AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC Result 2025: UPSC ಪ್ರಿಲಿಮ್ಸ್ ಫಲಿತಾಂಶ ಶೀಘ್ರದಲ್ಲೇ ಬಿಡುಗಡೆ; ಈ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ

ಯುಪಿಎಸ್ಸಿ 2025ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಜೂನ್ ಎರಡನೇ ವಾರದೊಳಗೆ ನಿರೀಕ್ಷಿಸಲಾಗಿದೆ. ಫಲಿತಾಂಶವನ್ನು upsconline.gov.in ನಲ್ಲಿ ಪರಿಶೀಲಿಸಬಹುದು. ಮೇ 25ರಂದು ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ. ಯುಪಿಎಸ್ಸಿ ಹೊಸ ಪೋರ್ಟಲ್ upsconline.nic.in ಅನ್ನು ಸಹ ಪ್ರಾರಂಭಿಸಿದೆ.

UPSC Result 2025: UPSC  ಪ್ರಿಲಿಮ್ಸ್ ಫಲಿತಾಂಶ ಶೀಘ್ರದಲ್ಲೇ ಬಿಡುಗಡೆ; ಈ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ
Upsc Cse Prelims 2025 Result
ಅಕ್ಷತಾ ವರ್ಕಾಡಿ
|

Updated on:Jun 05, 2025 | 3:20 PM

Share

ಕೇಂದ್ರ ಲೋಕಸೇವಾ ಆಯೋಗ(UPSC) 2025 ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಇದರ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಜೂನ್ ಎರಡನೇ ವಾರದೊಳಗೆ ಫಲಿತಾಂಶ ಬಿಡುಗಡೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಯುಪಿಎಸ್‌ಸಿ ಸಾಮಾನ್ಯವಾಗಿ ಪರೀಕ್ಷೆಯ 15 ದಿನಗಳಲ್ಲಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸುತ್ತದೆ. ಕಳೆದ ವರ್ಷದ ಬಗ್ಗೆ ಹೇಳುವುದಾದರೆ, ಪರೀಕ್ಷೆಯನ್ನು ಜೂನ್ 16 ರಂದು ನಡೆಸಲಾಯಿತು ಮತ್ತು ಫಲಿತಾಂಶವನ್ನು ಜುಲೈ 1 ರಂದು ಬಿಡುಗಡೆ ಮಾಡಲಾಯಿತು.

ಅದೇ ರೀತಿ, 2023 ರಲ್ಲಿಯೂ ಸಹ UPSC CSE ಪೂರ್ವಭಾವಿ ಪರೀಕ್ಷೆಯನ್ನು ಮೇ 28 ರಂದು ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಜೂನ್ 12 ರಂದು ಘೋಷಿಸಲಾಯಿತು. ಈ ಮಾದರಿಯ ಆಧಾರದ ಮೇಲೆ, ಈ ವರ್ಷ ಪೂರ್ವಭಾವಿ ಫಲಿತಾಂಶವನ್ನು ಜೂನ್ 14 ರೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಫಲಿತಾಂಶವನ್ನು ಪರೀಶಿಲಿಸುವುದು ಹೇಗೆ?

  • ಮೊದಲು UPSC ಯ ಅಧಿಕೃತ ವೆಬ್‌ಸೈಟ್ upsconline.gov.in ಗೆ ಹೋಗಿ.
  • ನಂತರ ಮುಖಪುಟದಲ್ಲಿ ‘UPSC CSE ಪ್ರಿಲಿಮ್ಸ್ 2025 ಫಲಿತಾಂಶ’ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅದರ ನಂತರ ಯಶಸ್ವಿ ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿರುವ PDF ಫೈಲ್ ತೆರೆಯುತ್ತದೆ.ಅದರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ವಿವರ ಇದೆ.
  • ಭವಿಷ್ಯದ ಬಳಕೆಗಾಗಿ ಫಲಿತಾಂಶದ PDF ಅನ್ನು ಡೌನ್‌ಲೋಡ್ ಮಾಡಿ

ಪರೀಕ್ಷೆ ಯಾವಾಗ ನಡೆಯಿತು?

UPSC CSE ಪ್ರಿಲಿಮ್ಸ್ ಪರೀಕ್ಷೆಯನ್ನು ಮೇ 25 ರಂದು ಎರಡು ಅವಧಿಗಳಲ್ಲಿ ನಡೆಸಲಾಯಿತು ಮತ್ತು ಪ್ರತಿ ಅವಧಿಯು ಎರಡು ಗಂಟೆಗಳಾಗಿತ್ತು. ಅಭ್ಯರ್ಥಿಗಳು ಈಗ UPSC ಪ್ರಿಲಿಮ್ಸ್ GS ಪೇಪರ್ 1 ಮತ್ತು GS ಪೇಪರ್ 2 ಪಿಡಿಎಫ್ ಅನ್ನು ಅಧಿಕೃತ ವೆಬ್‌ಸೈಟ್ upsc.gov.in ಮೂಲಕ ಡೌನ್‌ಲೋಡ್ ಮಾಡಬಹುದು. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು UPSC ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.

ಯುಪಿಎಸ್ಸಿ ಹೊಸ ಪೋರ್ಟಲ್ ಪ್ರಾರಂಭ:

ಅಭ್ಯರ್ಥಿಗಳಿಗೆ ನೋಂದಣಿ ಸೌಲಭ್ಯವನ್ನು ಇನ್ನಷ್ಟು ಸುಧಾರಿಸಲು UPSC ಹೊಸ ಪೋರ್ಟಲ್ upsconline.nic.in ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮಾತ್ರವಲ್ಲದೆ ತಮ್ಮ ಫಲಿತಾಂಶಗಳನ್ನು ಇಲ್ಲಿ ಪರಿಶೀಲಿಸಲು ಸಹ ಸಾಧ್ಯವಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Thu, 5 June 25