UPSC Recruitment 2021: ಕೇಂದ್ರ ಲೋಕಸೇವಾ ಆಯೋಗದಿಂದ 46 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ವಿವರ ಇಲ್ಲಿದೆ

| Updated By: Lakshmi Hegde

Updated on: Jul 26, 2021 | 6:24 PM

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 25 ರೂಪಾಯಿ ಶುಲ್ಕ ನೀಡಬೇಕು. ಎಸ್​ಬಿಐನ ಯಾವುದೇ ಶಾಖೆಗಳ ಮೂಲಕ ನಗದು ರವಾನಿಸಬಹುದು. ಇಲ್ಲವೇ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​, ನೆಟ್​ ಬ್ಯಾಂಕಿಂಗ್​ ಮೂಲಕವೂ ಹಣ ನೀಡಬಹುದು.

UPSC Recruitment 2021: ಕೇಂದ್ರ ಲೋಕಸೇವಾ ಆಯೋಗದಿಂದ 46 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ವಿವರ ಇಲ್ಲಿದೆ
ಕೇಂದ್ರ ಲೋಕಸೇವಾ ಆಯೋಗ
Follow us on

ಕೇಂದ್ರ ಲೋಕಸೇವಾ ಆಯೋಗ (UPSC) ಹಲವು ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ, ಅರ್ಜಿ ಆಹ್ವಾನ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಗೃಹ ಸಚಿವಾಲಯ, ಕೃಷಿ ಇಲಾಖೆ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳಿಂದ ಒಟ್ಟು 46 ಹುದ್ದೆಗಳು ಖಾಲಿ ಇದ್ದು, ಉದ್ಯೋಗಾಕಾಂಕ್ಷಿಗಳು upsc.gov.in. ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 7ನೇ ವೇತನ ಆಯೋಗದ ನಿಯಮಗಳ ಆಧಾರದ ಮೇಲೆ ಸಂಬಳ ನೀಡಲಾಗುತ್ತದೆ. ಈ 46 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ನಿರ್ದಿಷ್ಟ ಅರ್ಹತೆಗಳು ಇರಬೇಕಾಗುತ್ತದೆ. ಸರಿಯಾಗಿ ಎಲ್ಲ ವಿಷಯಗಳನ್ನೂ ಸೂಕ್ತವಾಗಿ, ಶಿಸ್ತಿನಿಂದ ತುಂಬಿದ ಅಭ್ಯರ್ಥಿಗಳ ಅರ್ಜಿಗಳನ್ನು ಮಾತ್ರ ಸಂದರ್ಶನ ಸುತ್ತಿಗೆ ಪರಿಗಣಿಸಲಾಗುತ್ತದೆ. ಹಾಗೇ UPSC ನೇಮಕಾತಿಗೆ ಸಂಬಂಧಪಟ್ಟ ಇನ್ನಷ್ಟು ವಿವರಗಳನ್ನು ವೆಬ್​ಸೈಟ್​ಗೆ ಹೋಗಿ ಓದಿಕೊಳ್ಳಬಹುದು. ನಿಮ್ಮ ಅರ್ಜಿಯನ್ನೂ ಅಲ್ಲಿಯೇ ಸಬ್​ಮಿಟ್ ಮಾಡಬಹುದು.

ಆಸಕ್ತರು ಆಗಸ್ಟ್​ 12ರೊಳಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯ ಪ್ರತಿಯನ್ನು ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ಕಡ್ಡಾಯವಾಗಿ ತೆಗೆದುಕೊಂಡುಬರಬೇಕಾಗುತ್ತದೆ. ಅದರಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯಲ್ಲಿ ಕೇಂದ್ರ ರಸಗೊಬ್ಬರ ಗುಣಮಟ್ಟ ನಿಯಂತ್ರ ಮತ್ತು ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕ ಹುದ್ದೆ ಖಾಲಿ ಇದೆ. ಇಲ್ಲಿ ಮೂವರಿಗೆ ಅವಕಾಶ ಇದೆ. ಹಾಗೇ ಇದೇ ಇಲಾಖೆಯ ಸಸ್ಯ ಸಂರಕ್ಷಣಾ ನಿರ್ದೇಶನಾಲಯದಲ್ಲಿ 1 ಸಹಾಯಕ ನಿರ್ದೇಶಕನ ಹುದ್ದೆ ಖಾಲಿ ಇದೆ. ಹಾಗೇ ಗೃಹ ಇಲಾಖೆಯಲ್ಲಿ ರಿಸರ್ಚ್​ ಅಧಿಕಾರಿಯ ಹುದ್ದೆಯ ಸ್ಥಾನಕ್ಕೆ 8 ವೆಕೆನ್ಸಿ ಇದೆ. ಇನ್ನುಳಿದಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆಯಲ್ಲಿ ಭಾರತೀಯ ಮಾಹಿತಿ ಸೇವೆಯ ಹಿರಿಯ ಶ್ರೇಣಿ(Senior Grade of Indian Information Service) ಹುದ್ದೆಯಲ್ಲಿ ಒಟ್ಟು 34 ವೆಕೆನ್ಸಿ ಇದೆ.

ಬೇರೆಬೇರೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದವರಿಗೆ ಒಂದಷ್ಟು ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಅದರ ಬಗ್ಗೆ UPSC ವೆಬ್​ಸೈಟ್​ನಲ್ಲಿ ಮಾಹಿತಿ ಲಭ್ಯವಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಮಾತ್ರ ಕಳಿಸಲು ಸೂಚಿಸಲಾಗಿದೆ.

ಶುಲ್ಕದ ವಿವರ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 25 ರೂಪಾಯಿ ಶುಲ್ಕ ನೀಡಬೇಕು. ಎಸ್​ಬಿಐನ ಯಾವುದೇ ಶಾಖೆಗಳ ಮೂಲಕ ನಗದು ರವಾನಿಸಬಹುದು. ಇಲ್ಲವೇ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​, ನೆಟ್​ ಬ್ಯಾಂಕಿಂಗ್​ ಮೂಲಕವೂ ಹಣ ನೀಡಬಹುದು. ಇನ್ನು SC/ST/PwBD/ ಸಮುದಾಯದವರು ಮತ್ತು ಯಾವುದೇ ಸಮುದಾಯದ ಮಹಿಳೆಯರು ಶುಲ್ಕ ನೀಡುವ ಅಗತ್ಯವಿಲ್ಲ. ಉಳಿದಂತೆ ಜನರಲ್​, ಒಬಿಸಿ, ಇಡಬ್ಲ್ಯೂಎಸ್​​ ಸಮುದಾಯಗಳ ಪುರುಷರು 25 ರೂ.ತುಂಬಲೇಬೇಕಾಗಿದೆ.

ಇದನ್ನೂ ಓದಿ: ಜಯಂತಿ ನಿಧನಕ್ಕೆ ಕಂಬನಿ ಮಿಡಿದ ಪುನೀತ್​ ರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್

UPSC Recruitment 2021 Apply for 46 posts through UPSC Website