿ

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಸೀನಿಯರ್ ರಿಸರ್ಚ್ ಫೆಲೋ (SRF) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಎಂ.ಎಸ್ಸಿ ಮತ್ತು ಪಿಎಚ್‌ಡಿ ಪದವಿಯನ್ನು ಹೊಂದಿರುವವರು ಈ ಹುದ್ದೆಗೆ ಅರ್ಹರಾಗಿರುತ್ತಾರೆ. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿದೆ. ಆಗಸ್ಟ್ 12 ರಂದು ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ತಪ್ಪದೇ ಭಾಗಿಯಾಗಿ.

UAS Dharwad Recruitment 2025: ಧಾರವಾಡದ ಕೃಷಿ ವಿಜ್ಞಾನ ವಿವಿಯಲ್ಲಿ ಸೀನಿಯರ್​​​ ರಿಸರ್ಚ್​​​ ಫೆಲೋ ಹುದ್ದೆಗೆ ನೇಮಕಾತಿ
ಧಾರವಾಡದ ಕೃಷಿ ವಿಜ್ಞಾನ ವಿವಿ

Updated on: Aug 01, 2025 | 1:07 PM

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಅಧಿಕೃತ ಅಧಿಸೂಚನೆ ಮೂಲಕ ಸೀನಿಯರ್​​​ ರಿಸರ್ಚ್​​​ ಫೆಲೋ (SRF) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಧಾರವಾಡಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳುಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 12 ರಂದು ನಡೆಯುವ ನೇರ ಸಂದರ್ಶನದಲ್ಲಿ ಹಾಜರಾಗಬೇಕು.

ಧಾರವಾಡದ ಯುಎಎಸ್ ಹುದ್ದೆಯ ಅಧಿಸೂಚನೆ:

  • ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ
  • ಹುದ್ದೆಗಳ ಸಂಖ್ಯೆ: 01
  • ಉದ್ಯೋಗ ಸ್ಥಳ: ಧಾರವಾಡ
  • ಹುದ್ದೆಯ ಹೆಸರು: ಸೀನಿಯರ್​​​ ರಿಸರ್ಚ್​​​ ಫೆಲೋ (SRF)
  • ವೇತನ: ತಿಂಗಳಿಗೆ ರೂ.37000-42000/-

ಅರ್ಹತಾ ವಿವರಗಳು:

  • ಶೈಕ್ಷಣಿಕ ಅರ್ಹತೆ: ಧಾರವಾಡ ವಿಶ್ವವಿದ್ಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂ.ಎಸ್ಸಿ , ಪಿಎಚ್‌ಡಿ ಪೂರ್ಣಗೊಳಿಸಿರಬೇಕು .
  • ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಇದನ್ನೂ ಓದಿಬ್ಯಾಂಕ್ ಆಫ್ ಬರೋಡಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ

ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದಲ್ಲಿ ಅದರಲ್ಲೂ ಧಾರವಾಡದಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿಆಗಸ್ಟ್  12 ರಂದು ಬೆಳಿಗ್ಗೆ 10:30 ಕ್ಕೆ ನಡೆಯುವ ನೇರ ಸಂದರ್ಶನದಲ್ಲಿ  ಹಾಜರಾಗಬಹುದು.

ಸಂದರ್ಶನ ನಡೆಯುವ ಸ್ಥಳ: ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾಲಯ, ಧಾರವಾಡ 

ಅಧಿಕೃತ ಅಧಿಸೂಚನೆಯ PDF ಇಲ್ಲಿದೆ: 01-Senior-Research-Fellow-SRF-Post-Advt-Details-Application-Form-UAS-Dharwad

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Fri, 1 August 25